ಒನ್‌ಪ್ಲಸ್ 5T ಕ್ಯಾಮೆರಾವನ್ನು ಮೀರಿಸುವ ನೋಕಿಯಾ ಡ್ಯುಯಲ್ ಕ್ಯಾಮೆರಾ ಫೋನ್..!

|

ನೋಕಿಯ ಆಂಡ್ರಾಯ್ಡ್ ಫೋನ್‌ ಗಳು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿದ್ದು, ಬಜೆಟ್ ಬೆಲೆಯಿಂದ ಹಿಡಿದು ಟಾಪ್ ಎಂಡ್ ವರೆಗೂ ವಿವಿಧ ಬೆಲೆಗಳಲ್ಲಿ ದೊರೆಯುತ್ತಿವೆ. ಇದೆ ಹಿನ್ನಲೆಯಲ್ಲಿ ನೋಕಿಯಾ ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ ಫೋನ್ ವೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಮೂಲಗಳ ಪ್ರಕಾರ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎನ್ನಲಾಗಿದೆ.

ಒನ್‌ಪ್ಲಸ್ 5T ಕ್ಯಾಮೆರಾವನ್ನು ಮೀರಿಸುವ ನೋಕಿಯಾ ಡ್ಯುಯಲ್ ಕ್ಯಾಮೆರಾ ಫೋನ್..!

ಈಗಾಗಲೇ ನೋಕಿಯಾ ಹಲವು ಸ್ಮಾರ್ಟ್‌ಫೋನ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದರೂ ಸಹ ಅದರಲ್ಲಿ ಯಾವುದೇ ಅಸಾಮಾನ್ಯ ವಿನ್ಯಾಸವನ್ನು ಕಾಣಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ನೋಕಿಯಾ 7 ಪ್ಲಸ್ ಫುಲ್ ಸ್ಕ್ರಿನ್ ವಿನ್ಯಾಸ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಸೇರಿದಂತೆ ವಿವಿಧ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನಲ್ಲಿ ಬೇರೆ ಕಂಪನಿಗಳೊಂದಿಗೆ ಸ್ಪರ್ಧೆಗೆ ನಿಂತಿದೆ.

ಓದಿರಿ: ಲೀಕ್ ಆಯ್ತು ಭಾರತದಲ್ಲಿ ಹೊಸ ದಾಖಲೆ ನಿರ್ಮಿಸುವ ಸ್ಮಾರ್ಟ್‌ಫೋನ್‌ನ ಮೊದಲ ಫೋಟೋ..!

ಫುಲ್‌ಸ್ಕ್ರಿನ್ ವಿನ್ಯಾಸ ಉತ್ತಮವಾಗಿದೆ:

ಫುಲ್‌ಸ್ಕ್ರಿನ್ ವಿನ್ಯಾಸ ಉತ್ತಮವಾಗಿದೆ:

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ 18:9 ಅನುಪಾತದ ಫುಲ್‌ ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿರುವ ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ. 6 ಇಂಚಿನ ಡಿಸ್‌ಪ್ಲೇ ಇದರಲ್ಲಿ ಇರಲಿದ್ದು, ಈ ಸ್ಮಾರ್ಟ್‌ಫೋನ್ ಹೈಲೈಟ್‌ಗಳಲ್ಲಿ ಇದು ಸಹ ಒಂದಾಗಲಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಈ ಹಿಂದೆಯೂ ನೋಕಿಯಾ ಫೋನ್‌ಗಳು ಕ್ಯಾಮೆರಾಗೆ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದವು. ಇದೇ ಮಾದರಿಯಲ್ಲಿ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿ 12MP + 13MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ. ಇದಲ್ಲದೇ ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಮಧ್ಯಮ ಸರಣಿಯದ್ದಾಗಿದ್ದು, ಇದರಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 660 ಚಿಪ್‌ ಸೆಟ್‌ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು ವೇಗವಾಗಿ ಕಾರ್ಯನಿರ್ವಹಿಸುವುದಲ್ಲದೇ ಉತ್ತಮ ಗೇಮ್‌ಗಳನ್ನು ಆಡಲು ಸಹಾಯಕಾರಿಯಾಗಲಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಇದಲ್ಲದೇ ನೋಕಿಯಾ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಮೊದಲ ಅಪ್‌ಡೇಟ್ ಪಡೆದುಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ನೋಕಿಯಾ 7 ಪ್ಲಸ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲು ಸಕ್ತವಾಗಿದೆ ಎನ್ನಲಾಗದೆ.

Best Mobiles in India

English summary
Nokia 7 Plus to arrive with 18:9 display, dual cameras. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X