Subscribe to Gizbot

ಲೀಕ್ ಆಯ್ತು ಭಾರತದಲ್ಲಿ ಹೊಸ ದಾಖಲೆ ನಿರ್ಮಿಸುವ ಸ್ಮಾರ್ಟ್‌ಫೋನ್‌ನ ಮೊದಲ ಫೋಟೋ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಅನ್ನು ಮಣಿಸಿ ನಂಬರ್ 1 ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಪಟ್ಟವನ್ನು ಅಲಂಕರಿಸಿರುವ ಶಿಯೋಮಿ, ಮತ್ತೊಂದು ಬೊಂಬಾಟ್ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಸಿಸ್ಸನ್ ನಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆದ ಶಿಯೋಮಿ ನೋಟ್ 4 ಸ್ಮಾರ್ಟ್‌ಫೋನಿನ ಮುಂದಿನ ಆವೃತ್ತಿಯ ಫೋನ್ ಇದಾಗಲಿದೆ.

ಲೀಕ್ ಆಯ್ತು ಭಾರತದಲ್ಲಿ ಹೊಸ ದಾಖಲೆ ನಿರ್ಮಿಸುವ ಸ್ಮಾರ್ಟ್‌ಫೋನ್‌ನ ಮೊದಲ ಫೋಟೋ..!

ಈಗಾಗಲೇ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನವು ಮಾಹಿತಿಯೂ ಲೀಕ್ ಆಗಿತ್ತು. ಆದರೆ ಈ ಬಾರಿ ಶಿಯೋಮಿ ನೋಟ್ 5 ಸ್ಮಾರ್ಟ್‌ಫೋನಿನ ಫೋಟೋಗಳು ಲೀಕ್ ಆಗಿದ್ದು, ಶೀಘ್ರವೇ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಓದಿರಿ: ಬೈಕ್ ಓಡಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತೀರಾ..? ಹಾಗಿದ್ರೆ ಈ ಸ್ಟೋರಿ ನಿಮಗಾಗಿ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫುಲ್ ಮೆಟಲ್ ಬಾಡಿ:

ಫುಲ್ ಮೆಟಲ್ ಬಾಡಿ:

ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಸಂಪೂರ್ಣ ಮೆಟಲ್ ಬಾಡಿಯನ್ನು ಹೊಂದಿದೆ ಎನ್ನಲಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ :

ಡ್ಯುಯಲ್ ಕ್ಯಾಮೆರಾ :

ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಮೇಲ್ಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, 16 MP ಮತ್ತು 5 MPಯ ಡ್ಯುಯಲ್ ಲೆನ್ಸ್ ಅನ್ನು ಈ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ ನೀಡಲಾಗಿದೆ.

How to save WhatsApp Status other than taking screenshots!! Kannada
ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಇದಲ್ಲದೇ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದು ಸ್ಮಾರ್ಟ್‌ಫೋನ್ ಕಾರ್ಯಚರಣೆಯನ್ನು ವೇಗವಾಗಿಸಲಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ಮೂರು ಬಣ್ಣದಲ್ಲಿ ಲಭ್ಯ:

ಮೂರು ಬಣ್ಣದಲ್ಲಿ ಲಭ್ಯ:

ಇದಲ್ಲದೇ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಈ ಬಾರಿ ಮೂರು ಬಣ್ಣದಲ್ಲಿ ದೊರೆಯಲಿದೆ ಎನ್ನಲಾಗಿದೆ. ಗ್ರೇ. ಬ್ಲಾಕ್ ಮತ್ತು ಬ್ಲೂ ಬಣ್ಣದಲ್ಲಿ ಮಾರಾಟವಾಗಲಿದೆ. ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದರೆ ಭಾರೀ ಪ್ರಮಾಣದಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.

ಹಿಂದೆ ಬಂದಿದ್ದು

ಹಿಂದೆ ಬಂದಿದ್ದು

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಸೋಲಿಸಿ ನಂಬರ್ ಓನ್ ಸ್ಮಾರ್ಟ್‌ಫೋನ್ ಮಾರಾಟ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ, ಮತ್ತೊಂಮ್ಮೆ ಮಾರುಕಟ್ಟೆಯಲ್ಲಿ ಜಾದೂ ಮಾಡಲು ಯೋಜನೆಯೊಂದನ್ನು ರೂಪಿಸಿದ್ದು, ಮುಂದಿನ ತಿಂಗಳ ಆರಂಭದಲ್ಲಿಯೇ ತನ್ನ ಬಹುನಿರೀಕ್ಷೆಯ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 5 ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ 3C ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

 ಸ್ಮಾರ್ಟ್‌ಫೋನ್‌: ವಿಶೇಷತೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ ...!

ಸ್ಮಾರ್ಟ್‌ಫೋನ್‌: ವಿಶೇಷತೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ ...!

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಯಶಸ್ವಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಮತ್ತೊಂದು ಬೊಂಬಾಟ್ ಸ್ಮಾರ್ಟ್‌ಫೋನ್‌ ಅನ್ನು ಕೈಗೆ ನೀಡಲು ಶಿಯೋಮಿ ಮುಂದಾಗಿದೆ. ಶೀಘ್ರವೇ ಲಾಂಚ್ ಆಗುವ ನೋಟ್ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ನಿರ್ಮಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ಮಾರುಕಟ್ಟೆಯಲ್ಲಿ ಟ್ರೆಂಡ್

ಮಾರುಕಟ್ಟೆಯಲ್ಲಿ ಟ್ರೆಂಡ್

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 5.99 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯೂ ಇದಗಿರಲಿದೆ. ಇದರಲ್ಲಿ ವಿಡಿಯೋ ನೋಡುವುದು ಮತ್ತು ಗೇಮಿಂಗ್ ಆಡುವ ಅನುಭವವು ಅತ್ಯತ್ತಮವಾಗಿರಲಿದೆ.

ಎರಡು ಆವೃತ್ತಿಯಲ್ಲಿ:

ಎರಡು ಆವೃತ್ತಿಯಲ್ಲಿ:

ಮಾರುಕಟ್ಟೆಯಲ್ಲಿ ಒಟ್ಟು ಎರಡು ಮಾದರಿಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ. 3GB RAM ಮತ್ತು 32GB ಆವೃತ್ತಿಯಲ್ಲಿ ಹಾಗೂ 4GB RAM ಮತ್ತು 64GB ಮೆಮೊರಿಯ ಮತ್ತೊಂದು ಆವೃತ್ತಿಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi Redmi Note 5 renders tease 18:9 bezel-less design, dual cameras and more. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot