Home
ಮೊಬೈಲ್

ನೋಕಿಯಾ 7 ಮತ್ತು ನೋಕಿಯಾ 1 ಸ್ಮಾರ್ಟ್ ಫೋನ್ ಮಾಹಿತಿ ಲೀಕ್..! ಇಲ್ಲಿದೆ ಅಚ್ಚರಿಯ ವಿಷಯ..!

By -

HMD ಗ್ಲೊಬಲ್ ಕಂಪನಿಯೂ ನೋಕಿಯಾ ಫೋನ್ ಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ, ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನೋಕಿಯಾ ಸುಮಾರು 4 ಮಿಲಿಯನ್ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ. ದಿನೇ ದಿನೇ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಳ್ಳುತ್ತಿರುವ ನೋಕಿಯಾ ಮತ್ತೇರಡು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ.

ನೋಕಿಯಾ 7 ಮತ್ತು ನೋಕಿಯಾ 1 ಸ್ಮಾರ್ಟ್ ಫೋನ್ ಮಾಹಿತಿ ಲೀಕ್..!

ಓದಿರಿ: ಯಾರಿಗೂ ನಿಮ್ಮ ನಂಬರ್ ತಿಳಿಯದಂತೆ ಕಾಲ್ ಮಾಡುವುದು ಹೇಗೆ..?

ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ನೋಕಿಯಾ ಬಿಡುಗಡೆ ಮಾಡಲಿದೆ ಎನ್ನಲಾದ ನೋಕಿಯಾ 7 ಮತ್ತು ನೋಕಿಯಾ 1 ಸ್ಮಾರ್ಟ್ ಫೋನ್ ಗಳ ಫೋಟೋ ಮತ್ತು ವಿಶೇಷತೆಗಳು ಲೀಕ್ ಆಗಿದ್ದು, ಈ ಕುರಿತ ಮಾಹಿತಿಯೂ ಇಲ್ಲಿದೆ.

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್:

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್:

ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿನ್ಯಾಸದ ಮೊದಲ ನೋಕಿಯಾ ಫೋನ್ ಎನ್ನುವ ಖ್ಯಾತಿಗೆ ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ ಪಾತ್ರವಾಗಲಿದ್ದು, ರೌಂಡ್ ಎಡ್ಜ್ ಕಾರ್ನರ್ ವಿನ್ಯಾಸವನ್ನು ಹೊಂದಿದೆ. 6 ಇಂಚಿನ ಡಿಸ್ ಪ್ಲೇ ಈ ಫೋನಿನಲ್ಲಿದ್ದು, 18:9 ಅನುಪಾತದಿಂದ ಕೂಡಿದೆ. ಉತ್ತಮ ವಿನ್ಯಾಸ ಇದಾಗಿದೆ.

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ ವಿಶೇಷತೆ

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ ವಿಶೇಷತೆ

ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ನೊಂದಿಗೆ 4GB RAM ಕಾಣಬಹುದಾಗಿದ್ದು, 64 GB ಇಂಟರ್ ನಲ್ ಮೆಮೊರಿಯನ್ನು ಒಳಗೊಂಡಿದೆ. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಅಲ್ಲದೇ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನೋಕಿಯಾ 1 ಸ್ಮಾರ್ಟ್ ಫೋನ್:

ನೋಕಿಯಾ 1 ಸ್ಮಾರ್ಟ್ ಫೋನ್:

ನೋಕಿಯಾ ಬಿಡುಗಡೆ ಮಾಡುತ್ತಿರುವ ಎಂಟ್ರಿ ಲೆವೆಲ್ ಸ್ಮಾರ್ಟ್ ಪೋನ್ ನೋಕಿಯಾ 1 ಆಗಲಿದ್ದು, ಇದರಲ್ಲಿ HD ಗುಣಮಟ್ಟದ ಡಿಸ್ ಪ್ಲೇ ಇರಲಿದೆ. 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಅಲ್ಲದೇ ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Best Mobiles in India

English summary
Nokia 7 Plus and Nokia 1 photos leaked ahead of MWC 2018. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+