Subscribe to Gizbot

ಯಾರಿಗೂ ನಿಮ್ಮ ನಂಬರ್ ತಿಳಿಯದಂತೆ ಕಾಲ್ ಮಾಡುವುದು ಹೇಗೆ..?

Written By:

ಇಂದಿನ ದಿನದಲ್ಲಿ ಜಿಯೋ ಸೇವೆಯೂ ಪ್ರತಿಯೊಬ್ಬರಿಗೂ ಲಭ್ಯವಾಗಿದ್ದು, ಇಂಟರ್ನೆಟ್ ಬಳಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ನಂಬರ್ ಯಾರಿಗೂ ತಿಳಿಯದಂತೆ ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕರೆಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಆಪ್ ಬಳಕೆ ಮಾಡಿಕೊಳ್ಳಬೇಕಾಗಿಲ್ಲ. ಇಲ್ಲವೆ ನಿಮ್ಮ ನಂಬರ್ ನೀಡಬೇಕಾಗಿಲ್ಲ ಮತ್ತು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಎನ್ನಲಾಗಿದೆ.

ಯಾರಿಗೂ ನಿಮ್ಮ ನಂಬರ್ ತಿಳಿಯದಂತೆ ಕಾಲ್ ಮಾಡುವುದು ಹೇಗೆ..?

ಈಗಾಗಲೇ ಆನ್‌ಲೈನಿನಲ್ಲಿಯೇ ಉಚಿತವಾಗಿ ಕರೆ ಮಾಡುವ ಹಲವು ಆಪ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿರುವ ಹೊಸ ಸೇವೆಯ ಬಗ್ಗೆ ನಿಮಗೆ ಮಾಹಿತಿ ಇಲ್ಲಿ ಲಭ್ಯವಿದ್ದು, ಸುಲಭವಾಗಿ ಇದನ್ನು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೆಬ್ ತಾಣದ ಮೂಲಕ:

ವೆಬ್ ತಾಣದ ಮೂಲಕ:

ievaphone.com ಎನ್ನುವ ವೆಬ್ ತಾಣದ ಮೂಲಕ ನೀವು ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದ್ದು, ಇದು ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿಯೂ ಕಾರ್ಯನಿರ್ವಹಿಸಲಿದೆ. ಯಾರು ಬೇಕಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬ್ರೌಸರ್ ಓಪನ್ ಮಾಡಿ

ಬ್ರೌಸರ್ ಓಪನ್ ಮಾಡಿ

ನಿಮ್ಮ ಟ್ಯಾಬ್, ಸ್ಮಾರ್ಟ್‌ಫೋನ್, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ನಲ್ಲಿರುವ ಬ್ರೌಸರ್ ಮೂಲಕ ನೀವು ievaphone.com ವೆಬ್ ತಾಣವನ್ನು ಓಪನ್ ಮಾಡಿಕೊಳ್ಳಿ.

ನಂತರದ ನಂಬರ್ ಎಂಟ್ರಿ ಮಾಡಿ:

ನಂತರದ ನಂಬರ್ ಎಂಟ್ರಿ ಮಾಡಿ:

ನಂತರದಲ್ಲಿ ನೀವು ಯಾರಿಗೆ ಕರೆ ಮಾಡಬೇಕು ಎಂದುಕೊಳ್ಳುವಿರಿ ಅವರ ನಂಬರ್ ಮತ್ತು ಕಂಟ್ರಿ ನಂಬರ್ ಆಡ್ ಮಾಡಿರಿ ಮತ್ತು ಕಾಲ್ ಬಟನ್ ಕ್ಲಿಕ್ ಮಾಡಿರಿ.

ಕೆಲ ಸೆಕೆಂಡ್ ನಲ್ಲಿ ಕೆನೆಕ್ಟ್:

ಕೆಲ ಸೆಕೆಂಡ್ ನಲ್ಲಿ ಕೆನೆಕ್ಟ್:

ಇದಾದ 30 ಸೆಕೆಂಡ್ ನಲ್ಲಿ ನಿಮ್ಮ ಪೋನ್ ಕರೆ ಕನೆಕ್ಟ್ ಆಗಲಿದ್ದು, ಉಚಿತವಾಗಿ ನೀವು ಕರೆಗಳನ್ನು ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ಹಣವು ಉಳಿತಾಯವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Make Free Calls To Any Number Without Registration. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot