ನೋಕಿಯಾ 8.1 ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಗೆ ಲಾಂಚ್.! ಹೇಗಿದೆ ಗೊತ್ತಾ.?

|

ಆಂಡ್ರಾಯ್ಡ್ ಆಪ್ರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದಿರುವ ನೋಕಿಯಾ ಕಂಪನಿಯ ಬಹುನಿರೀಕ್ಷಿತ 'ನೋಕಿಯಾ 8.1' ಸ್ಮಾರ್ಟ್‌ಫೋನ್‌ ಒಂದು ಭಾರತೀಯ ಮಾರುಕಟ್ಟೆಗೆ ಲಾಂಚ್‌ ಆಗಿದೆ. ಈಗಾಗಲೇ ಹತ್ತು ಹಲವು ಫೋನ್‌ಗಳನ್ನು ಪರಿಚಯಿಸಿರುವ ನೋಕಿಯಾ ಹೊಸತೆನಾದರು ಪರಿಚಯಿಸಲಿದೆ ಎಂದು ಕಾದುಕುಳಿತಿದ್ದ ಗ್ರಾಹಕರು ಈಗ ಕುತೂಹಲದಿಂದ 'ನೋಕಿಯಾ 8.1' ಕಡೆ ನೋಡುತ್ತಿದ್ದಾರೆ.

ನೋಕಿಯಾ 8.1 ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಗೆ ಲಾಂಚ್.! ಹೇಗಿದೆ ಗೊತ್ತಾ.?

6GB RAM ಮತ್ತು 128GB ಆಂತರಿಕ ಸಾಮರ್ಥ್ಯ ಹೊಂದಿರುವ ಜೊತೆಗೆ ಅತೀ ನೂತನ ಫೀಚರ್ಸ್‌ಗಳನ್ನು ಹೊಂದುವ ಮೂಲಕ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸೋನಿಯ IMX363 ಸೆನ್ಸಾರ್ ಕ್ಯಾಮೆರಾ ಹಾಗೂ 20 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾಗಳನ್ನು ಹೊಂದಿರುವುದು ವಿಶೇಷವಾಗಿದೆ. ಎಂದಿಗೂ ತನ್ನ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲದ ನೋಕಿಯೋ ಈಗ 'ನೋಕಿಯಾ 8.1' ಬಿಡುಗಡೆ ಮಾಡಿ ಗಮನಸೆಳೆದಿದೆ.

ನೋಕಿಯಾ 8.1 ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಗೆ ಲಾಂಚ್.! ಹೇಗಿದೆ ಗೊತ್ತಾ.?

ದೇಶದಲ್ಲಿ ಲಾಂಚ್ ಆಗಿರುವ ನೋಕಿಯಾ 8.1 ಸ್ಮಾರ್ಟ್‌ಫೋನ್‌ ಪ್ರೀ ಬುಕ್ಕಿಂಗ್ ಇಂದಿನಿಂದಲೇ (ಫೆಬ್ರುವರಿ 1) ಆರಂಭವಾಗಿದ್ದು, ಮಾರಾಟದಲ್ಲಿ ಭಾರೀ ಸದ್ದು ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಹಾಗಾದರೇ, ನೋಕಿಯಾದ ಕಂಪೆನಿಯ ನೂತನ ನೋಕಿಯಾ 8.1 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿರಿ.

ರಚನೆ ಮತ್ತು ಡಿಸ್‌ಪ್ಲೇ

ರಚನೆ ಮತ್ತು ಡಿಸ್‌ಪ್ಲೇ

ನೋಕಿಯಾ 8.1 ಸ್ಮಾರ್ಟ್‌ಫೋನ್ ನೋಡಲು ಅತೀ ಆಕರ್ಷಕವಾಗಿದ್ದು, ಫೋನಿನ ನಾಲ್ಕು ಮೂಲೆಗಳು ರೌಂಡ್‌ ಕರ್ವ್ ಆಕಾರದಲ್ಲಿವೆ. ಮುಂಭಾಗದ ಕೆಳಗಡೆ ನೋಕಿಯಾ ಹೆಸರನ್ನು ನೀಡಲಾಗಿದೆ. ಇನ್ನೂ 6.18 ಇಂಚಿನ ಫುಲ್‌ ಹೆಚ್‌ಡಿ 2246 x 1080 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, 18.7:9 ಡಿಸ್‌ಪ್ಲೇ ಅನುಪಾತ ಹೊಂದಿದೆ. ಇದರ ಉತ್ತಮ ಕ್ವಾಲಿಟಿಯ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಪ್ರಿಯರ ಮನ ಗೆಲ್ಲಲಿದೆ.

ಸೂಪರ್ ಪ್ರೊಸೆಸರ್

ಸೂಪರ್ ಪ್ರೊಸೆಸರ್

ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 710, 2.2GHz ಆಕ್ಟಾಕೋರ್ ಪ್ರೊಸೆಸರ್ ನೊಂದಿಗೆ ಅಂಡ್ರೆನೊ 616 ಜಿಪಿಯು ಹೊಂದಿದೆ. ಇನ್ನೂ ಸಂಗ್ರಹ ಸಾಮರ್ಥ್ಯ ಅದ್ಭುತವಾಗಿದ್ದು, 4/6GB RAM ಮತ್ತು 64/128GB ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದ ಎರಡು ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ. ಇದರೊಂದಿಗೆ 400GB ವರೆಗೂ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ವಾಲಿಟಿ ಕ್ಯಾಮೆರಾ

ಕ್ವಾಲಿಟಿ ಕ್ಯಾಮೆರಾ

ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಎರಡು ಹಿಂಬದಿ ಕ್ಯಾಮೆರಾಗಳನ್ನು ಹೊಂದಿದ್ದು, 1/2.55 ಸೋನಿಯ IMX363 ಸೆನ್ಸಾರ್ ಮತ್ತು f/1.8 ಅಪರ್ಚರ್ ನೊಂದಿಗೆ 12 ಮೆಗಾಪಿಕ್ಸಲ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು ಇದ್ದು, ಇದು ZEISS ಆಪ್ಟಿಕಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ.

20MP ಸೆಲ್ಫೀ ಕ್ಯಾಮೆರಾ

20MP ಸೆಲ್ಫೀ ಕ್ಯಾಮೆರಾ

ಸೆಲ್ಫೀ ಪ್ರಿಯ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ನೋಕಿಯಾ ಸೆಲ್ಫೀಗಾಗಿ ಅತ್ಯುತ್ತಮ 20ಮೆಗಾಪಿಕ್ಸಲ್ ಸಾಮರ್ಥ್ಯದ ಗುಣಮಟ್ಟದ ಕ್ಯಾಮೆರಾ ನೋಕಿಯಾ ತನ್ನ 8.1 ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸುತ್ತಿದ್ದು, ಸೆಲ್ಫೀ ಪ್ರಿಯ ಗ್ರಾಹಕರಿಗೆ ಈ ಕ್ಯಾಮೆರಾ ಸಖತ್ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನಿನ ಮುಂಬದಿಯ ಕ್ಯಾಮೆರಾ f/2.0 ಅಪರ್ಚರ್ ಹೊಂದಿದ್ದು, ಫೋಟೋ ಕ್ವಾಲಿಟಿ ಅತ್ಯುತ್ತಮವಾಗಿ ಇರಲಿದೆ.

ಶಕ್ತಿಯುತ ಬ್ಯಾಟರಿ.!

ಶಕ್ತಿಯುತ ಬ್ಯಾಟರಿ.!

ನೋಕಿಯಾ ಬ್ಯಾಟರಿ ಬಾಳಿಕೆಯ ಬಗ್ಗೆ ಗ್ರಾಹಕರಿಗೆ ಮೊದಲಿನಿಂದಲೂ ಭರವಸೆ ಹೆಚ್ಚಾಗಿ ಇದೆ. ಹೀಗಾಗಿ ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ 3500mAh ಸಾಮರ್ಥ್ಯದ ದೀರ್ಘ ಬಾಳಿಕೆಯ ಬ್ಯಾಟರಿಯನ್ನು ನೀಡಿದ್ದು, ಗ್ರಾಹಕರು ನಿರಾತಂಕವಾಗಿ ಒಂದು ದಿನ ಬಳಸಬಹುದಾಗಿದೆ. ಇದರೊಂದಿಗೆ ವೇಗದ ಚಾರ್ಜರ್ ನೀಡಲಾಗಿದ್ದು, ಇದರ ಸಹಾಯದಿಂದ ಸ್ಮಾರ್ಟ್‌ಫೋನ್‌ ಅನ್ನು ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು.

ಬೆಲೆ ಎಷ್ಟು ಗೊತ್ತಾ?

ಬೆಲೆ ಎಷ್ಟು ಗೊತ್ತಾ?

ನೋಕಿಯಾ 8.1 ಸ್ಮಾರ್ಟ್‌ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಗ್ರಾಹಕರು ಫೆಬ್ರುವರಿ 1 ರಿಂದ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ನೋಕಿಯಾ 8.1 ಸ್ಮಾರ್ಟ್‌ಫೋನ್ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತವೆ. 6GB RAM/128GB ಸಂಗ್ರಹ ಸಾಮರ್ಥ್ಯ ಇರುವ ವೇರಿಯಂಟ್ ಬೆಲೆಯು 29,999ರೂ.ಗಳು ಮತ್ತು 4GB RAM/64GB ಶೇಖರಣಾ ಸಾಮರ್ಥ್ಯ ಇರುವ ವೇರಿಯಂಟ್‌ ಬೆಲೆ 26,999ರೂ.ಗಳು.

Best Mobiles in India

English summary
The newly launched variant of the Nokia 8.1 comes with 6GB of RAM and 128GB of onboard storage and will be available for pre-order from February 1.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X