ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಪೋನ್ ನೋಕಿಯಾ 8: ಬೆಲೆ ಕೇಳಿ ಶಾಕ್ ಆಗಬೇಡಿ..!
ಚೀನಾ ಮಾರುಕಟ್ಟೆಯಲ್ಲಿ ಮೊದಲ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ ನೋಕಿಯಾ, ಸದ್ಯ ಎರಡನೇ ಪೋನನ್ನು ಪರಿಚಯಿಸಲು ಮುಂದಾಗಿದ್ದು, ಈ ಕುರಿತ ಸುದ್ದಿ ಇಲ್ಲಿದೆ.
ಕೆಲ ದಿನಗಳಿಂದ ಎದುರು ನೋಡುತ್ತಿರುವ ನೋಕಿಯಾ ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಕಾಲಿಡುವ ಮುನ್ನವೇ ಸಾಕಷ್ಟು ಸೌಂಡು ಮಾಡುತ್ತಿವೆ, ಮೊನ್ನೆ ತಾನೆ ಚೀನಾ ಮಾರುಕಟ್ಟೆಯಲ್ಲಿ ಮೊದಲ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ ನೋಕಿಯಾ, ಸದ್ಯ ಎರಡನೇ ಪೋನನ್ನು ಪರಿಚಯಿಸಲು ಮುಂದಾಗಿದ್ದು, ಈ ಕುರಿತ ಸುದ್ದಿ ಇಲ್ಲಿದೆ.

ಓದಿರಿ: ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ
ಸದ್ಯ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ನೋಕಿಯಾ 8 ಸ್ಮಾರ್ಟ್‌ಪೋನಿನ ಕುರಿತಂತೆ ಚೀನಾ ಮೂಲದ ಆನ್‌ಲೈನ್ ಶಾಪಿಂಗ್ ಜಾಲತಾಣದಲ್ಲಿ ಜಾಹಿರಾತು ಕಾಣಿಸಿಕೊಂಡಿದೆ. ಆದರೆ ಈ ಪೋನು ಫೆಬ್ರವರಿ 26 ರಂದು ಬಿಡುಗಡೆಯಾಗಲಿದ್ದು, ಇದೊಂದು ಮಧ್ಯಮ ಬೆಲೆಯ ಸ್ಮಾರ್ಟ್‌ಪೋನಾಗಿದ್ದು, ರೂ. 31,000 ಸಾವಿರಕ್ಕೆ ಮಾರಾಟವಾಗಲಿದೆ.
ಈಗಾಗಲೇ ಈ ಪೋನ್ ವಿನ್ಯಾಸ ಮತ್ತು ವಿಷೇಶತೆಗಳ ಕುರಿತು ಮಾಹಿತಿ ಲೀಕ್ ಆಗಿದ್ದು, ಚೀನಾದ JD.com ಈ ಕುರಿತು ಮಾಹಿತಿಯನ್ನು ಹೊರ ಹಾಕಿದೆ, ನೋಕಿಯಾ 8 ಸ್ಮಾರ್ಟ್‌ಪೋನು ಸ್ಯಾಮ್‌ಸಂಗ್, ಆಪಲ್ ಮತ್ತು ಟಾಪ್ ಬ್ರಾಂಡ್ ಪೋನ್ ತಯಾರಕ ಕಂಪನಿಗೆ ಸ್ಪರ್ಧೆಯೊಡ್ಡಲಿದೆ ಎಂದು ತಿಳಿಸಿದೆ.

ಓದಿರಿ: ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?
ಸದ್ಯ ಚೀನಾ ಮಾರುಕಟ್ಟೆಯಲ್ಲಿ ಈ ಪೋನ್ CNY 3,188ಗಳಿಗೆ ಮಾರಾಟವಾಗುತ್ತಿದ್ದು, ಇದನ್ನು ಭಾರತೀಯ ರೂಪಾಯಿಗೆ ಪರಿರ್ವತಿಸಿದರೆ 31,000 ರೂಗಳಾಗಲಿದೆ. ಒಮ್ಮೆ ಈ ಪೋನ್ ಭಾರತದಲ್ಲಿ ಲಾಂಚ್ ಆದಲ್ಲಿ ಇನ್ನು ಕಡಿಮೆ ಮೊತ್ತಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.


Click it and Unblock the Notifications








