Subscribe to Gizbot

ನೋಕಿಯಾ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ..!

Posted By: lekhaka

ಇದೇ ಫೆಬ್ರವರಿ 26 ರಂದು ನಡೆಯಲಿರುವ MWC 2018 ಕಾರ್ಯಕ್ರಮ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ದೈತ್ಯ ಕಂಪನಿಗಳು ತಮ್ಮ ನೂತನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲು ಈ ಕಾರ್ಯಕ್ರಮವನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ನೋಕಿಯಾ ಸಹ ಹಲವು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ.

ನೋಕಿಯಾ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ..!

ಈ ಬಾರಿ ಟಾಪ್ ಎಂಡ್ ಫೋನ್ ಗಳ ಕಡೆಗೆ ನೋಕಿಯಾ ಗಮನವನ್ನು ಹರಿಸಿದ್ದು, ನೋಕಿಯಾ 8 ಮತ್ತು ನೋಕಿಯಾ 9 ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಪರಿಚಯಗೊಳ್ಳಲಿವೆ. ಇದರೊಂದಿಗೆ ನೋಕಿಯಾ 8 ಪ್ರೋ ಸಹ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯು ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲಿದೆ.

ಓದಿರಿ: ಸೇಲ್‌ನಲ್ಲಿ ನೋಟ್‌ 5 ಸಿಕ್ಕಲಿಲ್ಲ ಎನ್ನುವ ಚಿಂತೆ ಬೇಡ: ಬರುತ್ತಿದೆ ಅದನ್ನು ಮೀರಿರುವ ಮೊಟೊ G6

ಇದಲ್ಲದೇ ಈ ಬಾರಿ ನೋಕಿಯಾ 10 ಫಾಗ್ ಶಿಪ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಎನ್ನುವ ರೂಮರ್ ಸಹ ಕೇಳಿ ಬಂದಿದ್ದು, ಆದರೆ ಈ ಸ್ಮಾರ್ಟ್ ಫೋನ್ ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಟಾಪ್ ಟ್ರೆಂಡ್ ಗಳು ಈ ಸ್ಮಾರ್ಟ್ ಫೋನಿನಲ್ಲಿ ಇರಲಿದೆ.

ನೋಕಿಯಾ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ..!

ನೋಕಿಯಾ 8 ಪ್ರೋ ಸ್ಮಾರ್ಟ್ ಫೋನ್ ಹೆಚ್ಚು ಸದ್ದು ಮಾಡುತ್ತಿದ್ದು, ಮಾರುಕಟ್ಟೆಯಲ್ಲಿಯೇ ಅತೀ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್ ಫೋನಿನಲ್ಲಿ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನೋಕಿಯಾ 8 ಪ್ರೋ ಸ್ಮಾರ್ಟ್ ಫೋನ್ ಹಿಂಭಾಗ ಮತ್ತು ಮುಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿದ್ದು, ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, 18:9 ಅನುಪಾತದಿಂದ ಕೂಡಿದೆ. ಅಲ್ಲದೇ ಡಬ್ಬಲ್ ಗೊರಿಲ್ಲ ಗ್ಲಾಸ್ ಸುರಕ್ಷತೆಯನ್ನು ಹೊಂದಿರಲಿದೆ.

English summary
Nokia 8 Pro with Snapdragon 845 SoC reportedly in the making. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot