ಸೇಲ್‌ನಲ್ಲಿ ನೋಟ್‌ 5 ಸಿಕ್ಕಲಿಲ್ಲ ಎನ್ನುವ ಚಿಂತೆ ಬೇಡ: ಬರುತ್ತಿದೆ ಅದನ್ನು ಮೀರಿರುವ ಮೊಟೊ G6

|

ಮೊಟೊರೊಲಾ ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ G5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಆವೃತ್ತಿಯೂ ಬಿಡುಗಡೆಯಾಗಿ ವರ್ಷಗಳು ಕಳೆದ ಹಿನ್ನಲೆಯಲ್ಲಿ ಮೊಟೊರೊಲಾ ಮಾರುಕಟ್ಟೆಗೆ ಮೊಟೊ G6 ಸ್ಮಾರ್ಟ್‌ಫೋನಿನ ಸರಣಿಯನ್ನು ಪರಿಚಯ ಮಾಡಲು ಮುಂದಾಗಿದ್ದು, ಹೊಸ ಹವಾ ಎಬ್ಬಿಸುವ ಸಾಧ್ಯತೆ ದಟ್ಟವಾಗಿದೆ.

ನೋಟ್‌ 5 ಸಿಕ್ಕಲಿಲ್ಲ ಎನ್ನುವ ಚಿಂತೆ ಬೇಡ: ಬರುತ್ತಿದೆ ಅದನ್ನು ಮೀರಿರುವ ಮೊಟೊ G6

ಈಗಗಾಲೇ ಅಭಿಮಾನಿಗಳು ಕಾಯುತ್ತಿದ್ದ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಇದೇ ಮಾದರಿಯಲ್ಲಿ ಮೊಟೊ G6 ಸ್ಮಾರ್ಟ್‌ಫೋನ್ ಸಹ ಅಭಿಮಾನಿಗಳ ಕಾತುರವನ್ನು ಅಧಿಕ ಮಾಡಿದೆ. ಈ ಹಿನ್ನಲೆಯಲ್ಲಿ ಒಟ್ಟು ಮೂರು ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಮೊಟೊರೊಲಾ ಮುಂದಾಗಿದೆ.

ಮೂರು ಸ್ಮಾರ್ಟ್‌ಫೋನ್:

ಮೂರು ಸ್ಮಾರ್ಟ್‌ಫೋನ್:

ಮೊಟೊರೊಲಾ ಇದುವರೆಗೂ ಮಾರುಕಟ್ಟೆಯಲ್ಲಿ ಒಂದೇ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತಿತ್ತು. ಆದರೆ ಈ ಬಾರಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯ ಮಾಡಲು ಮುಂದಾಗಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಶೀಘ್ರವೇ ಸದ್ದು ಶುರು ಮಾಡಲಿದೆ.

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ ಗಳಲ್ಲಿ ನೀವು ಫುಲ್‌ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿದೆ. ಅಲ್ಲದೇ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿದೆ ಎನ್ನಲಾಗಿದೆ.

ಮೊಟೊ G6 ಪ್ಲಸ್ ವಿಶೇಷತೆ ಲೀಕ್:

ಮೊಟೊ G6 ಪ್ಲಸ್ ವಿಶೇಷತೆ ಲೀಕ್:

ಸದ್ಯ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌ ಕುರಿತ ಮಾಹಿತಿಗಳು ಲೀಕ್ ಆಗಿದ್ದು, 5.93 ಇಂಚಿನ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ 6GB RAM ಈ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದ್ದು, ಜೊತೆಗೆ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನು ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದ್ದು, 12 MP + 5 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.

ವಿವಿಧ ಬಣ್ಣಗಳು:

ವಿವಿಧ ಬಣ್ಣಗಳು:

ಮೊಟೊ G6 ಪ್ಲಸ್ ಸ್ಮಾರ್ಟ್‌ ಆರು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮಾರುಕಟ್ಟೆಯಲ್ಲಿ ಹೊಸ ಹೊಸ ಬಣ್ಣದಲ್ಲಿ ಮಿಂಚಲಿದೆ. ಸಿಲ್ವರ್, ಗೋಲ್ಡ್, ವೈಟ್, ಬ್ಲೂ ಮತ್ತು ಕ್ಲಾನ್ ಬಣ್ಣದಲ್ಲಿ ದೊರೆಯಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಓದಿರಿ: ಫಸ್ಟ್‌ ಸೇಲ್ ನಲ್ಲಿ ನೋಟ್ 5 ಸೋಲ್ಡ್‌ ಔಟ್: ಮುಂದಿನ ಸೇಲ್ ಎಂದು..?

Best Mobiles in India

English summary
Moto G6 Plus colours, specifications. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X