ಹೊಸ ಆವೃತ್ತಿಯ ನೋಕಿಯಾ 8 ಲಾಂಚ್
ಒನ್‌ಪ್ಲಸ್, ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ಟಾಪ್ ಎಂಡ್ ಮೊಬೈಲ್‌ಗಳಿಗೆ ಸ್ಪರ್ಧೆಯೊಡ್ಡುವ ಮಾದರಿಯಲ್ಲಿರುವ ಈ ಫೋನ್ ಟಾಪ್ ಎಂಡ್ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಇನ್ನೇನು ಕೇಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಈ ಫೋನ್
ಬಹುದಿನಗಳಿಂದ ಕಾಯುತ್ತಿದ್ದ ನೋಕಿಯಾ ಫಾಗ್ ಶಿಪ್ ಮೊಬೈಲ್ ನೋಕಿಯಾ 8 ಲಾಂಚ್ ಆಗಿದ್ದು, ಸದ್ಯ ಫಿನ್‌ಲ್ಯಾಂಡ್ ನಲ್ಲಿ ಮಾತ್ರವೇ ಈ ಫೋನ್ ದೊರೆಯುತ್ತಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಫೋನ್‌ಗಳಿಗೆ ಇದು ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ಓದಿರಿ: ಬರಲಿದೆ ಒನ್‌ಪ್ಲಸ್ ನಿಂದ ಮತ್ತೊಂದು ಟಾಪ್ ಎಂಡ್ ಫೋನ್: ಇಲ್ಲಿದೇ ಲೀಕ್ ಫೋಟೋ.!
ಒನ್‌ಪ್ಲಸ್, ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ಟಾಪ್ ಎಂಡ್ ಮೊಬೈಲ್‌ಗಳಿಗೆ ಸ್ಪರ್ಧೆಯೊಡ್ಡುವ ಮಾದರಿಯಲ್ಲಿರುವ ಈ ಫೋನ್ ಟಾಪ್ ಎಂಡ್ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಇನ್ನೇನು ಕೇಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಈ ಫೋನ್ ಪ್ರವೇಶಿಸಲಿದೆ.

6GB RAM, 128GB ROM:
ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ 6GB RAM ಕಾಣಬಹುದಾಗಿದ್ದು, ಇದರೊಂದಿಗೆ 128GB ಇಂಟರನಲ್ ಮೆಮೊರಿಯನ್ನು ನೀಡಲಾಗಿದೆ. ಇದು ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಹೊಂದಿದ್ದು, 5.2 ಇಂಚಿನ QHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:
ಇದಲ್ಲದೇ ನೋಕಿಯಾ 8 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 13MP +13MP ಕ್ಯಾಮೆರಾ ಸೆಪಟ್ ಇದಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿಯೂ 13MP ಕ್ಯಾಮೆರಾವನ್ನು ನಿಡಲಾಗಿದೆ.

ನೋಕಿಯಾ 8 ಬೆಲೆ:
ನೋಕಿಯಾ 8 ಬೆಲೆಯಲ್ಲಿಯೂ ವಿವಿಧ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ರೂ. 36,999ಕ್ಕೆ ಈ ಫೋನ್ ಲಭ್ಯವಿದೆ. ಮಾರುಕಟ್ಟೆಯಲ್ಲಿರುವ ವಿವಿಧ ಫೋನ್‌ಗಳಿಗೆ ಹೋಲಿಸಿಕೊಂಡರೆ ಇದು ಸ್ಪರ್ಧಾತ್ಮಕ ಬೆಲೆಗೆ ದೊರೆಯುತ್ತಿದೆ.


Click it and Unblock the Notifications