ಬರಲಿದೆ ಒನ್‌ಪ್ಲಸ್ ನಿಂದ ಮತ್ತೊಂದು ಟಾಪ್ ಎಂಡ್ ಫೋನ್: ಇಲ್ಲಿದೇ ಲೀಕ್ ಫೋಟೋ.!
ಒನ್‌ಪ್ಲಸ್ 5T ಶೀಘ್ರವೇ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಬೆಜಿಲ್ ಲೈಸ್( ಅಂಚುಗಳಿಲ್ಲದ) ವಿನ್ಯಾಸದಿಂದ ಕೂಡಿರಲಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪನಿಯೂ ಲಾಂಚ್ ಮಾಡಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಹೆಚ್ಚು ಸದ್ದು ಮಾಡುತ್ತಿದ್ದು, ಲಭ್ಯವಿರುವ ಟಾಪ್ ಎಂಡ್ ಫೋನ್‌ಗಳಿಗೆ ನೇರಾ ಪ್ರತಿ ಸ್ಪರ್ಧೆಯನ್ನು ನೀಡುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಟಾಪ್ ಎಂಡ್ ಫೋನ್ ಲಾಂಚ್ ಮಾಡಲು ಒನ್ ಪ್ಲಸ್ ಮುಂದಾಗಿದೆ.

ಓದಿರಿ: ಕೊಡುವ ಬೆಲೆಗೆ ಯಾವುದು ಬೆಸ್ಟ್: ಜಿಯೋ ಫೋನ್-ಏರ್‌ಟೆಲ್ ಫೋನ್? ಇಲ್ಲಿದೆ ಸಂಪೂರ್ಣ ವಿವರ!
ಮೂಲಗಳ ಪ್ರಕಾರ ಒನ್‌ಪ್ಲಸ್ 5T ಶೀಘ್ರವೇ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಬೆಜಿಲ್ ಲೈಸ್( ಅಂಚುಗಳಿಲ್ಲದ) ವಿನ್ಯಾಸದಿಂದ ಕೂಡಿರಲಿದೆ.

ಹಿಂಭಾಗದಲ್ಲಿ ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್:
ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. 6 ಇಂಚಿನ ಡಿಸ್‌ಪ್ಲೇ ಇದಾಗಿರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಇದೇ ಅನುಪಾತದಲ್ಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:
ಒನ್‌ಪ್ಲಸ್ 5 ಮಾದರಿಯಲ್ಲಿಯೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು ಎನ್ನಲಾಗಿದೆ. ಒಂದು 20 MP ಕ್ಯಾಮೆರಾ ಮತ್ತು 16MP ಯ ಮತ್ತೊಂದು ಕ್ಯಾಮೆರಾವನ್ನು ಡ್ಯುಯಲ್ ಕ್ಯಾಮೆರಾ ಸೆಟಪ್ ನಲ್ಲಿ ಕಾಣಬಹುದಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:
ಒನ್‌ಪ್ಲಸ್ 5 ಮಾದರಿಯಲ್ಲಿಯೇ ಒನ್‌ಪ್ಲಸ್ 5T ಸಹ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 6GB RAM & 64 GB ಆವೃತ್ತಿಯಲ್ಲಿ ಹಾಗೂ 8GB RAM ಮತ್ತು 128GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications








