ರಿಲೀಸ್ ಆಯ್ತು ವಿಶ್ವದ ಮೊದಲ 5 ಕ್ಯಾಮೆರಾವುಳ್ಳ 'ನೋಕಿಯಾ 9' ಫೋನ್! ಬೆಲೆ ಎಷ್ಟು ಗೊತ್ತಾ?

|

ಜನಪ್ರಿಯ ಮೊಬೈಲ್ ಕಂಪನಿ ನೋಕಿಯಾದ ಬಹುನಿರೀಕ್ಷತ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಇದೀಗ ಬಿಡುಗಡೆ ಆಗಿದ್ದು, ವಿಶ್ವದ ಮೊಟ್ಟ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂಬ ಕೀರ್ತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 5 ಕ್ಯಾಮೆರಾಗಳನ್ನು ಒಳಗೊಂಡಿರುವುದು ಗ್ರಾಹಕರಲ್ಲಿ ಭಾರೀ ಆಕರ್ಷಣೆ ಮೂಡಿಸಿದ್ದು, ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 50,000ರೂ.ಗಳ ಒಳಗೆ ಇರಲಿದೆ.

ರಿಲೀಸ್ ಆಯ್ತು ವಿಶ್ವದ ಮೊದಲ 5 ಕ್ಯಾಮೆರಾವುಳ್ಳ 'ನೋಕಿಯಾ 9' ಫೋನ್! ಬೆಲೆ ಗೊತ್ತಾ?

ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ 2019' ಕಾರ್ಯಕ್ರಮದಲ್ಲಿ ನೋಕಿಯಾ ಸಂಸ್ಥೆಯು ತನ್ನ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ 5 ಕ್ಯಾಮೆರಾಗಳನ್ನು ಹೊಂದಿದ್ದು ಇದೀಗ ಕನ್‌ಫರ್ಮ್ ಆಗಿದ್ದು, ಎಲ್ಲ ವದಂತಿಗಳಿಗೆ ತೆರೆಬಿದ್ದಿದೆ. ಹಿಂಭಾಗದಲ್ಲಿರುವ ಐದು ಕ್ಯಾಮೆರಾಗಳು 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ.

ರಿಲೀಸ್ ಆಯ್ತು ವಿಶ್ವದ ಮೊದಲ 5 ಕ್ಯಾಮೆರಾವುಳ್ಳ 'ನೋಕಿಯಾ 9' ಫೋನ್! ಬೆಲೆ ಗೊತ್ತಾ?

'ಐದು ಕ್ಯಾಮೆರಾ' ಫೀಚರ್ಸ್‌ನಿಂದ ಗಮನಸೆಳೆದಿದ್ದ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ 6 GB RAM ಅನ್ನು ಹೊಂದಿದ್ದು, ಇದರೊಟ್ಟಿಗೆ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. 5.99 ಇಂಚಿನ pOLED ಡಿಸ್‌ಪ್ಲೇಯನ್ನು ಪರಿಚಯಿಸಿದ್ದು, ಮಾರುಕಟ್ಟೆಗೆ ಹೊಸತನದ ಡಿಸ್‌ಪ್ಲೇ ಆಗಿದೆ. ಇದರೊಂದಿಗೆ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಶೇಷ ಫೀಚರ್ಸ್‌ಗಳು ಈ ಕೆಳಗಿನಂತಿವೆ.

ಮೊಟ್ಟ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್

ಮೊಟ್ಟ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್

ಮೊಬೈಲ್ ದಿಗ್ಗಜ ನೋಕಿಯಾ ತನ್ನ ನೋಕಿಯಾ 9 ಪ್ಯೂರ್‌ ವ್ಯೂವ್ ಸ್ಮಾರ್ಟ್‌ಫೋನ್ ನಲ್ಲಿ 5 ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ವಿಶ್ವ ಮಟ್ಟದಲ್ಲಿ ತನ್ನ ಸ್ಥಾನವನ್ನು ಎತ್ತರಿಸಿಕೊಂಡಿದೆ. ಹಾಗೂ 'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ವಿಶ್ವದ ಮೊಟ್ಟ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

12 ಮೆಗಾಪಿಕ್ಸಲ್ ಕ್ಯಾಮೆರಾ

12 ಮೆಗಾಪಿಕ್ಸಲ್ ಕ್ಯಾಮೆರಾ

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನಿನಲ್ಲಿರುವ 5 ಕ್ಯಾಮೆರಾಗಳು 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ. ಇದರಲ್ಲಿ ಮೂರು ಕ್ಯಾಮೆರಾಗಳು ಮೊನೋಕ್ರೊಮ್ ಕ್ಯಾಮೆರಾಗಳಾಗಿದ್ದರೆ, ಇನ್ನೂಳಿದ ಎರಡು ಕ್ಯಾಮೆರಾಗಳು RGB ಕ್ಯಾಮೆರಾವನ್ನು ಹೊಂದಿದೆ. 1200 ಲೇಯರ್ಸ್‌ಗಳ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಡೇಪ್ತ್ ಸಪೋರ್ಟ್‌ ಕ್ಯಾಮೆರಾಗಳಾಗಿವೆ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ 2K pOLED ಸ್ಕ್ರೀನ್‌ ಒಳಗೊಂಡಿರುವ 5.99 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಕರ್ವ್ ಆಕಾರದ ರಚನೆಯನ್ನು ಹೊಂದಿದ್ದು, ಡಿಸ್‌ಪ್ಲೇಯ ಸುತ್ತಲೂ ಕಡಿಮೆ ಅಂಚನ್ನು ಒಳಗೊಂಡಿದೆ.

ಮೆಮೊರಿ

ಮೆಮೊರಿ

'ನೋಕಿಯಾ 9 ಪ್ಯೂರ್‌ ವ್ಯೂವ್' ಸ್ಮಾರ್ಟ್‌ಫೋನ್ ಒಂದೇ ವೇರಿಯಂಟ್‌ನಲ್ಲಿ ದೊರೆಯಲಿದ್ದು, 6GB RAM ಸಾಮರ್ಥ್ಯದೊಂದಿಗೆ 128GB ಆಂಗರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್ 9.0 ಪೈ ಓಎಸ್‌ ಈ ಸ್ಮಾರ್ಟ್‌ಫೋನ್‌ ನಲ್ಲಿ ಕೆಲಸ ಮಾಡಲಿದೆ.

ಬ್ಯಾಟರಿ ಮತ್ತು ಬಣ್ಣ

ಬ್ಯಾಟರಿ ಮತ್ತು ಬಣ್ಣ

3320mAh ಸಾಮರ್ಥ್ಯದೊಂದಿಗೆ ಅತ್ಯುತ್ತಮ ಬ್ಯಾಟರಿಯನ್ನು ಹೊಂದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 'ಮೀಡ್‌ನೈಟ್‌ ಬ್ಲೂ' ಒಂದೇ ಬಣ್ಣದಲ್ಲಿ ದೊರೆಯಲಿದ್ದು, ಗ್ರಾಹಕರಿಗೆ ಬಣ್ಣಗಳಲ್ಲಿ ಆಯ್ಕೆಗಳನ್ನು ನೀಡಿಲ್ಲ.

Best Mobiles in India

English summary
Nokia 9 PureView which is the world’s first device to feature 5 cameras at the back.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X