Home
ಮೊಬೈಲ್

2017 ಕ್ಕೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ !? ಸ್ಮಾರ್ಟ್‌ಫೊನ್ ಫೀಚರ್ ಏನು? ಬೆಲೆ ಎಷ್ಟು?

ಸರಿಸುಮಾರು 10 ವರ್ಷಗಳು ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳಿದ್ದ ನೋಕಿಯಾ, ಆಂಡ್ರಾಯ್ಡ್ ಮೊಬೈಲ್‌ಗಳು ಮಾರುಕಟ್ಟೆಗೆ ಬಂದ ನಂತರ ಮೈಕ್ರೋಸಾಫ್ಟ್ ಕೈಹಿಡಿದು ನೆಲಕಚ್ಚಿತ್ತು.

By Bhaskar N J

ನೋಕಿಯಾ ಮೊಬೈಲ್‌ ಎಂದರೆ ಗುಣಮಟ್ಟದ ಮೊಬೈಲ್ ಎನ್ನುವ ಭಾವನೆ ಭಾರತೀಯರಿಗೆ ಇನ್ನು ಮರೆಯಲಾಗಿಲ್ಲ! ಮೊಬೈಲ್ ಯುಗ ಪ್ರಾರಂಭದಿಂದ ಇಲ್ಲಿಯವರೆಗೂ ಸರಿಸುಮಾರು 10 ವರ್ಷಗಳು ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳಿದ್ದ ನೋಕಿಯಾ, ಆಂಡ್ರಾಯ್ಡ್ ಮೊಬೈಲ್‌ಗಳು ಮಾರುಕಟ್ಟೆಗೆ ಬಂದ ನಂತರ ಮೈಕ್ರೋಸಾಫ್ಟ್ ಕೈಹಿಡಿದು ನೆಲಕಚ್ಚಿತ್ತು.

ಆದರೆ, ಇದೀಗ ಮತ್ತೆ ನೋಕಿಯಾ ಸದ್ದು ಮಾಡುತ್ತಿದೆ. ನೋಕಿಯಾ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ರೂಪ ಪಡೆದುಕೊಂಡು ಮತ್ತೆ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಬರುತ್ತಿದೆ! ಹೌದು, ನೋಕಿಯಾ ಕಂಪೆನಿ ಈ ಬಗ್ಗೆ ಹೇಳಿದ್ದು, 2017 ರಲ್ಲಿ ನೋಕಿಯಾ ಸಿಇಒ(CEO) ರಾಜೀವ್ ಸೂರಿ ಇದನ್ನು ಖಚಿತಪಡಿಸಲಿದ್ದಾರೆ ಎಂದು ತಿಳಿಸಿದೆ.

ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ?

ನೋಕಿಯಾ DC1 ಸರಣಿಯ ಎರಡು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು 2017 ರಲ್ಲಿ ನೋಕಿಯಾ ಲಾಂಚ್‌ ಮಾಡುತ್ತಿದೆ ಎನ್ನಲಾಗಿರುವ ಸುದ್ದಿ ಎಲ್ಲೆಡೆ ಹರಿದಾಡಿದೆ! ಜೊತೆಗೆ ಕೆಲವು ಚಿತ್ರಗಳು ದೊರೆತಿದ್ದು, ನೋಕಿಯಾ DC1 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹಲವು ಉತ್ತಮ ಫೀಚರ್‌ಗಳನ್ನು ಒಳಗೊಂಡಿವೆ ಎನ್ನಲಾಗಿದ್ದು ಅವುಗಳು ಯಾವುವು ಎಂಬುನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೊಬೈಲ್ ವಿನ್ಯಾಸ

ಮೊಬೈಲ್ ವಿನ್ಯಾಸ

ನೋಕಿಯಾ ತನ್ನ ನೂತನ ಸ್ಮಾರ್ಟ್‌ಫೋನ್‌ಗಳ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಿದೆ ಎನ್ನಲಾಗಿದೆ. ಬಿಡುಗಡೆಯಾಗುತ್ತಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 5 ಮತ್ತು 5.5 ಇಂಚ್ ಗಾತ್ರದಲ್ಲಿರುತ್ತವೆ ಎನ್ನಲಾಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 7.0 ನ್ಯೂಗಾ ಆಪರೇಟಿಂಗ್ ಸಿಸ್ಟಮ್ ಮತ್ತು Qualcomm Snapdragon 430 ಪ್ರೋಸೆಸರ್ ಹೊಂದಿದೆ ಎನ್ನಲಾಗಿದೆ. ಗ್ರಾಹಕರಿಗೆ ಉತ್ತಮ ಸ್ಮಾರ್ಟ್‌ಫೋನ್‌ ಅನುಭವದ ನೀಡಲು ನೋಕಿಯಾ ಮುಂದಾಗಿದೆ ಎನ್ನಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

RAM ಮತ್ತು ಸಂಗ್ರಹಣಾ ಸಾಮರ್ಥ್ಯ

RAM ಮತ್ತು ಸಂಗ್ರಹಣಾ ಸಾಮರ್ಥ್ಯ

ನೋಕಿಯಾದ ನೂತನ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 2GB ಮತ್ತು 3GB RAM ಹೊಂದಿರುತ್ತವೆ ಎನ್ನಲಾಗಿದೆ. ಎರಡೂ ಸ್ಮಾರ್ಟ್‌ಫೋನ್‌ 16GB ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ನೋಕಿಯಾ ಆಂಡ್ರಾಯ್ಡ್ ಮೊಬೈಲ್‌ಗಳು ಕ್ರಮವಾಗಿ 13 ಮತ್ತು 16 ಮೆಗಾಫಿಕ್ಸ್‌ಲ್ ಮತ್ತು ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಬಹುದು?

ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಬಹುದು?

ನೋಕಿಯಾ ತನ್ನ ನೂತನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು 10,000 ದಿಂದ 12,000 ರೂಪಾಯಿಗಳ ಆಸುಪಾಸಿನಲ್ಲಿ ನಿಡುತ್ತದೆ ಎನ್ನಲಾಗಿದೆ. ಇದೇ ಪೀಚರ್‌ಗಳನ್ನು ಹೊಂದಿರುವ ಇತರೆ ಮೊಬೈಲ್‌ಗಳು ಸಹ ಇದೇ ದರದಲ್ಲಿ ಸಿಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Nokia's alleged D1C expected to come in 5 and 5.5-inch screen size to know more visit to kannda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+