Subscribe to Gizbot

ಹೀಗೆ ಮಾಡಿದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ?

Written By:

ಇಂದಿನ ಜನರಿಗೆ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಬ್ಯಾಟರಿಗಳ ಬಗ್ಗೆ ಇರುವಷ್ಟು ಕನ್‌ಫ್ಯೂಷನ್ ಮತ್ತಿನ್ಯಾವ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಇಲ್ಲವೆನ್ನಬಹುದು!! ಹಾಗಾಗಿ ಬ್ಯಾಟರಿ ಬಗ್ಗೆ ತಜ್ಞರು ನೀಡಿರುವ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತಿದ್ದೇವೆ.

ಪ್ರಸ್ತುತ ಉತ್ತಮ ಗುಣಮಟ್ಟದ ಲೀಥಿಯಂ ಆಯಾನ್ ಬ್ಯಾಟರಿಗಳು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆಗೆ ಬಂದಿವೆ. ಲೀಥಿಯಂ ಆಯಾನ್ ಉತ್ತಮ ಬ್ಯಾಟರಿಯಾಗಿದ್ದರೂ ಹೆಚ್ಚು ದಿನ ಬಾಳಿಕೆ ಬರುವಂತೆ ಮಾಡಲು ಬ್ಯಾಟರಿಯನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಂತೆ.! ಬ್ಯಾಟರಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಎಂದು ಬ್ಯಾಟರಿ ತಜ್ಞರು ಹೆಳುತ್ತಾರೆ.!

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬ್ಯಾಟರಿಗಳು ಹೆಚ್ಚು ಚಾರ್ಜ್ ಹಿಡಿಯಬಲ್ಲ ಸಾಮರ್ಥ್ಯ ಕಳೆದುಕೊಂಡಿದ್ದರೆ ಅದರಲ್ಲಿ ಬಳಕೆದಾರರ ಕೆಲವು ತಪ್ಪುಗಳು ಇರುತ್ತವೆ ಎಂದು ತಜ್ಞರ ತಿಳಿಸಿದ್ದಾರೆ. ನಿವೂ ಆ ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಆ ತಪ್ಪುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಫುಲ್ ಆಗಲು ಬಿಡಬಾರದು!!

ಬ್ಯಾಟರಿ ಫುಲ್ ಆಗಲು ಬಿಡಬಾರದು!!

ಬ್ಯಾಟರಿ ತಂತ್ರಜ್ಞರ ಪ್ರಕಾರ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಬಾರದು. ಅದರಲ್ಲಿಯೂ ಪ್ರಮುಖವಾಗಿ ಲೀಥಿಯಂ ಆಯಾನ್ ಬ್ಯಾಟರಿಗಳನ್ನು 40% ನಿಂದ 80% ಚಾರ್ಜ್ ಮಾಡಿದರೆ ಸಾಕಾಗುತ್ತದೆ ಎನ್ನುತ್ತಾರೆ.

ಬ್ಯಾಟರಿಯನ್ನು ಪದೆ ಪದೆ ತೆರೆಯುತ್ತಿರಬಾರದು.

ಬ್ಯಾಟರಿಯನ್ನು ಪದೆ ಪದೆ ತೆರೆಯುತ್ತಿರಬಾರದು.

ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಪದೆ ಪದೆ ತೆರೆಯುವುದರಿಂದ ಅವುಗಳ ಶಕ್ತಿ ಕಡಿಮೆಯಾಗುತ್ತದಂತೆ. ಯಾವ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಉಪಯೋಗಿಸದೆ ಹೆಚ್ಚು ದಿನ ಇಟ್ಟರೆ ಅವುಗಳು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಎಂದು ತಂತ್ರಜ್ಞರು ಹೆಳುತ್ತಾರೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರಿ ಕೂಲ್ ಆಗಿರಲಿ?

ಬ್ಯಾಟರಿ ಕೂಲ್ ಆಗಿರಲಿ?

ಸ್ಮಾರ್ಟ್‌ಫೋನ್ ಉಪಯೋಗದಿಂದ ಬ್ಯಾಟರಿ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಬ್ಯಾಟರಿಗಳ ಶಕ್ತಿ ನಾಶವಾಗದಂತೆ ತಡೆಯಲು ಬ್ಯಾಟರಿ ಬಿಸಿಯಾಗದಂತೆ ತಡೆಯಿರಿ.

ಬ್ಯಾಟರಿ ಲೋ ಆಗಿದ್ದಾಗ ಸ್ಮಾರ್ಟ್‌ಫೋನ್ ಬಳಕೆ ಬೇಡ

ಬ್ಯಾಟರಿ ಲೋ ಆಗಿದ್ದಾಗ ಸ್ಮಾರ್ಟ್‌ಫೋನ್ ಬಳಕೆ ಬೇಡ

ಬ್ಯಾಟರಿ ಲೋ ಆಗಿದ್ದಾಗ ಸ್ಮಾರ್ಟ್‌ಫೋನ್ ಬಳಕೆಯಿಂದ ಹೆಚ್ಚೇನು ತೊಂದರೆ ಇಲ್ಲ . ಆದರೆ ಬ್ಯಾಟರಿ ಪೂರ್ಣವಾಗಿ ಖಾಲಿಯಾದರೆ ಮತ್ತೆ ಅದು ತನ್ನ ಶಕ್ತಿಯನ್ನು ಪಡೆಯಲು ಹೆಚ್ಚು ಸಮಯ ಬೇಕಾಗುತ್ತದೆ. ಈ ವೇಳೆಯಲ್ಲಿ ಬ್ಯಾಟರಿ ಒಳಗಿನ ಸೆಲ್‌ಗಳು ನಾಶವಾಗಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
keep them cool, and don’t leave them plugged in while they’re running at 100% to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot