Subscribe to Gizbot

49,999 ರೂಪಾಯಿ.ಲೂಮಿಯಾ 1020 ಸ್ಮಾರ್ಟ್‌ಫೋನ್‌ ಬೆಲೆ

Written By:

ನೋಕಿಯಾದ 41 ಮೆಗಾಪಿಕ್ಸೆಲ್‌ ಹೊಂದಿರುವ ಲೂಮಿಯಾ 1020 ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ಎಷ್ಟು ರೂಪಾಯಿ ನಿಗದಿ ಮಾಡಬಹುದು ಎನ್ನುವ ಕುತೂಹಲಕ್ಕೆ ಕೊನೆಗೂ ನೋಕಿಯಾ ತೆರೆ ಎಳೆದಿದೆ.ನೋಕಿಯಾ ಈ ಸ್ಮಾರ್ಟ್‌ಫೋನ್‌ಗೆ 49,999 ಬೆಲೆಯನ್ನು ನಿಗದಿ ಮಾಡಿದೆ.ಈ ಸಂಬಂಧ nokia.indiatimes.com ಈ ಸ್ಮಾರ್ಟ್‌‌ಫೋನ್‌ ದರ ಪ್ರಕಟಿಸಿದ್ದು ಗ್ರಾಹಕರು ಪ್ರಿ ಆರ್ಡರ್‌ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ 2999 ಬೆಲೆಯಿರುವ WH-530 ಸ್ಟೀರಿಯೋ ಹೆಡ್‌ಫೋನ್‌ನ್ನು ಉಚಿತವಾಗಿ ನೀಡುವುದಾಗಿ ನೋಕಿಯಾ ಆಫರ್‌ ಪ್ರಕಟಿಸಿದೆ.

ಲೂಮಿಯಾ 1020 ಸ್ಮಾರ್ಟ್‌ಫೋನ್‌ ಕಳೆದ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಅಂದು ಸ್ಮಾರ್ಟ್‌ಫೊನ್‌‌ ಬಿಡುಗಡೆಯಾಗಿದ್ದರೂ ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಎಂಬುದನ್ನು ನೋಕಿಯಾ ಪ್ರಕಟಿಸಿರಲಿಲ್ಲ.ಈ ಸ್ಮಾರ್ಟ್‌ಫೋನ್‌ ಅಕ್ಟೋಬರ್‌ 11ರಿಂದ ರಿಟೇಲ್‌ ಅಂಗಡಿಯಲ್ಲಿ ಲಭ್ಯವಿದ್ದು,ಅಕ್ಟೋಬರ್‌ 10ರಂದು ಈ ಸ್ಮಾರ್ಟ್‌ಫೋನ್‌ ಬೆಲೆ ತಿಳಿಸಲಾಗುವುದು ಎಂದು ನೋಕಿಯಾ ತಿಳಿಸಿತ್ತು.

ನೋಕಿಯಾ ಲೂಮಿಯಾ 1020 ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

49,999 ರೂಪಾಯಿ.ಲೂಮಿಯಾ 1020 ಸ್ಮಾರ್ಟ್‌ಫೋನ್‌ ಬೆಲೆ

ನೋಕಿಯಾ ಲೂಮಿಯಾ 1020
ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
1.5 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot