ನೋಕಿಯಾದ 41 ಎಂಪಿ ಕ್ಯಾಮೆರಾ ಭಾರತದ ಮಾರುಕಟ್ಟೆಗೆ ಬಿಡುಗಡೆ
ಭಾರತದ ಮಾರುಕಟ್ಟೆಗೆ ನೋಕಿಯಾ ಕಂಪೆನಿಯ 41 ಮೆಗಾಪಿಕ್ಸೆಲ್ ಹೊಂದಿರುವ ಲೂಮಿಯಾ 1020 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಇಂದು ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದರೂ ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ನೋಕಿಯಾ ಪ್ರಕಟಿಸಿಲ್ಲ.
ಈ ಸ್ಮಾರ್ಟ್‌ಫೋನ್ ಅಕ್ಟೋಬರ್ 11ರಿಂದ ರಿಟೇಲ್ ಅಂಗಡಿಯಲ್ಲಿ ಲಭ್ಯವಿದ್ದು, ಅಕ್ಟೋಬರ್ 10ರಂದು ಈ ಸ್ಮಾರ್ಟ್‌ಫೋನ್ ಬೆಲೆ ತಿಳಿಸಲಾಗುವುದು ಎಂದು ನೋಕಿಯಾ ಹೇಳಿದೆ.ಆದರೆ ಆನ್‌ಲೈನ್ ಶಾಪಿಂಗ್ ತಾಣ ಇಬೇ ಈ ಸ್ಮಾರ್ಟ್‌ಫೋನ್‌ಗೆ 51,847 ರೂ.ನಿಗದಿ ಮಾಡಿದೆ.
ಈ ಸ್ಮಾರ್ಟ್‌ಫೋನ್ ಕಪ್ಪು,ಬಿಳಿ,ಹಳದಿ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕ್ಯಾಮೆರಾ ಗ್ರಿಪ್‌ಗೆ 7,500 ರೂ, ವೈರ್‌ಲೆಸ್ ಚಾರ್ಜಿಂಗ್ ಶೆಲ್‌ಗೆ 3,200 ರೂಪಾಯಿಯನ್ನು ನೋಕಿಯಾ ನಿಗದಿ ಮಾಡಿದೆ. ಇಂದು ಮಾರುಕಟ್ಟೆಯಲ್ಲಿರುವ ಡಿಜಿಟಲ್ ಕ್ಯಾಮೆರಾ ಮತ್ತು ಸ್ಮಾರ್ಟ್‌ಫೋನ್‌ಗಿಂತ ನಾಲ್ಕು ಪಟ್ಟು ಉತ್ತಮ ಗುಣಮಟ್ಟದಲ್ಲಿ ಈ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಕ್ಲಿಕ್ಕಿಸಬಹುದು ಎಂದು ನೋಕಿಯಾ ಹೇಳಿದೆ. ಜುಲೈ ತಿಂಗಳಿನಲ್ಲಿ ಲೂಮಿಯಾ 1020 ಸ್ಮಾರ್ಟ್‌ಫೋನ್ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾಗಿತ್ತು.
ನೋಕಿಯಾ ಲೂಮಿಯಾ 1020
ವಿಶೇಷತೆ:
4.5 ಇಂಚಿನ AMOLED WXGA ಸ್ಕ್ರೀನ್(1280x768 ಪಿಕ್ಸೆಲ್)
1.5 GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ ಎಸ್4 ಪ್ರೊಸೆಸರ್
2GB RAM
ವಿಂಡೋಸ್ ಫೋನ್8 ಆಪರೇಟಿಂಗ್ ಸಿಸ್ಟಂ
32GB ಆಂತರಿಕ ಮೆಮೋರಿ
41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್,ಜಿಪಿಎಸ್,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
2000 mAh ಬ್ಯಾಟರಿ

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ನೋಕಿಯಾ ಲೂಮಿಯಾ 1020

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ನೋಕಿಯಾ ಕ್ಯಾಮೆರಾ ಗ್ರಿಪ್

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ಸ್ಮಾರ್ಟ್‌ಫೋನ್‌ನ್ನು ಯಾವುದೇ ಟ್ರೈಪಾಡ್‌ನಲ್ಲಿ ಇರಿಸಿ ಫೋಟೋ ಕ್ಲಿಕ್ಕಿಸಬಹುದು.

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ನೋಕಿಯಾ ಯುನಿವರ್ಸಲ್ ಫಾಸ್ಟ್ ಯುಎಸ್‌ಬಿ ಚಾರ್ಜರ್

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ನೋಕಿಯಾ ವೈರ್‌ಲೆಸ್ ಚಾರ್ಜರ್ ಕವರ್

ಭಾರತದ ಮಾರುಕಟ್ಟೆಗೆ ಲೂಮಿಯಾ 1020 ಬಿಡುಗಡೆ
ನೋಕಿಯಾ ಲೂಮಿಯಾ 1020


Click it and Unblock the Notifications



