ನೋಕಿಯಾ: 41 ಮೆಗಾಪಿಕ್ಸೆಲ್‌ ಕ್ಯಾಮೆರಾ ಸ್ಮಾರ್ಟ್‌‌ಫೋನ್‌ ಬಿಡುಗಡೆ

By Ashwath
|

ಫಿನ್ಲೆಂಡ್‌ ಮೂಲದ ನೋಕಿಯಾ ಕಂಪೆನಿ 41 ಮೆಗಾಪಿಕ್ಸೆಲ್‌ ಹೊಂದಿರುವ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಅಮೆರಿಕದ ನ್ಯೂಯಾರ್ಕ್‌‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಿದ್ದುಈ ಸ್ಮಾರ್ಟ್‌‌ಫೋನ್‌ಗೆ ಲ್ಯೂಮಿಯಾ 1020 ಎಂದು ಹೆಸರಿಡಲಾಗಿದೆ.

ಡಿಜಿಟಲ್‌ ಕ್ಯಾಮೆರಾಕ್ಕಿಂತಲೂ ಇದರಲ್ಲಿ ಉತ್ತಮ ಗುಣಮಟ್ಟದ ಫೋಟೋ ತೆಗೆಯಬಹುದಾಗಿದ್ದು, ಇಂದು ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌‌‌ಗಿಂತ ನಾಲ್ಕು ಪಟ್ಟು ಉತ್ತಮ ಗುಣಮಟ್ಟದಲ್ಲಿ ಈ ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಕ್ಲಿಕ್ಕಿಸಬಹುದು. ಜೊತೆಗೆ ಉಚಿತವಾಗಿ 7GB ಡೇಟಾವನ್ನು ಸ್ಕ್ರೈ ಡ್ರೈವ್‌ನಲ್ಲಿ ಸಂಗ್ರಹಿಸಬಹುದು.

ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌ನಲ್ಲಿ ಈ ವಾರ ಭಾರತದ ಮಾರುಕಟ್ಟೆಗೆ ಸ್ಯಾಮಸಂಗ್‌ ಗೆಲಾಕ್ಸಿ ಎಸ್‌4 ಝೂಮ್‌ ಬಿಡುಗಡೆಯಾಗಿತ್ತು. ಈ ಸ್ಮಾರ್ಟ್‌‌ಫೋನ್ 16 ಎಂಪಿ ಕ್ಯಾಮೆರಾವನ್ನು ಹೊಂದಿತ್ತು. ಆದರೆ ಈಗ ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂನಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.ಮುಂದಿನ ತಿಂಗಳಿನಿಂದ ಈ ಸ್ಮಾರ್ಟ್‌ಫೋನ್‌ ಲ್ಯಾಟಿನ್‌ ಅಮೆರಿಕ ಮತ್ತು ಯುರೋಪ್‌ ದೇಶಗಳ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ನೋಕಿಯಾ 2012 ಫೆಬ್ರವರಿಯಲ್ಲಿ ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂನಲ್ಲಿ ನೋಕಿಯಾ ಪ್ಯೂರ್‌ವ್ಯೂ ಮೊಬೈಲ್‌ನ್ನು ಬಿಡುಗಡೆ ಮಾಡಿತ್ತು.ಈ ಮೊಬೈಲ್‌ 41 ಮೆಗಾಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ,0.3 ಮೆಗಾ ಪಿಕ್ಸೆಲ್‌ ಮುಂದುಗಡೆ ಕ್ಯಾಮೆರಾವನ್ನು ಹೊಂದಿತ್ತು. ಇದೇ ಜನವರಿಯಲ್ಲಿ ನೋಕಿಯಾ ಕಂಪೆನಿ ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳ ಪೈಕಿ ಇದೇ ಕೊನೆಯ ಮೊಬೈಲ್‌ ಎಂದು ಪ್ರಕಟಿಸಿತ್ತು.

ಈಗ ನೋಕಿಯಾ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ, ಲ್ಯೂಮಿಯಾ ಸರಣಿಯಲ್ಲಿ ಈ ಫೋನ್‌ ಬಿಡುಗಡೆಮಾಡಿದ್ದು,ಈ ಸ್ಮಾರ್ಟ್‌‌ಫೋನ್‌ಗೆ 299.99 ಡಾಲರ್‌(17,945 ರೂಪಾಯಿ) ಬೆಲೆಯನ್ನು ನಿಗದಿ ಮಾಡಿದೆ. ಕಪ್ಪು,ಬಿಳಿ,ಹಳದಿ ಬಣ್ಣದಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಿದೆ. ಭಾರತದಲ್ಲಿ ಯಾವಾಗ ಬಿಡುಗಡೆ ಮಾಡುತ್ತದೆ ಮತ್ತು ಎಷ್ಟು ರೂಪಾಯಿಗೆ ಬಿಡುಗಡೆ ಮಾಡುತ್ತದೆ ಎನ್ನುವ ಮಾಹಿತಿ ನೋಕಿಯಾ ತಿಳಿಸಿಲ್ಲ.

ನೋಕಿಯಾ ಲ್ಯೂಮಿಯಾ 1020
ವಿಶೇಷತೆ:

  • 4.5 ಇಂಚಿನ AMOLED WXGA ಸ್ಕ್ರೀನ್‌(1280x768 ಪಿಕ್ಸೆಲ್‌)
  • 1.5 GHz ಡ್ಯುಯಲ್‌ ಕೋರ್‌ ಸ್ನಾಪ್‌ಡ್ರಾಗನ್‌ ಎಸ್‌4 ಪ್ರೊಸೆಸರ್‍
  • 2GB RAM
  • ವಿಂಡೋಸ್‌ ಫೋನ್‌8 ಆಪರೇಟಿಂಗ್‌ ಸಿಸ್ಟಂ
  • 32GB ಆಂತರಿಕ ಮೆಮೋರಿ
  • 41 ಎಂಪಿ ಹಿಂದುಗಡೆ ಕ್ಯಾಮೆರಾ(Carl Zeiss optics, optical image stabilization, autofocus, Xenon,LED flash)
  • 1.2 ಎಂಪಿ ಮುಂದುಗಡೆ ಕ್ಯಾಮೆರಾ
  • ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,ಎನ್‌ಎಫ್‌ಸಿ,
  • 2000 mAh ಬ್ಯಾಟರಿ

ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ಹೇಗಿದೆ? ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳು ಹೇಗೆ ಕಾಣಿಸುತ್ತದೆ? ಮತ್ತು ಈ ಸ್ಮಾರ್ಟ್‌‌ಫೋನ್‌ನಲ್ಲಿ ಫೋಟೋ ತೆಗೆಯಲು ತೆಗೆಯಲು ಬೇರೆ ಏನೆಲ್ಲ ಸಾಧನಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಭಾರತದಲ್ಲಿರುವ ನೋಕಿಯಾದ ದೊಡ್ಡ ಫ್ಯಾಕ್ಟರಿ ನೋಡಿದ್ದೀರಾ?

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020

ನೋಕಿಯಾ ಲ್ಯೂಮಿಯಾ 1020 ಸ್ಮಾರ್ಟ್‌ಫೋನಿನಲ್ಲಿ ತೆಗೆದ ಫೋಟೋ

ನೋಕಿಯಾ ಲ್ಯೂಮಿಯಾ 1020  ಬಿಡುಗಡೆ

ನೋಕಿಯಾ ಲ್ಯೂಮಿಯಾ 1020 ಬಿಡುಗಡೆ

ನೋಕಿಯಾ ಲ್ಯೂಮಿಯಾ 1020  ಬಿಡುಗಡೆ

ನೋಕಿಯಾ ಲ್ಯೂಮಿಯಾ 1020 ಬಿಡುಗಡೆ

ಸ್ಮಾರ್ಟ್‌ಫೋನ್‌ನ್ನು ಯಾವುದೇ ಟ್ರೈಪಾಡ್‌ನಲ್ಲಿ ಇರಿಸಿ ಫೋಟೋ ಕ್ಲಿಕ್ಕಿಸಬಹುದು.

ನೋಕಿಯಾ ಲ್ಯೂಮಿಯಾ 1020  ಬಿಡುಗಡೆ

ನೋಕಿಯಾ ಲ್ಯೂಮಿಯಾ 1020 ಬಿಡುಗಡೆ

ನೋಕಿಯಾ ಲ್ಯೂಮಿಯಾ 1020  ಬಿಡುಗಡೆ

ನೋಕಿಯಾ ಲ್ಯೂಮಿಯಾ 1020 ಬಿಡುಗಡೆ

ನೋಕಿಯಾ: 41 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ

Click Here For Latest Nokia Smartphones Gallery

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X