Subscribe to Gizbot

ಭಾರತದ ಮಾರುಕಟ್ಟೆಗೆ ನೋಕಿಯಾದ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ ಬಿಡುಗಡೆ

Posted By:

ಆಂಡ್ರಾಯ್ಡ್‌ ಓಎಸ್‌ನಲ್ಲಿ ಆರು ಇಂಚಿನ ಫ್ಯಾಬ್ಲೆಟ್‌ಗಳನ್ನು ಈಗಾಗಲೇ ಸ್ಯಾಮ್‌ಸಂಗ್‌ ಸೋನಿ,ಎಲ್‌ಜಿ,ಎಚ್‌ಟಿಸಿ ಕಂಪೆನಿಗಳು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.ಈಗ ವಿಂಡೋಸ್‌ ಓಎಸ್‌ ಸರದಿ.ನೋಕಿಯಾ ಆರು ಇಂಚಿನ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ.

ನೋಕಿಯಾ ಲೂಮಿಯಾ 1520 ಫ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ನೋಕಿಯಾ 46,999 ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಕೆಂಪು,ಹಳದಿ,ಬಿಳಿ,ಕಪ್ಪು ಬಣ್ಣದಲ್ಲಿ ಈ ಫ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅಬುದಾಬಿಯಲ್ಲಿ ನಡೆದ ನೋಕಿಯಾ ವರ್ಲ್ಡ್ ಸಮಾರಂಭದಲ್ಲಿ  ಲೂಮಿಯಾ 1520 ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಎರಡು ತಿಂಗಳ ಬಳಿಕ ನೋಕಿಯಾ ಭಾರತದ ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ.

ನೋಕಿಯಾ ಫ್ಯಾಬ್ಲೆಟ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ ಮತ್ತು ಓಎಸ್‌:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


162.8*85.4*8.7 ಮಿ.ಮೀಟರ್‍ ಗಾತ್ರ,209 ಗ್ರಾಂ ತೂಕವನ್ನು ಹೊಂದಿದೆ. ಫ್ಯಾಬ್ಲೆಟ್‌ ವಿಂಡೋಸ್‌ ಫೋನ್‌ 8 ಆಪರೇಟಿಂಗ್ ಸಿಸ್ಟಂ ಒಳಗೊಂಡಿದೆ.

 ಡಿಸ್ಪ್ಲೇ:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


6 ಇಂಚಿನ ಕ್ಲಿಯರ್‌‌ ಬ್ಲ್ಯಾಕ್‌‌ ಐಪಿಎಸ್‌‌ ಎಲ್‌ಸಿಡಿ ಫುಲ್‌ ಎಚ್‌ಡಿ ಸ್ಕ್ರೀನ್‌‌‌‌(1920 x 1080 ಪಿಕ್ಸೆಲ್‌,368 ಪಿಪಿಐ) ಹೊಂದಿದೆ.

 ಪ್ರೊಸೆಸರ್‍ ಮತ್ತು ರ್‍ಯಾಮ್‌:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


ಕ್ವಾಲಕಂ ಸ್ನಾಪ್‌ಡ್ರಾಗನ್‌ 800 2.2 GHz ಕ್ವಾಡ್‌ಕೋರ್‌ ಪ್ರೊಸೆಸರ್‌,2 GB ರ್‍ಯಾಮ್‌ನ್ನು ಲೂಮಿಯಾ 1520 ಹೊಂದಿದೆ.

 ಬ್ಯಾಟರಿ:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


‌ 3400 mAh ಬ್ಯಾಟರಿಯನ್ನು ಫ್ಯಾಬ್ಲೆಟ್‌ ಹೊಂದಿದ್ದು,32 ದಿನಗಳ ಕಾಲ ಸ್ಟ್ಯಾಂಡ್‌ ಬೈ ಟೈಮ್‌‌, 27.4 ಗಂಟೆ 2ಜಿ ಟಾಕ್‌ ಟೈಮ್‌, 25.1 ಗಂಟೆ 3ಜಿಯಲ್ಲಿ ಮಾತನಾಡುವ ಸಾಮರ್ಥ್ಯ ಈ ಬ್ಯಾಟರಿಯಲ್ಲಿದೆ ಎಂದು ನೋಕಿಯಾ ಹೇಳಿದೆ

 ಕ್ಯಾಮೆರಾ:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


20 ಎಂಪಿ ಹಿಂದುಗಡೆ ಕ್ಯಾಮೆರಾ, f/2.4 ಅಪರ್ಚರ್‌,ಫೋಕಲ್‌ ಲೆಂತ್‌ 26 ಮಿ.ಮೀ, ಡ್ಯುಯಲ್ ಎಲ್‌ಇಡಿ ಫ್ಯಾಶ್‌ ಹೊಂದಿದೆ. ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ಮೆಮೊರಿ:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ

32 GB ಆಂತರಿಕ ಮೆಮೊರಿ,7 GB ಕ್ಲೌಡ್‌ ಸ್ಟೋರೇಜ್‌,64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ನೋಕಿಯಾ ನೀಡಿದೆ.ಫ್ಯಾಬ್ಲೆಟ್‌ ಲೈಟ್ ಸೆನ್ಸರ್‌,ಎಕ್ಸಲರೋಮೀಟರ್‌, ಗೈರೊಸ್ಕೋಪ್‌‌,ಪ್ರಾಕ್ಸಿಮಿಟಿ ಸೆನ್ಸರ್‍,ಮ್ಯಾಗ್ನಟೋಮೀಟರ್‌ ಸೆನ್ಸರ್‌ಗಳನ್ನು ಒಳಗೊಂಡಿದೆ.

 ಕನೆಕ್ಟಿವಿಟಿ:

ಭಾರತದ ಮಾರುಕಟ್ಟೆಗೆ ನೋಕಿಯಾ ಲೂಮಿಯಾ 1520 ಬಿಡುಗಡೆ


ಸಿಂಗಲ್‌ ಸಿಮ್‌,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಎನ್‌ಎಫ್‌ಸಿ,3ಜಿ ಕನೆಕ್ಟಿವಿಟಿ ವಿಶೇಷತೆಗಳನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot