ನೋಕಿಯಾ ಆಫರ್: ಇಷ್ಟ ಇಲ್ಲ ಅಂದ್ರೆ ಹಣ ವಾಪಸ್

Posted By: Varun
ನೋಕಿಯಾ ಆಫರ್: ಇಷ್ಟ ಇಲ್ಲ ಅಂದ್ರೆ ಹಣ ವಾಪಸ್

ಹನ್ನೊಂದು ವರ್ಷಗಳಿಂದ ಏಶಿಯಾದ ಮೊಬೈಲ್ ಚಾಂಪಿಯನ್ ಆಗಿ ಮೆರೆದಿದ್ದ ನೋಕಿಯಾ ಸ್ಯಾಮ್ಸಂಗ್ ಗೆ ತನ್ನ ಪಟ್ಟವನ್ನು ಈ ವರ್ಷ ಬಿಟ್ಟು ಕೊಟ್ಟಿರುವ ಹಿನ್ನೆಲೆಯಲ್ಲಿಏಗುತ್ತಿರುವ ಕಂಪನಿ, ಮರಳಿ ತನ್ನ ಪಟ್ಟವನ್ನು ಹಿಂಪಡೆಯಲು ಸಾಹಸ ಮಾಡುತ್ತಿದೆ.

ಮೈಕ್ರೋ ಸಾಫ್ಟ್ ಗೆ ಮಾರಾಟವಾಗಬಹುದು ಎಂಬ ಗುಮ್ಮಾನಿಯೂಇರುವ ಸದ್ಯದ ಪರಿಸ್ಥಿತಿಯಲ್ಲಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿರುವ ಇದು ಈಗ ನಮಗೆ ತಿಳಿದಿರುವ ಮಟ್ಟಿಗೆ ಯಾವ ಕಂಪನಿಯೂ ಇದುವರೆಗೆ ಕೊಡದ ಆಫರ್ ಒಂದನ್ನು ಕೊಟ್ಟಿದೆ.

ಅದೇನೆಂದರೆ ಹೆಸರುವಾಸಿಯಾದ ಮಾಡೆಲ್ ಗಳಾದ ನೋಕಿಯಾ ಲುಮಿಯಾ 800 ಹಾಗು ನೋಕಿಯಾ ಲುಮಿಯಾ 710 ಸ್ಮಾರ್ಟ್ ಫೋನ್ ಅನ್ನು ನೀವು ಖರೀದಿಸಿ ಅದು ನಿಮಗೆ ಇಷ್ಟವಿಲ್ಲದಿದ್ದರೆ ಅದನ್ನು ನೀವು ನೋಕಿಯಾಗೆ ಹಿಂದುರಿಗಿಸಬಹುದು ( ಖರೀದಿಸಿದ ಒಂದು ವಾರದ ಒಳಗೆ ಹಿಂದುರುಗಿಸಿದರೆ ಮಾತ್ರ ಹಣ ವಾಪಸ್).

ಲುಮಿಯಾ ಸರಣಿಯ ಈ ಎರಡೂ ವಿಂಡೋಸ್ ತಂತ್ರಾಂಶ ಆಧಾರಿತ ಫೋನುಗಳ ಈ ಹಣ ವಾಪಸ್ ಆಫರ್ ನಿಮಗೆ ಇಷ್ಟವಿದ್ದರೆ ಮೊದಲು ನೀವು ನೋಕಿಯಾದ ಫೇಸ್ ಬುಕ್ ಪೇಜ್ ಗೆ ಹೋಗಿ ನೋಂದಾಯಿಸಬೇಕು. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಯಾವ ಮಾಡೆಲ್ ಅನ್ನು ಖರೀದಿಸುತ್ತೀರ, ನಿಮ್ಮ ನಗರ, ಖರೀದಿಸಲು ಇಚ್ಚಿಸಲ್ಪಡುವ ಮಳಿಗೆ,, ಇವಿಷ್ಟೂ ದಾಖಲೆಗಳನ್ನು ಕೊಡಬೇಕು. ಕೊಟ್ಟ ನಂತರ ಡೀಲರ್ ನಿಮ್ಮನ್ನು ಸಂಪರ್ಕಿಸುತ್ತಾರೆ.

ಫೋನು ನಿಮಗೆ ಇಷ್ಟವಾದರೆ ಇಟ್ಟುಕೊಳ್ಳಬಹುದು, ಇಲ್ಲದಿದ್ದರೆ, ಖರೀದಿಸಿದ ಒಂದು ವಾರದ ಒಳಗೆ, ಸುಸ್ಥಿತಿಯಲ್ಲಿರುವ ಮೊಬೈಲ್ ಅನ್ನು ಖರೀದಿಸಿದ ಬಿಲ್ ನ ಜೊತೆ, ನೀವು ಖರೀದಿಸಿದ ಡೀಲರ್ ಗೆ ಹಿಂದಿರುಗಿಸಿದರೆ ನಿಮ್ಮ ಪೂರ್ಣ ಹಣ ವಾಪಸ್.

ಈ ಆಫರ್ ಗೆ ಕೊನೆ ದಿನವನ್ನೇನೂ ನೋಕಿಯಾ ನಿಗದಿಪಡಿಸಿಲ್ಲ. ಒಂದು ಟ್ರೈ ಮಾಡೇ ಬಿಡೋಣ ಎನಿಸಿದರೆ ಈಗಲೇ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಆಫರ್ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಜೊತೆಗೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.

ಫೇಸ್ ಬುಕ್ ಪೇಜ್

ಹಣ ವಾಪಸ್

ನೋಕಿಯಾ ಲುಮಿಯಾ ಎಂಥಾ ಸೂಪರ್ ಆಫರ್ ಮಾರಾಯ !

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot