Home
ಮೊಬೈಲ್

6GB RAM ಹೊಂದಿರುವ ನೋಕಿಯಾ ಪಿ1 ಪ್ರಿಮಿಯಮ್ ಸ್ಮಾರ್ಟ್‌ಪೋನ್

MWC ಶೋನಲ್ಲಿ ನೋಕಿಯಾ ಪಿ1 ಪ್ರಿಮಿಯಮ್ ಸ್ಮಾರ್ಟ್‌ಪೋನ್ ಪ್ರದರ್ಶನಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

By Srinidhi

ನೋಕಿಯಾ ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಲು ಭರ್ಜರಿ ತಯಾರಿಯ ನಡೆಸಿದೆ, ಮೊನ್ನೆ ಆರಂಭಿಕ ಬೆಲೆಯ ನೋಕಿಯಾ 6 ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲೇ ಪ್ರೀಮಿಯಮ್ ಸರಣಿಯ ಪೋನೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನೋಕಿಯಾ ಸಿದ್ಧತೆ ನಡೆಸಿದೆ.

ಓದಿರಿ: ಬರಲಿದೆ ಮೊಟೊ G5: ವಿಶೇಷತೆಗಳೇನು..?

ಮುಂದಿನ ತಿಂಗಳಲ್ಲಿ ನಡೆಯಲಿರುವ MWC ಶೋನಲ್ಲಿ ನೋಕಿಯಾ ಪಿ1 ಪ್ರಿಮಿಯಮ್ ಸ್ಮಾರ್ಟ್‌ಪೋನ್ ಪ್ರದರ್ಶನಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಪೋನಿನೊಂದಿಗೆ ಮತ್ತೊಂದು ಮಧ್ಯಮ ಬೆಲೆಯ ಪೋನು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

5.3 ಇಂಚಿನ ಡಿಸ್‌ಪ್ಲೇ:

5.3 ಇಂಚಿನ ಡಿಸ್‌ಪ್ಲೇ:

ನೋಕಿಯಾ ಪಿ1 ಸ್ಮಾರ್ಟ್‌ಪೋನು 5.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಪರದೆಯ ಸುರಕ್ಷತೆಗಾಗಿ ಗೋರಿಲ್ಲ ಗ್ಲಾಸ್ 5 ನೀಡಲಾಗಿದೆ. ಅಲ್ಲದೇ HD ಗುಣಮಟ್ಟದ ಡಿಸ್‌ಪ್ಲೇ ಉತ್ತಮ ವಿಡಿಯೋಗಳನ್ನು ನೋಡಲು ಸಹಾಯಕಾರಿಯಾಗಿದೆ.

6 GB RAM, 256 GB ಇಂಟರ್‌ನಲ್ ಮೆಮೊರಿ:

6 GB RAM, 256 GB ಇಂಟರ್‌ನಲ್ ಮೆಮೊರಿ:

ನೋಕಿಯಾ ಪಿ1 ಪ್ರೀಮಿಯಮ್ ಸ್ಮಾರ್ಟ್‌ಪೋನಾಗಿದ್ದು, ವೇಗದ ಕಾರ್ಯಚರಣೆಗಾಗಿ 6 GB RAM ನೀಡಲಾಗಿದ್ದು, ಕ್ವಾಲಕಮ್ ಸ್ನಾಪ್ಡ್ರಾಗ್ 835 ಪ್ರೋಸೆಸರ್ ಈ ಪೋನಿನಲ್ಲಿದೆ. ಅಲ್ಲದೇ ಈ ಪೋನಿನ ಇಂಟರ್‌ನಲ್ ಮೆಮೊರಿ 256 GB ಗಳಾಗಿದೆ. ಇದರೊಂದಿಗೆ 128 ಮೊಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ ನೀಡಲಾಗಿದೆ.

22.6 MP ಕ್ಯಾಮೆರಾ:

22.6 MP ಕ್ಯಾಮೆರಾ:

ನೋಕಿಯಾ ಪಿ1 ಸ್ಮಾರ್ಟ್‌ಪೋನು ಚಿತ್ರಗಳನ್ನು ತೆಗೆಯಲು ಹೇಳಿ ಮಾಡಿಸಿದಂತಿದ್ದು, ಹಿಂಭಾಗದಲ್ಲಿ 22.6 MP ಕ್ಯಾಮೆರಾವನ್ನು ನೀಡಲಾಗಿದ್ದು, ಎಲ್‌ಇಡಿ ಫ್ಲಾಷ್ ಸಹ ಜೊತೆ ಇದೆ. ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ. ಅಲ್ಲದೇ ನೀರು ಮತ್ತು ಧೂಳಿನಿಂದ ಮೊಬೈಲ್ ರಕ್ಷಣೆಯನ್ನು ಹೊಂದಿದೆ ಎನ್ನಲಾಗಿದೆ.

3,500mAh ಬ್ಯಾಟರಿ:

3,500mAh ಬ್ಯಾಟರಿ:

ನೋಕಿಯಾ ತನ್ನ ಪ್ರೀಮಿಯಮ್ ಸ್ಮಾರ್ಟ್‌ಪೋನಿನಲ್ಲಿ 3,500mAh ಬ್ಯಾಟರಿಯನ್ನು ಅಳವಡಿಸಿದ್ದು, ಇದರೊಂದಿಗೆ ಕ್ವೀಕ್ ಚಾರ್ಜಿಂಗ್ ಆಯ್ಕೆಯನ್ನು ನೀಡುತ್ತಿದೆ. ಅಲ್ಲದೇ ಈ ಪೋನು ಆಂಡ್ರಾಯ್ಟ್ ನ್ಯೂಗಾದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Best Mobiles in India

English summary
Nokia P1 will be one of the smartphones expected to be unveiled at MWC 2017 next month. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+