Subscribe to Gizbot

ಬರಲಿದೆ ಮೊಟೊ G5: ವಿಶೇಷತೆಗಳೇನು..?

Written By:

ಈಗಾಗಲೇ ಮೊಟೊರೋಲಾ ಕಂಪನಿಯು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಅದರಲ್ಲಿಯೂ ಮೊಟೊ G ಸರಣಿಯ ಪೋನುಗಳು ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿವೆ. ಇದೇ ಹಿನ್ನಲೆಯಲ್ಲಿ ಮೊಟೊ G5 ಸ್ಮಾರ್ಟ್‌ಪೋನು ಶೀಘ್ರವೇ ಮಾರುಕಟ್ಟೆಗೆ ಬರಲಿದೆ.

ಬರಲಿದೆ ಮೊಟೊ G5: ವಿಶೇಷತೆಗಳೇನು..?

ಓದಿರಿ: ಐಬಾಲ್ ನಿಂದ ರೂ.8,999ಕ್ಕೆ 4G ಡುಯಲ್ ಸಿಮ್ ಟಾಬ್ಲೆಟ್ ಬಿಡುಗಡೆ

ಮುಂದಿನ ತಿಂಗಳು ನಡೆಯಲಿರುವ MWC ಶೋನಲ್ಲಿ ಮೊಟೊ G5 ಸ್ಮಾರ್ಟ್‌ಪೋನು ಪ್ರದರ್ಶನಗೊಳ್ಳಲಿದೆ. ಮೊಟೊ G5 ಮತ್ತು ಮೊಟೊ G5 ಪ್ಲೇಸ್ ಎನ್ನುವ ಎರಡು ಪೋನುಗಳು ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟರ್ಬೋ ಚಾರ್ಜರ್ ಹೊಂದಿರುವ 3000 mAh ಬ್ಯಾಟರಿ :

ಟರ್ಬೋ ಚಾರ್ಜರ್ ಹೊಂದಿರುವ 3000 mAh ಬ್ಯಾಟರಿ :

ಮೊಟೊ G5 ಸ್ಮಾರ್ಟ್‌ಪೋನು 3000 mAh ಬ್ಯಾಟರಿಯೊಂದಿಗೆ ಬರಲಿದ್ದು, ಇದರೊಂದಿಗೆ ಟರ್ಬೋ ಚಾರ್ಜರ್ ಹೊಂದಿದೆ, ಇದು ವೇಗದ ಚಾರ್ಜಿಂಗ್‌ಗೆ ಸಹಾಯ ಮಾಡಲಾಗಿದೆ.

5,5 ಇಂಚಿನ FHD ಡಿಸ್‌ಪ್ಲೇ:

5,5 ಇಂಚಿನ FHD ಡಿಸ್‌ಪ್ಲೇ:

ಮೊಟೊ G5 ಸ್ಮಾರ್ಟ್‌ಪೋನಿನಲ್ಲಿ 5,5 ಇಂಚಿನ FHD ಡಿಸ್‌ಪ್ಲೇ ಇದ್ದು, ಗುಣಮಟ್ಟದ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಈ ಪೋನಿನಲ್ಲಿ 64 ಬಿಟ್ ಕ್ವಾಲಮ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಇದೆ. ಇದರೊಂದಿಗೆ 3GB RAM ಹೊಂದಿದ್ದು, ಪೋನು ಎರಡು ಮಾದರಿಯಲ್ಲಿ ಲಭ್ಯವಿದೆ. 16 GB ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಆಂಡ್ರಾಯ್ಡ್ 7.1 ರಲ್ಲಿ ಕಾರ್ಯನಿರ್ವಹಿಸಲಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಮೊಟೊ G5 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ ಎಲ್‌ಇಡಿ ಪ್ಲಾಫ್ ನೊಂದಿಗೆ 13 MP ಕ್ಯಾಮೆರಾವನ್ನು ಹೊಂದಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಮೊಟೊ G5 ಸ್ಮಾರ್ಟ್‌ಪೋನಿನ ಮುಂಭಾದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದ್ದು, ಈ ಹಿಂದಿನ ಪೋನುಗಳಲ್ಲಿಯೂ ಮುಂಭಾಗದಲ್ಲಿಯೇ ಪ್ರಿಂಟ್ ಸ್ಕ್ಯಾನರ್ ಇದ್ದು, ಇದ ಈ ಪೋನಿನ ಪ್ರಮುಖ ಆಕರ್ಷಣೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
We are already aware that the next generation Moto G5 will take the stage next month on February 26 ahead of the MWC 2017. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot