ಬಂತು ನೋಕಿಯಾ 41 ಮೆಗಾ ಪಿಕ್ಸೆಲ್ ಮೊಬೈಲ್

Posted By: Varun
ಬಂತು ನೋಕಿಯಾ 41 ಮೆಗಾ ಪಿಕ್ಸೆಲ್ ಮೊಬೈಲ್

ಬಹು ನಿರೀಕ್ಷಿತಹಾಗು ಇದುವರೆಗೂ ಇರುವ ಕ್ಯಾಮರಾ ಮೊಬೈಲುಗಳಲ್ಲೇ ಅತಿ ಹೆಚ್ಚು ಮೆಗಾ ಪಿಕ್ಸೆಲ್ ಇರುವ ನೋಕಿಯಾದ ಪ್ಯೂರ್ ವ್ಯೂ 808 ಕ್ಯಾಮರಾ ಮೊಬೈಲ್ಅನ್ನು ನೋಕಿಯಾ ಇವತ್ತು ಭಾರತೀಯ ಗ್ರಾಹಕರಿಗಾಗಿ ಬಿಡುಗಡೆಯಾಯಿತು.

ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ನೋಕಿಯಾದ 41 ಮೆಗಾಪಿಕ್ಸೆಲ್ ಕ್ಯಾಮರಾ ಇರುವ ನೋಕಿಯಾ ಪ್ಯೂರ್ ವ್ಯೂ 808 ಮೊಬೈಲ್, ವಿಶ್ವ ವಿಖ್ಯಾತ ಲೆನ್ಸ್ ತಯಾರಕ ಕಾರ್ಲ್ ಜೇಸ್ ಲೆನ್ಸ್ ಹೊಂದಿದ್ದು, 33,899 ರೂಪಾಯಿಗೆ ಬರಲಿದೆ.

2 ಮೆಗಾಪಿಕ್ಸೆಲ್ ನಿಂದ ಹಿಡಿದು 38 ಮೆಗಾ ಪಿಕ್ಸೆಲ್ ವರೆಗೆ ಇಮೇಜ್ ಗಳನ್ನು ಇದರಲ್ಲಿ ತೆಗೆಯಬಹುದಾಗಿದ್ದು, ಸಿಮ್ಬಿಯನ್ ತಂತ್ರಾಂಶ ಇರಲಿದೆ. 4 ಇಂಚ್ AMOLED ಡಿಸ್ಪ್ಲೇ, ತರಚು ನಿರೋಧಕ ಗೊರಿಲ್ಲಾ ಗ್ಲಾಸ್, 1.3 GHz ಪ್ರೋಸೆಸರ್, 16 GB ಆಂತರಿಕ ಮೆಮೊರಿ, ಹಾಗು 512 MB ರಾಮ್ ಇದೆ.

ಮೇ ತಿಂಗಳಲ್ಲೇ ಇದನ್ನು ಬಿಡುಗಡೆ ಮಾಡಬೇಕಿದ್ದ ನೋಕಿಯಾ ಹಲವಾರು ಕಾರಣಗಳಿಂದ ದಿನಾಂಕವನ್ನು ಮುಂದೂಡಿತ್ತು ಎಂಬುದನ್ನು ಓದುಗರು ನೆನಪಿಸಿಕೊಳ್ಳಬಹುದು.

ಈ 41 ಮೆಗಾ ಪಿಕ್ಸೆಲ್ ಕ್ಯಾಮರಾದ ಫೀಚರುಗಳನ್ನು ನೀವು ಇಲ್ಲಿ ನೋಡಿ ವೀಡಿಯೋ ಮೂಲಕ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot