Subscribe to Gizbot

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌‌ಫೋನಿನ ಬೆಲೆ ದಿಢೀರ್‌ ಇಳಿಕೆ

Posted By:

ನೋಕಿಯಾ ಕಂಪೆನಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್‌ ಇಳಿಕೆಯಾಗಿದೆ. ಮಾರ್ಚ್‌‌ ಎರಡನೇ ವಾರದಲ್ಲಿ ಭಾರತದ ಮಾರುಕಟ್ಟೆಗೆ ನೋಕಿಯಾ ಎಕ್ಸ್ 8,599 ರೂ.ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈಗ ಈ ಸ್ಮಾರ್ಟ್‌ಫೋನ್ 800 ರೂಪಾಯಿ ಕಡಿಮೆಯಾಗಿದ್ದು,7795 ರೂ. ಬೆಲೆಯಲ್ಲಿ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಲಭ್ಯವಿದೆ.

ನೋಕಿಯಾ ಕಂಪೆನಿಯ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಸ್ಮಾರ್ಟ್‌‌ಫೋನ್‌ ಇದಾಗಿದ್ದು ,4 ಇಂಚಿನ ಸ್ಕ್ರೀನ್‌(480x800 ಪಿಕ್ಸೆಲ್‌),1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌ 4ಜಿಬಿ ಆಂತರಿಕ ಮೆಮೊರಿ,ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ರಹಿತ 3 ಎಂಪಿ ಕ್ಯಾಮೆರಾವನ್ನು ಹೊಂದಿದೆ.ಆಂಡ್ರಾಯ್ಡ್‌‌,ವಿಂಡೋಸ್‌ ಓಎಸ್‌ ಮಿಶ್ರಣಗೊಂಡಿರುವ ಹೊಸ ಯೂಸರ್‌‌ ಇಂಟರ್‌ಫೇಸ್‌ನ್ನು ನೋಕಿಯಾ ಈ ಫೋನಿಗೆ ನೀಡಿದೆ.

ನೋಕಿಯಾ ಎಕ್ಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ನೋಕಿಯಾ ಎಕ್ಸ್‌ ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ


ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಬೆಲೆ ಕಡಿಮೆಯಾದರೂ ನೋಕಿಯಾದ ಅಧಿಕೃತ ಶಾಪಿಂಗ್‌ ತಾಣದಲ್ಲಿ ಬೆಲೆ ಕಡಿಮೆಯಾಗಿಲ್ಲ.ಈ ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗಾಗಿ ಇಲ್ಲಿ ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ನೀಡಲಾಗಿದ್ದು ಯಾವ ತಾಣದಲ್ಲಿ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ ಎನ್ನುವುದನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ: ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot