ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

By Ashwath
|

ನೋಕಿಯಾ ಕಂಪೆನಿಯ ಆಂಡ್ರಾಯ್ಡ್ ಓಎಸ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.ನೋಕಿಯಾ ಆಂಡ್ರಾಯ್ಡ್‌‌‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಈಗ ಸಂತೋಷವಾಗಿರಬಹುದು. ಆದರೆ ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಮೊದಲು ಕೆಲವೊಂದು ಅಂಶಗಳನ್ನು ತಿಳಿದು ಆಮೇಲೆ ಖರೀದಿ ನಿರ್ಧಾರಕ್ಕೆ ಬಂದರೆ ಒಳ್ಳೇಯದು.

ನೋಕಿಯಾ ಕಂಪೆನಿಯ ಆಶಾ ಸರಣಿಯ ಫೋನ್‌ಗಳಿಗೆ ಈಗಲೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇನ್ನು ನೋಕಿಯಾದ ವಿಂಡೋಸ್‌ ಫೋನ್‌ಗಳಿಗೂ ಈಗ ಈಗ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ವಿಶೇಷತೆಗಳನ್ನು ಹೊಂದಿರುವ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ಗಳನ್ನು ನೋಕಿಯಾ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನೋಕಿಯಾ ಬಿಡುಗಡೆ ಮಾಡಿದೆ. ಹೀಗಾಗಿ ಹೊಸದಾಗಿ ನೋಕಿಯಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಎಂದು ಹುಮ್ಮಸ್ಸಿನಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸುವ ಮೊದಲು ಕೆಲವೊಂದು ಅಂಶಗಳನ್ನು ತಿಳಿದು ಖರೀದಿಸಿದರೆ ಉತ್ತಮ.

ಆಂಡ್ರಾಯ್ಡ್ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ ಓಎಸ್‌:


ಗೂಗಲ್‌ ಆಂಡ್ರಾಯ್ಡ್‌ ಓಎಸ್‌ಗೆ ಎಂದೇ ಕೆಲವೊದು ಕೋಡ್‌ ಸಿದ್ದಪಡಿಸಿದೆ.ನೋಕಿಯಾ ಎಕ್ಸ್‌ ಸ್ಮಾರ್ಟ್‌ಫೋನ್‌‌‌ ಆಂಡ್ರಾಯ್ಡ್‌ 4.1 ಓಪನ್‌ ಸೋರ್ಸ್‌‌‌ ಆವೃತ್ತಿ ಇರುವ ಓಎಸ್‌ನ್ನು ಒಳಗೊಂಡಿದೆ. ಗೂಗಲ್‌ನವರೇ ಆಂಡ್ರಾಯ್ಡ್‌ಗೆಂದೆ ಸಿದ್ದ ಪಡಿಸಿರುವ ಹೊರತಾದ ಕೋಡ್‌ ‌ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿರುವುದರಿಂದ ಜೀ ಮೇಲ್‌‌,ಗೂಗಲ್‌ ಮ್ಯಾಪ್‌‌,ಗೂಗಲ್‌ ಡ್ರೈವ್‌‌ ನಂತಹ ಗೂಗಲ್‌ ಸೇವೆಗಳು ಇದರಲ್ಲಿ ಇಲ್ಲ

 ಯೂಸರ್‌ ಇಂಟರ್‌ಫೇಸ್‌:

ಯೂಸರ್‌ ಇಂಟರ್‌ಫೇಸ್‌:

ಇದರಲ್ಲಿರುವ ಯೂಸರ್‌ ಇಂಟರ್‌ಫೇಸ್‌‌ ಯಾವುದು ಎನ್ನುವುದು ಗೊಂದಲ ವಿಚಾರ. ವಿಂಡೋಸ್‌ ಓಎಸ್‌ನಂತೆ ಇದರಲ್ಲೂ ಲೈವ್ ಟೈಲ್ಸ್‌ ಇದೆ. ಎರಡು ಹೋಮ್‌ ಸ್ಕ್ರೀನ್‌ಗಳಿವೆ. ಒಂದು ಸ್ಕ್ರೀನ್‌ಲ್ಲಿ ಈ ಹಿಂದೆ ಬಳಕೆ ಮಾಡಿದ ಆಪ್‌‌ ನೋಟಿಫಿಕೇಶನ್‌ ಕಾಣುತ್ತಿದ್ದರೆ, ಇನ್ನೊಂದರಲ್ಲಿ ಟೈಲ್‌ಆಪ್‌ ಲಾಂಚರ್‌ ಇದೆ. ಟೈಲ್ಸ್‌ಗಳನ್ನು ಬೇಕಾದ ಗಾತ್ರಕ್ಕೆ ಬದಲಾಯಿಸಬಹುದು.

ಲೂಮಿಯ ಸರಣಿಯ ಫೋನ್‌‌ಗಳಲ್ಲಿ ಹೋಮ್‌ ಸ್ಕ್ರೀನ್‌‌ ಮೂರು ಬಟನ್‌ಗಳಿರುತ್ತದೆ. ಸರ್ಚ್‌,ಹೋಮ್‌,ಬ್ಯಾಕ್‌ ಬಟನ್‌‌ಗಳಿರುತ್ತದೆ. ಆದರೆ ಈ ಫೋನ್‌ಗೆ ಮಧ್ಯದಲ್ಲೇ ಒಂದು ಬಟನ್‌ ನೀಡಲಾಗಿದ್ದು ಬ್ಯಾಕ್‌ ಬಟನ್‌ನಂತೆ ಈ ಬಟನ್‌ ಕಾರ್ಯ‌ನಿರ್ವ‌ಹಿಸುತ್ತದೆ.
 ಮಾಲ್‌ವೇರ್‌ ಬರುವ ಸಾಧ್ಯತೆ ಹೆಚ್ಚು:

ಮಾಲ್‌ವೇರ್‌ ಬರುವ ಸಾಧ್ಯತೆ ಹೆಚ್ಚು:


ಆಂಡ್ರಾಯ್ಡ್‌ ಆಪ್‌‌ಗಳನ್ನು ನೇರವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲದ ಕಾರಣ ಥರ್ಡ್‌ ಪಾರ್ಟಿ‌ ಸ್ಟೋರ್‌‌ಗಳಿಂದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳನ್ನು ಗೂಗಲ್‌ ಪರೀಶಿಲಿಸಿ ತನ್ನ ಸ್ಟೋರ್‌‌‌ಗೆ ಸೇರಿಸುತ್ತದೆ. ಆದರೆ ಥರ್ಡ್ ಪಾರ್ಟಿ ಆಪ್‌‌ಗಳು ಸ್ಟೋರ್‌‌‌ಗಳ ಬಗ್ಗೆ ಸುರಕ್ಷತೆ ಬಗ್ಗೆ ಬಳಕೆದಾರರಲ್ಲಿ ಗೊಂದಲವಿದೆ. ಹೀಗಾಗಿ ಈ ಸ್ಟೋರ್‌ನಿಂದ ಆಪ್‌ ಡೌನ್‌ಲೋಡ್‌ ಮಾಡಿದ್ದಲ್ಲಿ ಮಾಲ್‌ವೇರ್‌ಗಳು ಸ್ಮಾರ್ಟ್‌‌ಫೋನ್‌ಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

 ಓಎಸ್‌ ಅಪ್‌ಗ್ರೇಡ್‌..?

ಓಎಸ್‌ ಅಪ್‌ಗ್ರೇಡ್‌..?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನಿಮ್ಮಲ್ಲಿದ್ದರೆ ಅದನ್ನು ಹೊಸ ಓಎಸ್‌ ಅಪ್‌ಗ್ರೇಡ್‌ ಮಾಡಬಹುದು. ಇನ್ನು ವಿಂಡೋಸ್‌ ಓಎಸ್‌ ಇದ್ದರೂ ಮೈಕ್ರೋಸಾಫ್ಟ್‌ ಬಳಕೆದಾರರಿಗೆ ಓಎಸ್‌ ಅಪ್‌ಗ್ರೇಡ್‌‌‌ ನೀಡುತ್ತದೆ. ಆದರೆ ನೋಕಿಯಾದ ಈ ಹೊಸ ನೋಕಿಯಾ ಎಕ್ಸ್‌ ಓಎಸ್‌ಗೆ ಅಪ್‌ಗ್ರೇಡ್‌ ನೀಡುತ್ತದೋ ಎನ್ನುವ ಬಗ್ಗೆ ಇನ್ನು ಗೊಂದಲವಿದೆ.ನೋಕಿಯಾ ಕಂಪೆನಿಯನ್ನು ಮೈಕ್ರೋಸಾಫ್ಟ್‌ ಖರೀದಿ ಸಿರುವುದರಿಂದ ಮೈಕ್ರೋಸಾಫ್ಟ್‌ ಗೂಗಲ್‌‌ನ ಆಂಡ್ರಾಯ್ಡ್‌ಗೆ ಬೆಂಬಲ ನೀಡುವ ಸಾಧ್ಯತೆ ಕಡಿಮೆ. ಹೊಸ ಓಎಸ್‌ ಅಪ್‌‌ಗ್ರೇಡ್‌ ಆಗಬೇಕಿದ್ದಲ್ಲಿ ಆ ಓಎಸ್‌ ವಿಶ್ವದಲ್ಲಿ ಅಷ್ಟು ಪ್ರಚಾರವಾಗಿ ಸ್ಮಾರ್ಟ್‌‌ಫೋನಿಗೆ ಬೇಡಿಕೆ ಹೆಚ್ಚಾಗಬೇಕು. ಸದ್ಯದ ಸ್ಮಾರ್ಟ್‌ಫೋನ್‌ ಓಎಸ್‌ ಮಾರುಕಟ್ಟೆ ಗಮನಿಸಿದಾಗ ಈ ರೀತಿ ಬದಲಾವಣೆ ಅಸಾಧ್ಯ.

 ಹಾರ್ಡ್‌ವೇರ್‍ ಅಷ್ಟಕಷ್ಟೇ:

ಹಾರ್ಡ್‌ವೇರ್‍ ಅಷ್ಟಕಷ್ಟೇ:


ನೋಕಿಯಾ ಎಕ್ಸ್‌ 1GHz ಕ್ವಾಲಕಂ ಸ್ನಾಪ್‌‌‌ಡ್ರಾಗನ್ ಡ್ಯುಯಲ್ ಕೋರ್‌ ಪ್ರೊಸೆಸರ್‌ 512 ಎಂಬಿ ರ್‍ಯಾಮ್‌‌,4ಜಿಬಿ ಆಂತರಿಕ ಮೆಮೊರಿ,32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ನೋಕಿಯಾ ಎಕ್ಸ್‌ ಪ್ಲಸ್‌ ಮತ್ತು ಎಕ್ಸ್‌ ಎಲ್‌ 768 ಎಂಬಿ ರ್‍ಯಾಮ್‌‌, ಅದೇ ಪ್ರೊಸೆಸರ್‌‌ನೊಂದಿಗೆ ಬಿಡುಗಡೆಯಾಗಿದೆ.ನೋಕಿಯಾ ಎಕ್ಸ್‌ಗೆ ಭಾರತದಲ್ಲಿ 8,599 ರೂಪಾಯಿ ಬೆಲೆಯನ್ನು ಬೆಲೆಯನ್ನು ನಿಗದಿ ಪಡಿಸಿದೆ. ಈ ಬೆಲೆಗೆ ನೀವು ದೇಶೀಯ ಕಂಪೆನಿ ಅಥವಾ ಚೀನಾ ಕಂಪೆನಿಗಳ ಗುಣಮಟ್ಟದ ಸ್ಮಾರ್ಟ್‌‌ಫೋನ್‌ ಖರೀದಿಸಬಹುದು.

ಇನ್ನೂ ನೋಕಿಯಾ ಕಂಪೆನಿಯದ್ದೇ ಫೋನ್‌ ಬೇಕು ಎಂದಿದ್ದಲ್ಲಿ ಇದೇ ಬೆಲೆಗೆ ಲೂಮಿಯಾ 520,525 ಸ್ಮಾರ್ಟ್‌‌ಫೋನ್‌ ಖರೀದಿಸಬಹುದು.

ಕ್ಯಾಮೆರಾ:

ಕ್ಯಾಮೆರಾ:


ನೋಕಿಯಾ ಫೋನ್‌ಗಳ ಕ್ಯಾಮೆರಾ ಗುಣಮಟ್ಟ ಯಾವಾಗಲೂ ಉತ್ತಮವಾಗಿರುತ್ತದೆ ಎಂದು ಹೇಳಿ ನೋಕಿಯಾ ಕಂಪೆನಿಯ ಸ್ಮಾರ್ಟ್‌‌ಫೋನ್ ಖರೀದಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಈ ಸ್ಮಾರ್ಟ್‌‌ಫೋನ್‌ಗಳು 3 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಮುಂದುಗಡೆ ಕ್ಯಾಮೆರಾ ಸೌಲಭ್ಯವನ್ನೇ ನೀಡಿಲ್ಲ.ಇನ್ನು ರಾತ್ರಿ,ಮಂದ ಬೆಳಕಿನಲ್ಲಿ ಚೆನ್ನಾಗಿ ಫೋಟೋ ತೆಗೆಯಲು ಸಾಧ್ಯವೇ ಇಲ್ಲ. ಏಕೆಂದರೆ ಸ್ಮಾರ್ಟ್‌‌ಫೋನಿಗೆ ಎಲ್‌ಇಡಿ ಫ್ಯಾಶ್‌ ನೀಡಿಲ್ಲ. ಈ ಸ್ಮಾರ್ಟ್‌ಫೋನ್‌ಲ್ಲಿ ಖರೀದಿಸಿ ಫೋಟೋ ತೆಗೆಯುಬೇಕು ಎಂದು ಯೋಚಿಸಿದವರಿಗೆ ಈ ದುಬಾರಿ ಸ್ಮಾರ್ಟ್‌‌‌ಫೋನಿಂದ ನೀರಿಕ್ಷಿಸಿದ ಲಾಭ ಸಿಗಲಾರದು.

 ಗೂಗಲ್‌ ಸೇವೆಗಳ ಅಲಭ್ಯತೆ:

ಗೂಗಲ್‌ ಸೇವೆಗಳ ಅಲಭ್ಯತೆ:


ಗೂಗಲ್‌ ತನ್ನ ಆಂಡ್ರಾಯ್ಡ್ ಓಎಸ್‌ಗೆಹೊಸ ಹೊಸ ವಿಶೇಷತೆಗಳನ್ನು ಸೇರಿಸುತ್ತಲೇ ಇರುತ್ತದೆ. ಈ ಎಲ್ಲಾ ಸೇವೆಗಳಿಂದ ಈ ಸ್ಮಾರ್ಟ್‌ಫೋನ್ ಖರೀದಿಸಿದ ಬಳಕೆದಾರರು ವಂಚಿತರಾಗಲಿದ್ದಾರೆ. ಜಿಮೇಲ್‌ ಬದಲಾಗಿ ಮೈಕ್ರೋಸಾಫ್ಟ್‌ನ ಔಟ್‌‌ಲುಕ್‌‌, ಗೂಗಲ್‌ ಡ್ರೈವ್‌ ಬದಲಾಗಿ ಓನ್‌ ಡ್ರೈವ್‌ ಬಳಸಬೇಕಾಗುತ್ತದೆ. ಇನ್ನು ಗೂಗಲ್‌ ಮ್ಯಾಪ್‌ ಇಲ್ಲದ ಕಾರಣ ಬಿಂಗ್‌ ಮ್ಯಾಪ್‌ನ್ನು ಬಳಸಬೇಕಾಗುತ್ತದೆ. ಅಮೆರಿಕದಲ್ಲಿ ಬಿಂಗ್‌ ಮ್ಯಾಪ್‌ ಚೆನ್ನಾಗಿದ್ದರೂ ಭಾರತದಲ್ಲಿ ಗೂಗಲ್‌ ಮ್ಯಾಪ್‌ ನೀಡುವ ಸೇವೆಯನ್ನು ಈ ಮ್ಯಾಪ್‌ ನೀಡುತ್ತಿಲ್ಲ.ಆಂಡ್ರಾಯ್ಡ್‌ 4.1 ನಂತರ ಅವೃತ್ತಿಯ ಓಎಸ್‌ನಲ್ಲಿ ಗೂಗಲ್‌ ಧ್ವನಿಯಾಧರಿತ ಗೂಗಲ್‌ ನೌ ಸೇವೆಯನ್ನು ನೀಡುತ್ತದೆ. ಈ ವಿಶೇಷತೆಯಿಂದ ಈ ಸ್ಮಾರ್ಟ್‌‌ಫೋನ್‌ ಗ್ರಾಹಕರು ವಂಚಿತರಾಗಲಿದ್ದಾರೆ.

  ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಉದ್ದೇಶವೇನು?

ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಉದ್ದೇಶವೇನು?


ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗೇ ನೋಡಿದ್ದರೆ ಈ ವರ್ಷದ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌‌ಫೋನ್‌ ಪ್ರಶಸ್ತಿ ನೋಕಿಯಾ ಲೂಮಿಯಾ 520ಗೆ ಲಭಿಸಿದೆ.
ಮಾರುಕಟ್ಟೆಯಲ್ಲಿ ನೋಕಿಯಾ ಸ್ಥಾನಮಾನ ಈ ರೀತಿ ಇರುವಾಗ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಯಾಕೆ ಎನ್ನುವ ಗೊಂದಲ ಹಲವರಲ್ಲಿ ಇನ್ನೂ ಇದೆ. ಕೆಲವೊಂದು ಮಾಧ್ಯಮಗಳು ಪ್ರಕಟಿಸಿದಂತೆ ಹೊಸ ಪ್ರಯೋಗಕ್ಕಾಗಿ ಈ ಸ್ಮಾರ್ಟ್‌ಫೋನನ್ನು ನೋಕಿಯಾ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X