ನೋಕಿಯಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath
|

ನೋಕಿಯಾ ತನ್ನ ಪ್ರಥಮ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ಪ್ರೊಜೆಕ್ಟ್‌ನಲ್ಲಿ ಕಾರ್ಯ‌ನಿರ್ವ‌ಹಿಸುವ ಮೂರು ಸ್ಮಾರ್ಟ್‌ಫೋನ್‌‌ಗಳನ್ನು ಸ್ಪೈನ್‌ನಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌‌ನಲ್ಲಿ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದೆ.

ಈ ಮೂರು ಸ್ಮಾರ್ಟ್‌‌ಫೋನ್‌ಗಳು ಕಸ್ಟಮೈಸ್ಡ್‌ ಆಂಡ್ರಾಯ್ಡ್‌ 'ನೋಕಿಯಾ ಎಕ್ಸ್‌'‌ ಹೆಸರಿನ ಹೊಸ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.ಈ ಫೋನ್‌ಗಳಿಗೆ ನೋಕಿಯಾ ವಿಶೇಷವಾದ ಯೂಸರ್‌‌ ಇಂಟರ್‌ಫೇಸ್‌ನ್ನು ಪರಿಚಯಿಸಿದೆ.ಹೀಗಾಗಿ ನೇರವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ. ಬದಲಾಗಿ ಥರ್ಡ್‌ ಪಾರ್ಟಿ ಮೂಲದಿಂದ‌ ಆಂಡ್ರಾಯ್ಡ್‌‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
‌‌
ಮೂರು ಸ್ಮಾರ್ಟ್‌‌ಫೋನ್‌ಗಳು ಡ್ಯುಯಲ್‌ ಸಿಮ್‌‌‌ ಬೆಂಬಲ ನೀಡುತ್ತವೆ.ನೋಕಿಯಾ ಎಕ್ಸ್‌ ಸ್ಮಾರ್ಟ್‌‌ಫೋನಿಗೆ 89 ಯುರೋ(ಅಂದಾಜು 7,500 ರೂಪಾಯಿ), ನೋಕಿಯಾ ಎಕ್ಸ್‌ ಎಲ್‌ 99 ಯರೋ(ಅಂದಾಜು 8,400 ರೂಪಾಯಿ)ನೋಕಿಯಾ ಎಕ್ಸ್‌ ಪ್ಲಸ್‌ 109 ಯುರೋ(ಅಂದಾಜು 9,300 ರೂಪಾಯಿ) ನಿಗದಿ ಪಡಿಸಿದೆ.

ಮುಂದಿನ ಪುಟದಲ್ಲಿ ಈ ಮೂರು ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಮತ್ತು ಯೂಸರ್‌‌ ಇಂಟರ್‌ಫೇಸ್‌ ಹೇಗಿದೆ ಎಂದು ತೋರಿಸುವ ವಿಡಿಯೋ ನೀಡಲಾಗಿದೆ.

 ನೋಕಿಯಾ ಎಕ್ಸ್‌

ನೋಕಿಯಾ ಎಕ್ಸ್‌

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
ನೋಕಿಯಾ ಎಕ್ಸ್‌ ಓಎಸ್‌‌
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

 ನೋಕಿಯಾ ಎಕ್ಸ್‌ ಎಲ್‌

ನೋಕಿಯಾ ಎಕ್ಸ್‌ ಎಲ್‌


ವಿಶೇಷತೆ:
5 ಇಂಚಿನ WVGAಸ್ಕ್ರೀನ್‌(480x800 ಪಿಕ್ಸೆಲ್‌)
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
768 ಎಂಬಿ ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
2000mAh ಬ್ಯಾಟರಿ

 ನೋಕಿಯಾ ಎಕ್ಸ್‌ ಪ್ಲಸ್‌

ನೋಕಿಯಾ ಎಕ್ಸ್‌ ಪ್ಲಸ್‌


ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ WVGA ಸ್ಕ್ರೀನ್‌(480x800 ಪಿಕ್ಸೆಲ್‌)
1GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌
4ಜಿಬಿ ಆಂತರಿಕ ಮೆಮೊರಿ
768 ಎಂಬಿ ರ್‍ಯಾಮ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ವಿಶೇಷತೆಯಿಲ್ಲ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಬ್ಲೂಟೂತ್‌,ಜಿಪಿಎಸ್‌‌,ವೈಫೈ
1500mAh ಬ್ಯಾಟರಿ

ನೋಕಿಯಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಿಡುಗಡೆ


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X