ಪ್ಲೇ ಸ್ಟೋರ್‌ ಬಿಟ್ಟರೆ ಆಂಡ್ರಾಯ್ಡ್ ಆಪ್‌ಗಳು ಎಲ್ಲಿ ಸಿಗುತ್ತವೆ?

By Ashwath
|

ಆಂಡ್ರಾಯ್ಡ್‌ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮಾತ್ರ ಸಿಗುತ್ತದೆ ಎನ್ನುವ ಭಾವನೆ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಲ್ಲಿದೆ. ಆದರೆ ಆಂಡ್ರಾಯ್ಡ್‌ ಆಪ್‌ಗಳು ಇಲ್ಲಿ ಮಾತ್ರ ದೊರೆಯದೆ ಉಳಿದ ಕಂಪೆನಿಗಳು ಆಂಡ್ರಾಯ್ಡ್ ಆಪ್‌ಗಳ ಸ್ಟೋರ್‌ಗಳನ್ನು ಮಾಡಿದ್ದಾರೆ. ಇವುಗಳಲ್ಲಿ ಕೆಲವು ಸ್ಟೋರ್‌‌ಗಳಲ್ಲಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರದ ಉಚಿತವಾಗಿ ಡೌನ್‌ಲೋಡ್‌ ಮಾಡುವ ಆಪ್‌ಗಳಿವೆ.

ಹೀಗಾಗಿ ಇಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಬದಲಾಗಿ ಬೇರೆ ಆಂಡ್ರಾಯ್ಡ್‌ ಆಪ್‌ಗಳು ದೊರೆಯುವ ಆಂಡ್ರಾಯ್ಡ್ ಅಂಗಡಿಗಳ ಮಾಹಿತಿಯನ್ನು ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡುವುದು ಹೇಗೆ?

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

25 ವಿವಿಧ ಕೆಟಗೆರಿಗಳಿದ್ದು ಸುಲಭವಾಗಿ ನೀವು ಬೇಕಾದ ಆಪ್‌ಗಳನ್ನು ಹುಡುಕಬಹುದು.ಜೊತಗೆ ಇದು ಅಪ್ಲಿಕೇಶನ್‌ಗಳಿರುವ ಸೈಟ್‌ ಎಂದು ಹೇಳುವುದಕ್ಕಿಂತಲೂ ಇದು ಆಂಡ್ರಾಯ್ಡ್‌ ನ್ಯೂಸ್‌ ಅಪ್ಲಿಕೇಶನ್‌ ಸೈಟ್‌ ಎಂದು ಹೇಳಬಹುದು. ಆಂಡ್ರಾಯ್ಡ್‌ ಹೊಸ ಅಪ್ಲಿಕೇಶನ್‌,ಜೊತಗೆ ವಿವಿಧ ಕಂಪೆನಿಗಳ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಈ ಸೈಟ್‌ನಲ್ಲಿ ಸಿಗುತ್ತದೆ.ಆಂಡ್ರಾಯ್ಡ್‌ ಆಪ್‌ ವಿಮರ್ಷೆ‌ ಆದರದ ಮೇಲೆ ನಿಮಗೆ ಬೇಕಾದ ಆಪ್‌ಗಳನ್ನು ಇಲ್ಲಿ ರೆಕಮಂಡ್‌ ಮಾಡುತ್ತಾರೆ.

ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ: Android Pit

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


ಇಲ್ಲಿ ಸುಮಾರು ಮೂರು ಲಕ್ಷಕ್ಕಿಂತಲೂ ಅಧಿಕ ಉಚಿತವಾಗಿ ಆಂಡ್ರಾಯ್ಡ್‌ ಆಪ್‌ಗಳು ದೊರೆಯುತ್ತವೆ. ಸುಲಭವಾಗಿ ಬೇಕಾದ ಆಪ್‌ಗಳನ್ನು ಹುಡುಕಿ ಡೌನ್‌ಲೋಡ್‌ ಮಾಡಬಹುದು.

ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ :1mobile.com

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


ಗೂಗಲ್‌ ಆಂಡ್ರಾಯ್ಡ್ ಪ್ಲೇ ಸ್ಟೋರ್‌‌ನಂತೆ ಸ್ಲೈಡ್‌ಮಿಯಲ್ಲಿ ಆಪ್‌ ಡೌನ್‌ಲೋಡ್‌ ಮಾಡಬಹುದು.ಆದರೆ ಈ ಆಪ್‌ ಮೂಲಕ ಡೌನ್‌ಲೋಡ್‌ ಮಾಡಬೇಕಿದ್ದಲ್ಲಿ ಮೊದಲು ಇಲ್ಲಿ ಅಕೌಂಟ್‌ ಕ್ರಿಯೆಟ್‌ ಮಾಡಬೇಕು.

ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ:Slideme

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


ಅಮೆಜಾನ್‌.ಕಾಂನಲ್ಲಿ ಸುಮಾರು 3,800 ಆಪ್‌ಗಳಿದ್ದು,ಆಂಡ್ರಾಯ್ಡ್‌ ಬಳಕೆದಾರರು ಈ ತಾಣದಲ ಮೂಲಕ ಆಪ್‌ ಡೌನ್‌ಲೋಡ್‌ ಮಾಡಬಹುದು.
ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ :amazon.com

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


ಗೇಮಿಂಗ್‌,ವಾಲ್‌ಪೇಪರ್‌,ಥಿಮ್ಸ್‌ಗೆ ಸಂಬಂಧಿಸಿದ ಆಪ್‌ಗಳಿದ್ದು, ಬಳಕೆದಾರರು ಈ ಸೈಟ್ ಮೂಲಕ ಡೌನ್‌ಲೋಡ್‌ ಮಾಡಬಹುದಾಗಿದೆ.
ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ:Mobo Market

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


AAOMarket ಸ್ಟೋರ್‌ನಲ್ಲಿರುವ ಎಲ್ಲಾ ಆಂಡ್ರಾಯ್ಡ್ ಆಪ್‌‌ಗಳು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು. ಅಷ್ಟೇ ಅಲ್ಲದೇ ಈ ವೆಬ್‌ಸೈಟ್‌ ಹೇಳುವಂತೆ ಗುಣಮಟ್ಟದ ಆಪ್‌ಗಳು, ಜನರ ಮೆಚ್ಚುಗೆಗಳಿಸಿರುವ ಆಪ್‌ಗಳನ್ನು ಮಾತ್ರ ಇಲ್ಲಿ ದೊರೆಯುತ್ತದೆ.
ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ: AAOMarket

 ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ

ಆಂಡ್ರಾಯ್ಡ್ ಆಪ್‌ಗಳು ಇಲ್ಲಿ ಸಿಗುತ್ತವೆ


ಉಚಿತವಾಗಿಯೇ ಎಲ್ಲಾ ಆಪ್‌ಗಳು ದೊರೆಯಬೇಕು ಎಂದು ನಿಮಗನಿಸಿದ್ದಲ್ಲಿ F-droid ತಾಣಕ್ಕೆ ಭೇಟಿ ನೀಡಬಹುದು.ಆಂಡ್ರಾಯ್ಡ್ ಎಲ್ಲಾ ಆಪರೇಟಿಂಗ್‌ ಸಿಸ್ಟಂಗೆ ಸಪೋರ್ಟ್‌ ಮಾಡುವ ಆಪ್‌ಗಳು ಈ ಸ್ಟೋರ್‌ನಲ್ಲಿದ್ದು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು.
ಈ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ: F-droid

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X