ಲಾಂಚ್ ಆಗಲಿದೆ 'ನೋಕಿಯಾ'ದ ಹೊಸ ಸ್ಮಾರ್ಟ್‌ಫೋನ್!.ಇರಲಿದೆ 48MP ಕ್ಯಾಮೆರಾ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ನೋಕಿಯಾ, ಆಂಡ್ರಾಯ್ಡ್ ಮಾದರಿಯ ನೂತನ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದು, ಇದಕ್ಕೆ ಪೂರಕವಾಗಿ ಇದೀಗ ಕಂಪನಿಯು ಹೊಸ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆಗೆ ಮಾಡಲು ಸಿದ್ಧವಾಗಿದೆ. ಲಾಂಚ್ ಆಗಲಿರುವ ನೋಕಿಯಾದ ಹೊಸ ಸ್ಮಾರ್ಟ್‌ಪೋನ್ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಹೌದು, ನೋಕಿಯಾ ಸಂಸ್ಥೆಯು ನೋಕಿಯಾ ಎಕ್ಸ್71 ಅಥವಾ ನೋಕಿಯಾ 6.2 ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಹೊರಬರಲಿದ್ದು, ಈ ಫೋನ್ ಇದೇ ಏಪ್ರಿಲ್ 2ರಂದು ತೈವಾನ್‌ನಲ್ಲಿ ರಿಲೀಸ್ ಆಗಲಿದೆ. ನೋಕಿಯಾ ಎಕ್ಸ್ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿದ್ದು, ಇದರ ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದರೊಂದಿಗೆ ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಡಿಸೈನ್ ಇರಲಿದೆ.

ಸ್ನ್ಯಾಪ್‌ಡ್ರಾಗನ್ 660 SoC ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದ್ದು, ಇದರೊಟ್ಟಿಗೆ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗಾದರೇ ನೋಕಿಯಾ ಎಕ್ಸ್71 ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳಿಂದ ಎಂಟ್ರಿ ಕೊಡಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನೋಕಿಯಾ 8.1 ಪ್ಲಸ್ ಅಥವಾ ನೋಕಿಯಾ 6.2
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ ಹೆಸರು ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ ಕಂಪನಿ ಅಧಿಕೃತ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ ಲೀಕ್ ಮಾಹಿತಿಗಳಿಂದ ತಿಳಿದಂತೆ ನೋಕಿಯಾ ಎಕ್ಸ್71 ಅಥವಾ ನೋಕಿಯಾ 8.1 ಪ್ಲಸ್ ಅಥವಾ ನೋಕಿಯಾ 6.2 ಹೆಸರು ಇವುಗಳಲ್ಲಿ ಯಾವ ಹೆಸರು ಫೈನಲ್ ಆಗಲಿದೆ ಎನ್ನುವುದು ಬಿಡುಗಡೆ ಸಮಯದಲ್ಲಿ ತಿಳಿಯಲಿದೆ.

ಡಿಸ್‌ಪ್ಲೇ
6.4 ಇಂಚಿನ ಸಂಪೂರ್ಣ ಹೆಚ್‌ಡಿ ರೆಸಲ್ಯೂಶನ್ ಇರುವ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ವಿಶಾಲವಾದ ಡಿಸ್‌ಪ್ಲೇ ವಿಡಿಯೋ ವೀಕ್ಷಣೆಗೆ ಮತ್ತು ಗೇಮ್ಸ್ ಆಡುವುದಕ್ಕೆ ರೋಚಕ ಅನುಭವ ಒದಗಿಸಲಿದೆ. ಈ ಹಿಂದಿನ ಲೀಕ್ ಮಾಹಿತಿಗಳು ಈ ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನುವುದನ್ನು ತಿಳಿಸಿದ್ದವು.

ಪ್ರೊಸೆಸರ್
ಈ ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲ ಇರಲಿದೆ ಎಂದು ಹೇಳಲಾಗುತ್ತಿದೆ. 6GB ಸಾಮರ್ಥ್ಯದ RAM ಇರಲಿದೆ ಎನ್ನಲಾಗುತ್ತಿದ್ದು, ಸ್ಮಾರ್ಟ್‌ಫೋನಿನ ಕಾರ್ಯವೈಖರಿಯ ವೇಗ ಹೆಚ್ಚಿಸಲು ಇದು ನೆರವಾಗಲಿದೆ.

ಕ್ಯಾಮೆರಾ
ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ನೀಡಲಾಗಿದ್ದು, ಮೊದಲ ಕ್ಯಾಮೆರಾ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದರೇ, ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸಲ್ ಸೆನ್ಸಾರ್ ಹೊಂದಿದೆ ಹಾಗೂ ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿವೆ ಎನ್ನಲಾಗುತ್ತಿದೆ. ಸೆಲ್ಫಿ ಕ್ಯಾಮೆರಾ ಸಾಮರ್ಥ್ಯದ ಬಗ್ಗೆ ಮಾಹಿತಿ ಇಲ್ಲ.

ಬ್ಯಾಟರಿ
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, ಒಂದು ದಿನಗಳ ಕಾಲ ನಿರಾತಂಕವಾಗಿ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದರೊಟ್ಟಿಗೆ ನೂತನ ವೈಫೈ ಮತ್ತು ಬ್ಲೂಟೂತ್ ಸೌಲಭ್ಯವನ್ನು ಹೊಂದಿರಲಿದೆ.

ಲಭ್ಯತೆ
ಹೊಸ ನೋಕಿಯಾ ಎಕ್ಸ್71 ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 2(ಇಂದು)ರಂದು ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವುದನ್ನು ಕಂಪನಿ ಅಧಿಕೃತವಾಗಿ ತಿಳಿಸಿಲ್ಲ.


Click it and Unblock the Notifications








