ನಥಿಂಗ್ ಫೋನ್ 2 V/S ಒನ್‌ಪ್ಲಸ್ 11R ಯಾವ ಫೋನ್ ಬೆಸ್ಟ್?..ನಿಮ್ಮ ಆಯ್ಕೆ ಯಾವುದು?
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಹುತೇಕ ಎಲ್ಲರಿಗೂ ಅವಶ್ಯಕ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಾರೆ. ಇತ್ತೀಚಿಗೆ 5G ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಸದ್ಯ ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಹಾಗೂ ಒನ್‌ಪ್ಲಸ್ 11R ಫೋನ್‌ಗಳು ಮೀಡ್‌ರೇಂಜ್ ದರದಲ್ಲಿ ಗಮನ ಸೆಳೆದಿವೆ.
ಹೌದು, ನಥಿಂಗ್ ಫೋನ್ 2 ಹಾಗೂ ಒನ್‌ಪ್ಲಸ್ 11R ಫೋನ್‌ಗಳು ಆಕರ್ಷಕ ಫೀಚರ್ಸ್, ಟ್ರೆಂಡಿಂಗ್ ಲುಕ್‌ನೊಂದಿಗೆ ಮಾರುಕಟ್ಟೆಯಲ್ಲಿ ಆಕರ್ಷಕವಾಗಿ ಕಾಣಿಸಿವೆ. ಈ ಎರಡು ಫೋನ್‌ಗಳು ಆಕರ್ಷಕ ಬಾಹ್ಯ ವಿನ್ಯಾಸ ಪಡೆದಿದೆ. ಇವೆರಡು ಭಿನ್ನ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಆದ್ರೆ, ಎರಡು ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.

ಇದರೊಂದಿಗೆಈ ಎರಡು ಮೊಬೈಲ್‌ಗಳು 5G ಸಪೋರ್ಟ್ ಅನ್ನು ಪಡೆದಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಹಾಗಾದರೆ ನಥಿಂಗ್ ಫೋನ್ 2 ಹಾಗೂ ಒನ್‌ಪ್ಲಸ್ 11R ಫೋನ್‌ಗಳ ಒಟ್ಟಾರೇ ಫೀಚರ್ಸ್ ಹೇಗಿವೆ?.. ಪ್ರಮುಖ ಭಿನ್ನತೆಗಳು ಏನು?.. ಖರೀದಿಗೆ ಯಾವ ಫೋನ್ ಉತ್ತಮ? ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ವಿನ್ಯಾಸದ ಭಿನ್ನತೆ : ನಥಿಂಗ್ ಫೋನ್ 2 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LTPO OLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದೇ ರೀತಿ ಒನ್‌ಪ್ಲಸ್ 11R ಮೊಬೈಲ್ 6.74 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2772 x 1240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ.
ಪ್ರೊಸೆಸರ್ ಕಾರ್ಯವೈಖರಿ ವ್ಯತ್ಯಾಸ : ನಥಿಂಗ್ ಫೋನ್ 2 ಮೊಬೈಲ್ ಕ್ವಾಲ್ಕಾಮ್ 4nm ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಇನ್ನು ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 5G SoC ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಪಡೆದಿದೆ. ಪ್ರೊಸೆಸರ್‌ನಲ್ಲಿ ಹೆಚ್ಚಿನ ಭಿನ್ನತೆ ಇಲ್ಲ ಎನ್ನಬಹುದು.
ಕ್ಯಾಮೆರಾ ಸೆನ್ಸಾರ್ ಭಿನ್ನತೆ ಏನು : ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಆಗಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿದೆ.
ಬ್ಯಾಟರಿ ಬ್ಯಾಕ್‌ಅಪ್ ಭಿನ್ನತೆ ಏನು : ನಥಿಂಗ್ ಫೋನ್ 2 ಸ್ಮಾರ್ಟ್‌ಫೋನ್ 4,700mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಈ ಫೋನ್ 45W PPS ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಅದೇ ರೀತಿ ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದು 100W SUPERVOOC S ಫ್ಲಾಶ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕೊನೆಯ ಮಾತು : ನಥಿಂಗ್ ಫೋನ್ 2 ಹಾಗೂ ಒನ್‌ಪ್ಲಸ್ 11R ಈ ಎರಡು ಫೋನ್‌ಗಳು ತಮ್ಮ ವರ್ಗದಲ್ಲಿ ಅತ್ಯುತ್ತಮ ಫೀಚರ್ಸ್‌ಗಳ ಆಯ್ಕೆ ಗ್ರಾಹಕರಿಗೆ ಲಭ್ಯ ಮಾಡಿವೆ. ಹಾಗೆಯೇ ಈ ಫೋನ್‌ಗಳು ವೇಗದ ಕಾರ್ಯಕ್ಷಮತೆಯ ಸಾಮರ್ಥ್ಯವನ್ನು ಪಡೆದಿವೆ. ಅದಾಗ್ಯೂ, ಅಂತಿಮವಾಗಿ ಬಳಕೆದಾರರ ಅನುಕೂಲತೆ ಹಾಗೂ ಬಜೆಟ್ ಮೇಲೆ ಫೋನ್ ಆಯ್ಕೆ ನಿರ್ಧಾರ ಸೂಕ್ತ.


Click it and Unblock the Notifications








