ಆಪಲ್ ಐಫೋನಿನಲ್ಲಿ ಕೂಡ ಸತ್ಯಮೇವ ಜಯತೆ

Posted By: Varun
ಆಪಲ್ ಐಫೋನಿನಲ್ಲಿ ಕೂಡ ಸತ್ಯಮೇವ ಜಯತೆ

ಸತ್ಯಮೇ, ಸತ್ಯಮೇ, ಸತ್ಯಮೇವ ಜಯತೆ, ಈ ಹಾಡನ್ನು ಇನ್ನು ಮೇಲೆ ನೀವು ಆಪಲ್ ಐಫೊನಿನಲ್ಲೂ ಕೇಳಬಹುದು. ಹೌದು, ಬಾಲಿವುಡ್ ನ ಸೂಪರ್ ಸ್ಟಾರ್ ಅಮೀರ್ ಖಾನ್ ನ ಸತ್ಯಮೇವ ಜಯತೆ ಕಾರ್ಯಕ್ರಮ, ಅದರ ಹಾಡು, ವೀಡಿಯೋಗಳನ್ನು ನಿಮ್ಮ ಆಪಲ್ ಐಫೋನಿನಲ್ಲಿ ನೋಡಲು iOS ಆಪ್ ಬಿಡುಗಡೆಯಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಆಂಡ್ರಾಯ್ಡ್ ಆಪ್ ಕೂಡಾ ಬರಲಿದೆ ಎಂಬ ಸುದ್ದಿ ಬಂದಿದೆ.

ನೀವು ಈ ಆಪ್ ಮೂಲಕ ಪ್ರತಿ ವಾರದ ಎಪಿಸೋಡ್ ಅನ್ನು ನಿಮ್ಮ ಆಪಲ್ ಐ ಫೋನಿನಲ್ಲಿ ನೀವು ಎಲ್ಲಿದ್ದರೂ ನೋಡಬಹುದು. ಐಸ್ಟೋರ್ ನಲ್ಲಿ 110 ರೂಪಾಯಿಗೆ ಇದನ್ನು ಡೌನ್ಲೋಡ್ ಮಾಡಬಹುದಾಗಿದ್ದು, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗು ಟ್ವಿಟರ್ ಜೊತೆ ಲಿಂಕ್ ಸಹ ಮಾಡಬಹುದಾಗಿದ್ದು, ನಿಮ್ಮ ಸ್ನೇಹಿತರ ಜೊತೆ ಈ ವೀಡಿಯೋಗಳನು ಹಂಚಿಕೊಳ್ಳಬಹುದಾದ ಸೌಲಭ್ಯವೂ ಇದೆ.

ಐಫೋನ್ 3GS, ಐಫೋನ್ 4, ಐಫೋನ್ 4S, ಐಪಾಡ್ ಟಚ್ (3 ಹಾಗು 4 ನೇ ತಲೆಮಾರು) ಹಾಗು ಐಪ್ಯಾಡ್ಗಳಿಗೆ ಸತ್ಯಮೇವ ಜಯತೆ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot