'ನೂಬಿಯಾದ' ಈ ಹೊಸ ಫೋನ್ ಕೈಯಲ್ಲಿ ಹಿಡಿಯುವುದಲ್ಲ! ಕೈಗೆ ಧರಿಸುವುದು!!

|

ಮೊಬೈಲ್‌ ತಂತ್ರಜ್ಞಾನ ಸಾಕಷ್ಟು ಬದಲಾವಣೆ ಕಂಡುಕೊಳ್ಳುತ್ತಿದ್ದು, ಸ್ಮಾರ್ಟ್‌ಫೋನ್‌ನಿಂದ ಹಿಡಿದು ಫೋಲ್ಡೆಬಲ್ ಫೋನ್ ವರೆಗೂ ಬದಲಾವಣೆ ಆಗುತ್ತಿರುವುದನ್ನು ಕಾಣುತ್ತಿದ್ದೆವೆ. ಈ ಬದಲಾವಣೆಯಲ್ಲಿಗ ಹೊಸ ಸೇರ್ಪಡೆ 'ಫ್ಲೇಕ್ಸಿಬಲ್ ವೇರೆಬಲ್ ಫೋನ್'. ಹೌದು, ಇಂಥದೊಂದು ನೂತನ ಫೋನ್ ಅನ್ನು 'ನೂಬಿಯಾ ಅಲ್ಫಾ' ಕಂಪನಿಯು ತಯಾರಿಸಿದ್ದು, ಇನ್ನು ಮುಂದೆ ಫೋನ್‌ ಅನ್ನು ಕೈಗೆ ಕಟ್ಟಿಕೊಂಡೆ ಓಡಾಡಬಹುದಾಗಿದೆ.

'ನೂಬಿಯಾದ' ಈ ಹೊಸ ಫೋನ್ ಕೈಯಲ್ಲಿ ಹಿಡಿಯುವುದಲ್ಲ! ಕೈಗೆ ಧರಿಸುವುದು!!

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2019 ಕಾರ್ಯಕ್ರಮದಲ್ಲಿ ನೂಬಿಯಾ ಅಲ್ಫಾ ಕಂಪನಿಯು ತನ್ನ ನೂತನ ಉತ್ಪನ್ನ ಫ್ಲೇಕ್ಸಿಬಲ್ ವೇರೆಬಲ್ ಫೋನ್‌ ಅನ್ನು ಪ್ರದರ್ಶಿಸಿದ್ದು, ಇದನ್ನು ಕೈಗೆ ವಾಚ್ ತರಹ ಧರಿಸಬಹುದಾಗಿದ್ದು, ಈ ಉತ್ಪನ್ನವನ್ನು 'ಫೋನ್‌ ಕಮ್ ಫಿಟ್‌ನೆಸ್‌ ಸ್ಮಾರ್ಟ್‌ವಾಚ್' ಎನ್ನಬಹುದಾಗಿದೆ. ದೇಹದಲ್ಲಿ ಕ್ಯಾಲೋರಿ ಮಟ್ಟ, ಹೃದಯ ಬಡಿತದ ಸೇರಿದಂತೆ ಫೀಟ್‌ನೆಸ್‌ ಮಾಹಿತಿಯನ್ನು ಒದಗಿಸುತ್ತದೆ.

'ನೂಬಿಯಾದ' ಈ ಹೊಸ ಫೋನ್ ಕೈಯಲ್ಲಿ ಹಿಡಿಯುವುದಲ್ಲ! ಕೈಗೆ ಧರಿಸುವುದು!!

ನೂಬಿಯಾ ಅಲ್ಫಾ ಕಂಪನಿಯ ಈ ಫೀಟ್‌ನೆಸ್ ಫೋನ್ 4 ಇಂಚಿನ OLED ಡಿಸ್‌ಪೇಯನ್ನು ಹೊಂದಿದ್ದು, ಬ್ಲೂಟೂತ್ ಮತ್ತು ಇ-ಸಿಮ್ ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದರೊಂದಿಗೆ 5 ಮೆಗಾಪಿಕ್ಸಲ್ ಸಾಮರ್ಥ್ಯದ ಫ್ರಂಟ್‌ ಕ್ಯಾಮೆರಾವನ್ನು ನೀಡಲಾಗಿದೆ. ಹಾಗಾದರೇ ನೂಬಿಯಾ ಅಲ್ಫಾ 'ಫ್ಲೇಕ್ಸಿಬಲ್ ವೇರೆಬಲ್ ಫೋನಿನ ರಚನೆ ಮತ್ತು ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫೀಟ್‌ನೆಸ್ಸ್ ಟ್ರಾಕರ್‌!

ಫೀಟ್‌ನೆಸ್ಸ್ ಟ್ರಾಕರ್‌!

ನೂಬಿಯಾ ಅಲ್ಫಾದ ಈ ಫೋನ್ ಕೇವಲ ಧರಿಸುವ ಫೋನ್ ಅಷ್ಟೇ ಅಲ್ಲ. ಬದಲಾಗಿ ಇದು ನಿಮ್ಮ ಫೀಟ್‌ನೆಸ್‌ ಟ್ರಾಕರ್‌ ಆಗಿ ಕಾರ್ಯನಿರ್ವಹಿಸಲಿದೆ. ಹಾರ್ಟ್‌ಬೀಟ್‌ ಪಲ್ಸ್‌ರೇಟ್, ಕ್ಯಾಲೋರಿ ಏರಿಳಿತದ ಲೆಕ್ಕಾಚಾರ, ನಡಿಗೆಯ ಸೇರಿದಂತೆ ಫೀಟ್‌ನೆಸ್‌ ಟ್ರಾಕ್‌ ಮಾಡಲಿದೆ.

ವಿನ್ಯಾಸ್

ವಿನ್ಯಾಸ್

ಈ ಧರಿಸುವ ಫೋನ್ ಆಕರ್ಷಕ ರಚನೆಯನ್ನು ಹೊಂದಿದ್ದು, ಫೀಟ್‌ನೆಸ್ಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಸ್ಟೈನ್‌ಲೆಸ್ ಸ್ಟೀಲ್‌ನಿಂದ ರಚಿತವಾಗಿದ್ದು, ಬ್ಲ್ಯಾಕ್‌ ಮತ್ತು ಗೋಲ್ಡ್‌ ಬಣ್ಣಗಳಲ್ಲಿ ಲಭ್ಯವಿರಲಿದೆ. ಫ್ರಂಟ್‌ ಕ್ಯಾಮೆರಾ ಮತ್ತು ಬಟನ್ ನೀಡಲಾಗಿದ್ದು, ಫೇಕ್ಸಿಬಲ್‌ ರಚನೆಯನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

4 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್, 90 ದಶಕದ ಕ್ಯಾಮೆರಾ ನೆಗೆಟಿವ್ ಫೀಲ್ಮ್ ರೋಲ್ ಮಾದರಿಯಲ್ಲಿ ಇದರ ಡಿಸ್‌ಪ್ಲೇಯನ್ನು ಕಾಣಿಸಲಿದೆ. ಅಡ್ಡವಾದ ಆಕಾರವನ್ನು ಹೊಂದಿರುವ ಈ ಡಿಸ್‌ಪ್ಲೇಯು ಕೈಗೆ ಧರಿಸಿದಾಗ ಮುಂಗೈಯ ಅರ್ಧಭಾಗ ಆವರಿಸಿಕೊಳ್ಳುತ್ತದೆ.

ಕ್ಯಾಮೆರಾ ಮತ್ತು ಮೈಕ್ರೋಫೋನ್

ಕ್ಯಾಮೆರಾ ಮತ್ತು ಮೈಕ್ರೋಫೋನ್

ನೂಬಿಯಾ ಅಲ್ಫಾ 'ಧರಿಸುವ ಫೋನಿ'ನಲ್ಲಿ 5 ಮೆಗಾಪಿಕ್ಸಲ್ ಸಾಮರ್ಥ್ಯದ ಫ್ರಂಟ್‌ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ಸೆಲ್ಫಿ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರಲ್ಲಿ ಮೈಕ್ರೋಫೋನ್ ಅಳವಡಿಸಲಾಗಿದ್ದು, ಈ ಫೋನಿನಲ್ಲಿ ಕರೆಗಳನ್ನು ಮಾಡಬಹುದಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಸ್ನ್ಯಾಪ್‌ಡ್ರಾಗನ್ ವೇರ್ 2100 ಚಿಪ್‌ ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿರುವ ಈ ಫೋನ್ 1GB RAM ಮತ್ತು 8GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಈ ಬ್ಯಾಟರಿ ಎರಡು ದಿನಗಳ ವರೆಗೆ ಬಾಳಿಕೆ ಬರಲಿದೆ.

ಲಭ್ಯತೆ ಮತ್ತು ಬೆಲೆ?

ಲಭ್ಯತೆ ಮತ್ತು ಬೆಲೆ?

ಉತ್ತರ ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲಿ ನೂಬಿಯಾ ಅಲ್ಫಾ ಬ್ಲೂಟೂತ್ ವೇರಿಯಂಟ್ ಮಾದರಿ ಫೋನ್ ಸದ್ಯ ದೊರೆಯಲಿದ್ದು, ಇದರ ಬೆಲೆಯು 449 ಯುರೋ ಆಗಿದೆ. ಇನ್ನೂ ಇ- ಸಿಮ್ ವೇರಿಯಂಟ್ ಮಾದರಿಯ ಫೋನ್‌ ಈ ವರ್ಷದ ಅಂತ್ಯದೊಳಗೆ ಯುರೋಪ್‌ನಲ್ಲಿ ಮಾರಾಟ ಆರಂಭಿಸಲಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಲಾಂಚ್‌ ಆಗಲಿದೆ ಎಂಬ ಮಾಹಿತಿ ಲಭ್ಯವಿಲ್ಲ.

Best Mobiles in India

English summary
At the MWC 2019, we got a chance to try out the Nubia Alpha and here is what we think. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X