ಶಿಯೋಮಿ ರೆಡ್‌ಮಿ 4ಗೆ ಸ್ಪರ್ಧೆ ನೀಡಲು ಬಂದಿದೆ ನುಬಿಯಾ ಎನ್ 1 ಲೈಟ್: ಬೆಲೆ, ವಿಶೇಷತೆಗಳು..!!

Written By:

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ರೆಡ್‌ಮಿ ನೋಟ್ 4 ಈ ವರ್ಷದಲ್ಲಿ ಅತೀ ಹೆಚ್ಚು ಸೇಲ್ ಆದ ಸ್ಮಾರ್ಟ್‌ಪೋನ್ ಎನ್ನಿಸಿಕೊಂಡರೆ, ರೆಡ್‌ಮಿ 4A ಅತೀ ಕಡಿಮೆ ಬೆಲೆಯ ಬೊಂಬಾಟ್ ಸ್ಮಾರ್ಟ್‌ಫೋನ್ ಎನ್ನಿಸಿಕೊಂಡಿತ್ತು.

ಶಿಯೋಮಿ ರೆಡ್‌ಮಿ 4ಗೆ ಸ್ಪರ್ಧೆ ನೀಡಲು ಬಂದಿದೆ ನುಬಿಯಾ ಎನ್ 1 ಲೈಟ್

ಓದಿರಿ: ಶಾಕಿಂಗ್ ನ್ಯೂಸ್: ಫ್ಲಿಪ್ಕಾರ್ಟಿನಲ್ಲಿ ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

ಈಗ ರೆಡ್‌ಮಿ 4 ಮಾರುಕಟ್ಟೆಯನ್ನು ಅಲ್ಲಾಡಿಸಲು ಬಂದಿದ್ದು, ಇದಕ್ಕೆ ಸ್ಪರ್ಧೆಯನ್ನು ನೀಡುವ ಸಲುವಾಗಿ ಮಾರುಕಟ್ಟೆಗೆ ಆಗಮಿಸಿದೆ ನುಬಿಯಾ ಎನ್ 1 ಲೈಟ್ ಸ್ಮಾರ್ಟ್‌ಪೋನ್‌. ಈ ಫೋನ್ ಸಹ ಅಮೆಜಾನ್ ನಲ್ಲಿ ಮಾತ್ರವೇ ಲಭ್ಯವಿದ್ದು, ಸೋಮವಾರದಿಂದಲೇ ಮಾರಾಟ ಆರಂಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ 4ಗೆ ಸರ್ಧೆ:

ರೆಡ್‌ಮಿ 4ಗೆ ಸರ್ಧೆ:

ನುಬಿಯಾ ಭಾರತದಲ್ಲಿ ಸೋಮವಾರ ನುಬಿಯಾ ಎನ್ 1 ಲೈಟ್ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ರೂ. 6,999ಕ್ಕೆ ಈ ಫೋನ್ ದೊರೆಯಲಿದೆ. ಶಿಯೊಮಿ ಸಹ ಇದೇ ಮಾದರಿಯಲ್ಲಿ ರೆಡ್‌ಮಿ 4 ಬಿಡುಗಡೆ ಮಾಡಿದ್ದು, ರೂ.6,999ಕ್ಕೆ ದೊರೆಯಲಿದೆ. ಮೇ 23 ರಿಂದ ಸೇಲ್ ಆರಂಭವಾಗಲಿದೆ. ಈ ಎರಡು ಪೋನ್‌ಗಳು ಅಮೆಜಾನ್‌ನಲ್ಲಿ ಮಾತ್ರವೇ ಲಭ್ಯವಿದೆ. ಒಟ್ಟಿನಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ವೇದಿಕೆಯಲ್ಲಿ ಸ್ಪರ್ಧೆಗೆ ನಿಲ್ಲಲಿವೆ.

ನುಬಿಯಾ ಎನ್ 1 ಲೈಟ್ ಹೇಗಿದೆ..?

ನುಬಿಯಾ ಎನ್ 1 ಲೈಟ್ ಹೇಗಿದೆ..?

ಸೋಮವಾರದಿಂದಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ನುಬಿಯಾ ಎನ್ 1 ಲೈಟ್ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ ಕ್ಯಾಮೆರಾ ಜೊತೆಗೆ ಸಾಫ್ಟ್ ಲೈಟ್ ಪ್ಲಾಷ್ ಇದೆ. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ. ಅಲ್ಲದೇ 3000mAh ಬ್ಯಾಟರಿಯೂ ಇದರಲ್ಲಿದೆ. ಈ ಅಂಶಗಳೇ ಈ ಫೋನಿನ ಹೈಲೈಟ್ ಎಂದರೆ ತಪ್ಪಾಗುವುದಿಲ್ಲ.

ನುಬಿಯಾ ಎನ್ 1 ಲೈಟ್ ವಿಶೇಷತೆಗಳು:

ನುಬಿಯಾ ಎನ್ 1 ಲೈಟ್ ವಿಶೇಷತೆಗಳು:

ನುಬಿಯಾ ಎನ್ 1 ಲೈಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 6ನಲ್ಲಿ ಕಾರ್ಯನಿರ್ವಹಿಸಲಿದ್ದು, 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ HD 720p ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. ಜೊತೆಗೆ ಕ್ವಾಡ್ ಕೋರ್ ಪ್ರೋಸೆಸರ್ ಇದ್ದು, 2GB RAM ಸಹ ಈ ಫೋನಿನಲ್ಲಿದೆ.

ನುಬಿಯಾ ಎನ್ 1 ಲೈಟ್ ಪ್ರಮುಖ ಅಂಶಗಳು:

ನುಬಿಯಾ ಎನ್ 1 ಲೈಟ್ ಪ್ರಮುಖ ಅಂಶಗಳು:

ನುಬಿಯಾ ಎನ್ 1 ಲೈಟ್ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ನೋಡಬಹುದಾಗಿದ್ದು, ಇದರೊಂದಿಗೆ ಡ್ಯುಯಲ್ LED ಫ್ಲಾಷ್ ಸಹ ಇದೆ. ಮುಂಭಾಗದಲ್ಲಿ 5 MP ಕ್ಯಾಮೆರಾ ಅಳವಡಿಸಲಾಗಿದ್ದು, ಅದಕ್ಕೂ ಫ್ಲಾಷ್ ಲೈಟ್ ನೀಡಲಾಗಿದೆ. ಇದಲ್ಲದೇ 16 GB ಇಂಟರ್ನಲ್ ಮೊಮೊರಿ ಕಾಣಬಹುದಾಗಿದ್ದು, 32 GB ವರೆಗೆ ಮೆಮೊರಿ ವಿಸ್ತಿರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
As expected, Nubia India on Monday launched the N1 lite smartphone in India. to know more visit kannada.gizbot.com
Please Wait while comments are loading...
Opinion Poll

Social Counting