Subscribe to Gizbot

ಶಾಕಿಂಗ್ ನ್ಯೂಸ್: ಫ್ಲಿಪ್‌ಕಾರ್ಟಿನಲ್ಲಿ ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

Written By:

ಸದ್ಯ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆರಂಭ ಎನ್ನುವಂತೆ ನೋಕಿಯಾ 3310 ಫೋನ್‌ ಅನ್ನು ರೀಲಾಂಚ್ ಮಾಡಿದ್ದು, ಹೊಸ ಮಾದರಿಯಲ್ಲಿ ಹೊಸ-ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆದರೆ ಈ ಫೋನ್ ಹೇಳಿಕೊಳ್ಳುವಷ್ಟು ಸದ್ದು ಮಾಡುತ್ತಿಲ್ಲ.

ಶಾಕಿಂಗ್ ನ್ಯೂಸ್: ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ಕಾರಣ ಒಂದು ಇದು ಆಫ್‌ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಜನರಿಗೆ ಅಷ್ಟಾಗಿ ಈ ಫೋನ್ ಎಲ್ಲಿ ದೊರೆಯಲಿದೆ ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ. ಇನ್ನೊಂದು ಕಾರಣ ಎಂದರೆ 5 ಸಾವಿರಕ್ಕೇ ಉತ್ತಮ ಸ್ಮಾರ್ಟ್‌ಫೋನ್ ದೊರೆಯುತ್ತಿರುವ ಕಾಲದಲ್ಲಿ ನೋಕಿಯಾ 3310 ಫೋನಿಗೆ ರೂ.3310 ನೀಡಲು ಯಾರು ಮುಂದೆ ಬಂದಿಲ್ಲ. ಇದಕ್ಕಾಗಿಯೇ ಸದ್ಯ ಮಾರುಕಟ್ಟೆಗೆ ನೋಕಿಯಾ 3310 ಕ್ಲೋನ್ ಫೋನ್ ಬಂದಿದ್ದು, ಕೇವಲ ರೂ.799ಕ್ಕೆ ಮಾರಾಟವಾಗುತ್ತಿದೆ.

ಓದಿರಿ: ಜಿಯೋದಿಂದ ಕಾಲೇಜು ಹುಡುಗರಿಗೆ ಭರ್ಜರಿ ಆಫರ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3310 ಕ್ಲೋನ್ ಪೋನ್:

ನೋಕಿಯಾ 3310 ಕ್ಲೋನ್ ಪೋನ್:

ಚೀನಾ ಮೂಲದ ಕಂಪನಿಗಳು ಯಾವುದಾರು ಒಂದು ಬ್ರಾಂಡೆಡ್ ಕಂಪನಿಯ ಯಾವುದಾರು ಒಂದು ಫೋನ್ ಬಿಡುಗಡೆಯಾಗಿದೆ ಎಂದರೆ ಅದಕ್ಕೆ ಪ್ರತಿಯಾಗಿ ಪ್ರತಿರೂಪದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ಮುಂದಿವೆ. ಇದೇ ಮಾದರಿಯಲ್ಲಿ ಡ್ರಾಗೋ 3310 ಫೋನ್ ಮಾರುಕಟ್ಟೆಗೆ ಬಂದಿದೆ. ನೋಡಲು ನೋಕಿಯಾ 3310 ಫೋನ್ ಮಾದರಿಯಲ್ಲಿಯೇ ಇದೆ. ಅದುವೆ ಫ್ಲಿಪ್‌ಕಾರ್ಟಿನಲ್ಲಿ ಲಭ್ಯವಿದೆ.

ಎರಡು ಫೋನಿನ ನಡುವೆ ವ್ಯತ್ಯಾಸವೇ ಕಾಣುವುದಿಲ್ಲ:

ಎರಡು ಫೋನಿನ ನಡುವೆ ವ್ಯತ್ಯಾಸವೇ ಕಾಣುವುದಿಲ್ಲ:

ನೋಕಿಯಾ 3310 ಫೋನ್ ಮತ್ತು ಡ್ರಾಗೋ 3310 ಫೋನಿನ ನಡುವೆ ಯಾವುದೇ ವ್ಯತ್ಯಾಸವೂ ಮೊದಲನೇ ನೋಟಕ್ಕೆ ಕಾಣುವುದೇ ಇಲ್ಲ ಎನ್ನಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಡ್ರಾಗೋ 3310 ಪೋನಿನಲ್ಲಿ ಹೆಡ್‌ಫೋನ್ ಜಾಕ್ ಮತ್ತು ಯುಎಸ್‌ಬಿ ಫೋರ್ಟ್ ಕೆಳಭಾಗದಲ್ಲಿದೆ. ಇದೇ ನೋಕಿಯಾ 3310 ಫೋನ್ ನಲ್ಲಿ ಯುಎಸ್‌ಬಿ ಮೇಲೆ ಹೆಡ್‌ಫೋನ್ ಜಾಕ್ ಕೆಳಭಾಗದಲ್ಲಿದೆ.

ಡ್ರಾಗೋ 3310 ಫೋನಿನ ವಿಶೇಷತೆ:

ಡ್ರಾಗೋ 3310 ಫೋನಿನ ವಿಶೇಷತೆ:

ಡ್ರಾಗೋ 3310 ಫೋನಿನಲ್ಲಿ 1.77 ಇಂಚಿನ ಡಿಸ್‌ಪ್ಲೇ ಇದೆ. ಅಲ್ಲದೇ 1MB RAM ಇದರಲ್ಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 8GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.. ಅಲ್ಲದೇ ಹಿಂಭಾಗದಲ್ಲಿ 0.3 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Nokia 3310 available in Indian market. With a price tag of Rs. 3310, people think twice before buying this feature phone for such a price range. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot