ಭಾರತಕ್ಕೆ ಎಂಟ್ರಿ ಕೊಡಲಿದೆ ನೂಬಿಯಾ 'ರೆಡ್ ಮ್ಯಾಜಿಕ್ ಮಾರ್ಸ್'.!?

|

ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಗ್ರಾಹಕರು ಅವರವರ ಅಗತ್ಯತೆಗಳನುಸಾರ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ಆದರೆ ಸ್ಮಾರ್ಟ್‌ಫೋನಿನಲ್ಲಿ ಗೇಮ್ಸ್‌ ಆಡುವುದನ್ನು ಇಷ್ಟಪಡುವ ದೊಡ್ಡ ಗ್ರಾಹಕ ಬಳಗವೇ ಇದ್ದು, ಇದೀಗ ಇಂಥಹ ಗೇಮ್ಸ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಬಂದಿದೆ. ನೂಬಿಯಾ ಕಂಪನಿಯ 'ರೆಡ್ ಮ್ಯಾಜಿಕ್ ಮಾರ್ಸ್' ಗೇಮಿಂಗ್ ಫೋನ್' ಭಾರತವನ್ನು ಪ್ರವೇಶಿಸಲಿದೆ.

ಭಾರತಕ್ಕೆ ಎಂಟ್ರಿ ಕೊಡಲಿದೆ ನೂಬಿಯಾ 'ರೆಡ್ ಮ್ಯಾಜಿಕ್ ಮಾರ್ಸ್'.!?

ಹೌದು, ನೂಬಿಯಾ ಸಂಸ್ಥೆಯ 'ರೆಡ್ ಮ್ಯಾಜಿಕ್ ಮಾರ್ಸ್' ಹೆಸರಿನ ಗೇಮಿಂಗ್‌ ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಗೊಂಡಿದ್ದು, ಗೇಮ್ಸ್‌ ಪ್ರಿಯರ ಮನಗೆದ್ದಿದೆ. ಇದೀಗ ಕಂಪನಿಯು ಈ ಗೇಮಿಂಗ್ ಸ್ಮಾರ್ಟ್‌ಫೋನನ್ನು ಇದೇ ಮಾರ್ಚ ತಿಂಗಳಲ್ಲಿ ಭಾರತದಲ್ಲಿಯೂ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಫೋನ್‌ 6 ಇಂಚಿನ ಡಿಸ್‌ಪ್ಲೇಯೊಂದಿಗೆ 10GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ.

ಭಾರತಕ್ಕೆ ಎಂಟ್ರಿ ಕೊಡಲಿದೆ ನೂಬಿಯಾ 'ರೆಡ್ ಮ್ಯಾಜಿಕ್ ಮಾರ್ಸ್'.!?

ಅಡೆತಡೆ ಇಲ್ಲದೇ ಗೇಮಿಂಗ್ ಆಡಲು ಈ ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಫೋನ್ ಬಿಸಿ ಆಗುವುದನ್ನು ತಪ್ಪಿಸಲು ವಿಶೇಷ ಕೂಲಿಂಗ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರೊಟ್ಟಿಗೆ ಫೋನಿನ ಹಿಂಭಾಗದ ಕವಚವು ಮೆಟಲ್‌ನಿಂದ ಕೂಡಿದೆ. ಹಾಗಾದರೇ ಸಂಪೂರ್ಣ ಗೇಮಿಂಗ್ ಫೋನ್ ಎಂದೇ ಬಿಂಬಿತವಾಗಿರುವ ನೂಬಿಯಾ ರೆಡ್ ಮ್ಯಾಜಿಕ್ ಮಾರ್ಸ್‌ ಸ್ಮಾರ್ಟ್‌ಫೋನ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ತಿಳಿಯಲು ಮುಂದೆ ಓದಿರಿ.

ವಿನ್ಯಾಸ

ವಿನ್ಯಾಸ

ನುಬಿಯಾ 'ರೆಡ್ ಮ್ಯಾಜಿಕ್ ಮಾರ್ಸ್‌' ಗೇಮಿಂಗ್ ಫೋನ್ ಗಟ್ಟಿಮುಟ್ಟಾದ ರಚನೆಯನ್ನು ಹೊಂದಿದ್ದು, ಹಿಂಬದಿಯಲ್ಲಿ ಕ್ಯಾಮೆರಾ ಮತ್ತು ಫ್ಲ್ಯಾಶ್‌ ಲೈಟ್‌ನೊಂದಿಗೆ RGB ಲೈಟಿಂಗ್ ಸ್ಟ್ರೀಪ್‌ ಅನ್ನು ಹೊಂದಿದೆ. ಗೇಮ್ಸ್‌ ಆಡುವಾಗ ನಿಯಂತ್ರಿಸಲು 'ಇ-ಸ್ಪೋರ್ಟ್ಸ್‌' ಬಟನ್ ಮತ್ತು 'ಮಾರ್ಸ್‌ ಟ್ರಿಗರ್ ಟಚ್‌' ಎಂಬ ಶೊಲ್ಡರ್ ಬಟನ್ ನೀಡಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1080x2160 ಪಿಕ್ಸಲ್ ರೆಸಲ್ಯೂಶನ್ ಪಿಕ್ಸಲ್ ಸಾಮರ್ಥ್ಯದೊಂದಿಗೆ 6.0 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯವು 402 PPI ಆಗಿದೆ. ಗೇಮಿಂಗ್ ಆಡಲು ಅನುಕೂಲಕರವಾಗಿದ್ದು, ರೋಮಾಂಚಕಾರಿ ಅನುಭವ ನೀಡಲಿದೆ.

ಪ್ರೊಸೆಸರ್

ಪ್ರೊಸೆಸರ್

ಅಧಿಕ ಡೇಟಾದ ಗೇಮ್ಸ್‌ಗಳು ಅತ್ಯುತ್ತಮ RAM ಸಾಮರ್ಥ್ಯ ಬೇಡುತ್ತವೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 845 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. 10GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಅತ್ಯುತ್ತಮ RAM ಅಡೆತಡೆ ಇಲ್ಲದೇ ಆಡಲು ನೆರವು ಮಾಡಿಕೊಡಲಿದೆ.

ಕ್ಯಾಮೆರಾ

ಕ್ಯಾಮೆರಾ

ಇದು ಪಕ್ಕಾ ಗೇಮಿಂಗ್ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ 16 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಇದ್ದು, ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಲೈಟ್‌ ನೀಡಲಾಗಿದ್ದು. ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. ಇದು ಪಕ್ಕಾ ಗೇಮಿಂಗ್ ಫೋನ್ ಆಗಿರುವುದರಿಂದ ಕ್ಯಾಮೆರಾ ಬಗ್ಗೆ ಹೆಚ್ಚಿನ ಮೆಗಾಪಿಕ್ಸಲ್ ನೀಡಿಲ್ಲ ಎನ್ನಬಹುದು.

ಬ್ಯಾಟರಿ

ಬ್ಯಾಟರಿ

ರೆಡ್‌ ಮ್ಯಾಜಿಕ್ ಮಾರ್ಸ್‌ ಗೇಮಿಂಗ್ ಫೋನಿನ್ ಬ್ಯಾಟರಿ ಲೈಫ್ 3,800mAh ಸಾಮರ್ಥ್ಯದಲ್ಲಿ ಇರಲಿದ್ದು, ಗೇಮಿಂಗ್‌ ಆಡಲು ಫೋನಿಗೆ ಉತ್ತಮ ಬ್ಯಾಟರಿ ಬಾಳಿಕೆ ನೀಡಲಿದೆ. ಇದರೊಂದಿಗೆ ನಿಯೋ ಚಾರ್ಜಿಂಗ್ ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರಲಿದೆ.

Best Mobiles in India

English summary
A nubia executive has confirmed to 91mobiles the Red Magic Mars gaming smartphone will be releasing in the Indian market in March.to know morevisit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X