Subscribe to Gizbot

ಮಧ್ಯಮ ಸರಣಿ ಸ್ಮಾರ್ಟ್‌ಫೋನಿನಲ್ಲಿ ಬೆಸ್ಟ್: ಬಣ್ಣಗಳಿಂದಲೇ ಸೆಳೆಯುತ್ತಿರುವ ನುಬಿಯಾ Z18 ಮಿನಿ..!

Written By:

ಸದ್ಯ ಮಾರುಕಟ್ಟೆಯಲ್ಲಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳ ಹವಾಳಿಯೂ ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಮಾರುಕಟ್ಟೆಗೆ ZTE ಕಂಪನಿಯ ನುಬಿಯಾ ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ನುಬಿಯಾ Z18 ಮಿನಿ ಸ್ಮಾರ್ಟ್‌ಫೋನ್ ಚೀನಾದಲ್ಲಿ ಇಂದು ಕಾಣಿಸಿಕೊಂಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗುವ ಸಾಧ್ಯತೆ ಇದೆ.

ಬಣ್ಣಗಳಿಂದಲೇ ಸೆಳೆಯುತ್ತಿರುವ ನುಬಿಯಾ Z18 ಮಿನಿ..!

ನುಬಿಯಾ Z18 ಮಿನಿ ರೂ.21,000ದ ಅಸುಪಾಸಿನಲ್ಲಿ ಕಾಣಿಸಿಕೊಳ್ಳಲಿದ್ದು, ಏಪ್ರಿಲ್ 19 ರಿಂದ ಚೀನಾದಲ್ಲಿ ಮಾರಾಟವಾಗಲಿದೆ. ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದ್ದು, ತನ್ನ ವಿಭಿನ್ನ ಬಣ್ಣಗಳಿಂದಲೇ ಈ ಸ್ಮಾರ್ಟ್‌ಫೋನ್ ಹೆಚ್ಚು ಸದ್ದು ಮಾಡುತ್ತಿದೆ. ವೈಟ್, ಬ್ಲಾಕ್, ಬ್ಲೂ, ರೋಸ್ ಗೋಲ್ಡ್ ಬಣ್ಣಗಳಲ್ಲಿ ಮಾರಾಟವಾಗಲಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ವಿಶೇಷತೆಗಳ ಬಗ್ಗೆ ಮಾಹಿತಿಯೂ ಮುಂದಿದೆ.

ಓದಿರಿ: ರೂ.28000ಕ್ಕೆ ಆಪಲ್ ಐಪ್ಯಾಡ್: ಮೊದಲು ಬುಕ್ ಮಾಡಿದವರಿಗೆ ಮಾತ್ರ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.7 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇ:

5.7 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇ:

ನುಬಿಯಾ Z18 ಮಿನಿ ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್‌ಪ್ಲೇ ಇದಾಗಿದೆ. ಇದರೊಂದಿಗೆ 2.2GHz ವೇದ ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ನೊಂದಿಗೆ ಆಡ್ರಿನೊ 512 GPUವನ್ನು ಅಳವಡಿಸಲಾಗಿದೆ.

ಎರಡು ಮಾದರಿಯಲ್ಲಿ ಲಭ್ಯ:

ಎರಡು ಮಾದರಿಯಲ್ಲಿ ಲಭ್ಯ:

ನುಬಿಯಾ Z18 ಮಿನಿ ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ದೊರೆಯಲಿದ್ದು, ವೇಗದ ಕಾರ್ಯಚರಣೆಗಾಗಿ 6GB RAM ಅಳವಡಿಸಲಾಗಿದೆ. ಇದರೊಂದಿಗೆ 64GB ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚುವರಿ ಮೆಮೊರಿಯನ್ನು ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿಲ್ಲ.

ಫೇಸ್‌ ಅನ್‌ಲಾಕ್:

ಫೇಸ್‌ ಅನ್‌ಲಾಕ್:

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಫೇಸ್ ಅನ್‌ಲಾಕ್ ಆಯ್ಕೆಯನ್ನು ನುಬಿಯಾ Z18 ಮಿನಿ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಫೋನಿನ ಹಿಂಭಾಗದಲ್ಲಿ ಅಳವಡಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ನುಬಿಯಾ Z18 ಮಿನಿ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, 13MP + 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಪಿಗಾಗಿ 8 MP ಕ್ಯಾಮೆರಾವನ್ನು ನೀಡಲಾಗಿದೆ.

Unboxing of Rs. 8,499 LED TV from Daiwa
ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ನುಬಿಯಾ Z18 ಮಿನಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದ್ದು, 3450mAh ಬ್ಯಾಟರಿಯನ್ನು ಹೊಂದಿದೆ. ಇದಲ್ಲದೇ 4G VoLTE ಸೇವೆಯನ್ನು ಇದರಲ್ಲಿ ಪಡೆಯಬಹುದಾಗಿದೆ. 4G VoLET ಕೆನ್ಟಿವಿಟಿಯು ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nubia Z18 mini launched with 5.7-inch FHD+ display and 6GB RAM. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot