ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಆಪಲ್, ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಲಾಂಚ್ ಮಾಡಿದ್ದ ಬಜೆಟ್ ಬೆಲೆಯ ಆಪಲ್ ಐಪ್ಯಾಡ್ (2018). ಸದ್ಯ ಫ್ಲಿಪ್‌ಕಾರ್ಟಿನಲ್ಲಿ ಫ್ರಿ ಆರ್ಡರ್ ಮಾಡಲು ಲಭ್ಯವಿದೆ. ಸಿಲ್ವರ್, ಗೋಲ್ಡ್ ಮತ್ತು ಸ್ಪೆಸ್ ಗ್ರೇ ಬಣ್ಣದಲ್ಲಿ ದೊರಯಲಿರುವ ಆಪಲ್ ಐಪ್ಯಾಡ್ (2018). ಈಗ ಬುಕ್ ಮಾಡಿದರೆ ಏಪ್ರಿಲ್ 20ರ ನಂತರದಲ್ಲಿ ಬಳಕೆದಾರರ ಮನೆ ಬಾಗಿಲಿಗೆ ಬರಲಿದೆ. ರೂ. 28000ದಿಂದ ಆರಂಭವಾಗುವ ಈ ಪ್ಯಾಡ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ.

ಆಪಲ್ ಐಪ್ಯಾಡ್ (2018) ವೈಫೈ ಮತ್ತು ವೈಫೈ + ಸೆಲ್ಯೂಲರ್ ಆಯ್ಕೆಯೊಂದಿಗೆ ಲಭ್ಯವಿದೆ. ಅಲ್ಲದೇ 32GB ಮತ್ತು 128GB ಆವೃತ್ತಿಯಲ್ಲಿ ದೊರೆಯಲಿದೆ. ಆಪಲ್ ಐಪ್ಯಾಡ್ (2018) ವೈಫೈ 32GB ಆವೃತ್ತಿಯೂ ರೂ.28,000ಕ್ಕೆ ಲಭ್ಯವಿದ್ದು, ಆಪಲ್ ಐಪ್ಯಾಡ್ (2018) ವೈಫೈ+ ಸೆಲ್ಯೂಲರ್ 32GB ಆವೃತ್ತಿಯೂ ರೂ. 37,700ಕ್ಕೆ ದೊರೆಯಲಿದೆ.
ನಾಲ್ಕು ಮಾದರಿ:
ಇದೇ ಮಾದರಿಯಲ್ಲಿ ಆಪಲ್ ಐಪ್ಯಾಡ್ (2018) ವೈಫೈ 128 GB ಆವೃತ್ತಿಯೂ ರೂ.36,600ಕ್ಕೆ ಲಭ್ಯವಿದ್ದು, ಆಪಲ್ ಐಪ್ಯಾಡ್ (2018) ವೈಫೈ+ ಸೆಲ್ಯೂಲರ್ 128GB ಆವೃತ್ತಿಯೂ ರೂ. 46,300ಕ್ಕೆ ಮಾರಾಟವಾಗಲಿದೆ. ಇದಲ್ಲದೇ ಹಳೇಯ ಡಿವೈಸ್ ವೆಲೆ ರೂ.16000ದವರೆಗೂ ಎಕ್ಸ್‌ಚೇಂಜ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಭಾರತೀಯರಿಗಾಗಿಯೇ:
ಭಾರತೀಯರಿಗೆ ಕಡಿಮೆ ಬೆಲೆಗೆ ಆಪಲ್ ಉತ್ಪನ್ನಗಳನ್ನು ನೀಡಬೇಕು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಐಪ್ಯಾಡ್ ಮಾರುಕಟ್ಟೆಗೆ ಬಂದಿದೆ. 9.7 ಇಂಚಿನ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದ್ದು, ಆಪಲ್ ಪೆನ್ಸಿಲ್ ನೊಂದಿಗೆ ಸಪೋರ್ಟ್ ಮಾಡಲಿದೆ. ಇದಲ್ಲದೇ ಆಪಲ್ A10 ಪ್ರೋಸೆಸರ್ ನೊಂದಿಗೆ ಕಾಣಿಸಿಕೊಳ್ಳಲಿದೆ.
ಒಳ್ಳೆ ಕ್ಯಾಮೆರಾ:
ಇದಲ್ಲದೇ ಆಪಲ್ ಐಪ್ಯಾಡ್ (2018)ನಲ್ಲಿ 8MP ಹಿಂಬದಿಯ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 1.2MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಯೂಲರ್ ಸಪೋರ್ಟ್ ಮಾಡಿವ ಆವೃತ್ತಿಯಲ್ಲಿ ಬಳಕೆದಾರರಿಗೆ 4G LTE ಸಫೋರ್ಟ್ ದೊರೆಯಲಿದೆ. ಸಾಮಾನ್ಯ ಆವೃತ್ತಿಯಲ್ಲಿ ವೈಫೈ 802, ಬ್ಲೂಟೂತ್ V4.2, ಟಚ್ ID ಫಿಂಗರ್ ಪ್ರಿಂಟ್ ಅನ್ನು ಇದರಲ್ಲಿ ಕಾಣಬಹುದಾಗಿದೆ.
ವಿದ್ಯಾರ್ಥಿಗಳಿಗಾಗಿ
ಆಪಲ್ ಐಪ್ಯಾಡ್ (2018) ಅನ್ನು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಮಂದಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಇದು ಯಶಸ್ವಿಯಾಗಲಿದೆ. ಒಟ್ಟಿನಲ್ಲಿ ಆಪಲ್ ದಿನ ಕಳೆದಂತೆ ಕಡಿಮೆ ಬೆಲೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.