ಐಫೋನ್ X ಫೇಸ್‌ ಅನ್‌ಲಾಕ್: ವೈರಲ್ ವಿಡಿಯೋ ಪೋಸ್ಟ್ ಮಾಡಿದ ಆಪಲ್..!

|

ಆಪಲ್ 10 ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗಿದ್ದ ಐಫೋನ್ X ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದು, ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ತನ್ನ ವಿಶೇಷ ವಿನ್ಯಾಸ ಮತ್ತು ಆಯ್ಕೆಗಳಿಂದಲೇ ಹೆಚ್ಚಿನ ಜನರ ಗಮನವನ್ನು ಸೆಳೆದಿದಲ್ಲದೇ, ಅನೇಕ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಸ್ಪೂರ್ತಿಯೂ ಆಗಿತ್ತು.

ಐಫೋನ್ X ಫೇಸ್‌ ಅನ್‌ಲಾಕ್: ವೈರಲ್ ವಿಡಿಯೋ ಪೋಸ್ಟ್ ಮಾಡಿದ ಆಪಲ್..!

ಐಫೋನ್ X ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬದಲಿಗೆ ಫೇಸ್‌ ಅನ್‌ಲಾಕ್ ಆಯ್ಕೆಯನ್ನು ನೀಡಿತ್ತು. ಇದಕ್ಕಾಗಿದೇ ಮುಂಭಾಗದ ಸ್ಕ್ರಿನ್ ಮೇಲ್ಭಾಗದ ಮಧ್ಯದಲ್ಲಿ ಸೆನ್ಸ್ಯಾರ್ ಮತ್ತು ಕ್ಯಾಮೆರಾವನ್ನು ಅಳವಡಿಸಿ ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿಯೇ ಹೊಸ ಭಾಷ್ಯವನ್ನು ಬರೆಯಿತು. ಇದಾದ ನಂತರದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ತಮ್ಮ ಬಳಕೆದಾರರಿಗೆ ಐಫೋನ್ X ಮಾದರಿಯಲ್ಲಿ ಫೇಸ್‌ ಅನ್‌ಲಾಕ್ ಆಯ್ಕೆಯನ್ನು ಮಾಡಿಕೊಟ್ಟವು.

ಮೊದಲಿಗೆ ಐಫೋನ್ X ನೀಡಿರುವ ಫೇಸ್‌ ಅನ್‌ಲಾಕ್ ಆಯ್ಕೆಯ ಕುರಿತು ಸಾಕಷ್ಟು ಸಂಶಯಗಳು ಉದ್ಬವಾಗಿದ್ದವು, ಅಲ್ಲದೇ ಕೆಲ ಬಗ್ ಗಳು ಇದಕ್ಕಾಗಿ ಕಾರಣವಾಗಿತ್ತು. ಈ ಬಾರಿ ಅದನ್ನೇಲ್ಲ ಸರಿಪಡಿಸಿರುವ ಆಪಲ್ ಅನ್‌ಲಾಕ್ ಆಯ್ಕೆಯನ್ನು ಉತ್ತಮ ಪಡಿಸಿದ್ದು, ಕೇವಲ ಆನ್‌ಲಾಕ್ ಮಾತ್ರವಲ್ಲದೇ ನೋಟಿಫಿಕೇಷನ್ ಅನ್ನು ನೋಡಲು ಸಹಾಯ ಮಾಡಲಿದೆ ಎನ್ನಲಾಗಿದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಮೊದಲ ಐಫೋನ್ ಲಾಂಚ್‌ಗೆ ಸಿದ್ಧತೆ ನಡೆಸಿದ ಆಪಲ್: ಮೊಬೈಲ್ ಮಾರುಕಟ್ಟೆ ತಲ್ಲಣ..!

ಇದನ್ನು ತಿಳಿಸುವ ಸಲುವಾಗಿಯೇ ಆಪಲ್ ಐಫೋನ್ X ಫೇಸ್‌ ಆನ್‌ಲಾಕ್ ಕುರಿತಂತೆ ವೀಡಿಯೊವೊಂದನ್ನು ಯುಟ್ಯೂಬ್‌ನಲ್ಲಿ ಆಪ್‌ಲೋಡ್ ಮಾಡಿದ್ದು, ಒಂದು ನಿಮಿಷದ ವೀಡಿಯೊ ಸದ್ಯ ವೈರಲ್ ಆಗಿದ್ದು, ಫೇಸ್‌ ಆನ್‌ಲಾಕ್ ವಿಶೇಷತೆಯನ್ನು ತಿಳಿಸುವ ವಿಭಿನ್ನವಾದ ವೀಡಿಯೊ ಇದಾಗಿದೆ. ಇತರೇ ಎಲ್ಲಾ ಫೇಸ್ ಲಾಕ್ ಗಿಂತಲೂ ಐಫೋನ್ X ಫೇಸ್‌ ಅನ್‌ಲಾಕ್ ಅತ್ಯಂತ ಸೆಕ್ಯೂರ್ ಆಗಿದೆ ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

Best Mobiles in India

English summary
Official iPhone X Advertisements. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X