Home
ಮೊಬೈಲ್

ಭಾರತದಲ್ಲಿ OnePlus 15 ಬಿಡುಗಡೆ ದಿನಾಂಕ ಲೀಕ್!...ಇಲ್ಲಿದೆ ಸಂಪೂರ್ಣ ಮಾಹಿತಿ!

ಇದೇ ವಾರ ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಸಜ್ಜಾಗಿದೆ.! ಚೀನಾದಲ್ಲಿ ಅಕ್ಟೋಬರ್ 27 ರಂದು OnePlus 15 ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಾಗುತ್ತಿದೆ. ಈ ಮುಂದಿನ ಪೀಳಿಗೆಯ ಫ್ಲ್ಯಾಗ್‌ಶಿಪ್ ಫೋನ್ ನವೆಂಬರ್ ಮಧ್ಯಭಾಗದಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇಷ್ಟೆಲ್ಲಾ ಸುದ್ದಿಗಳ ನಡುವೆ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಇದೇ ನವೆಂಬರ್ 13 ರಂದು OnePlus 15 ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.! ಹೌದು, ಇಂತಹದೊಂದು ಸುದ್ದಿ ಈಗ ಹೊರಬಿದ್ದಿದೆ.!

ಮೊಬೈಲ್ ಉದ್ಯಮದ ಮೂಲಗಳನ್ನು ಉಲ್ಲೇಖಿಸಿ, 91Mobiles ಹಿಂದಿ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ, ನವೆಂಬರ್ 13 ರಂದು ಜಾಗತಿಕವಾಗಿ OnePlus 15 ಬಿಡುಗಡೆಯಾಗಲಿದ್ದು, ಅದೇ ದಿನ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇತ್ತ, ಇತ್ತೀಚೆಗಷ್ಟೇ ಅಮೆಜಾನ್‌ನಲ್ಲಿ ತೆರಯಲಾದ ಹೊಸ ಮೀಸಲಾದ ಮೈಕ್ರೋಸೈಟ್ OnePlus 15 ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ವೆಬ್‌ಸೈಟ್ ಮೂಲಕ ಭಾರತದಲ್ಲಿ ಮಾರಾಟ ಮಾಡಲಾಗುವುದು ಎಂದು ದೃಢಪಡಿಸಿದೆ. ಇದರೊಂದಿಗೆ ದೇಶದಲ್ಲಿ ಕೂಡ OnePlus 15 ಸಾಧನವು ಬಹುತೇಕ ಒಂದೇ ಫೀಚರ್ಸ್ ಹೊಂದಿರುವ ಸಾಧ್ಯತೆ ಇದೆ.

ಈಗಾಗಲೇ ಅಧಿಕೃತವಾಗಿ ತಿಳಿದಿರುವಂತೆ, ಭಾರತೀಯ ಆವೃತ್ತಿಯ OnePlus 15 ಸ್ಮಾರ್ಟ್‌ಫೋನ್ ಕೂಡ Qualcomm Snapdragon 8 Elite Gen 5 ಚಿಪ್‌ಸೆಟ್‌ ಹೊಂದಿದೆ ಮತ್ತುAndroid 16 ಆಧಾರಿತ OxygenOS 16 ಮೇಲೆ ಕಾರ್ಯನಿರ್ವಹಿಸಲಿದೆ. OnePlus ಕಂಪೆನಿಯ ಇತ್ತೀಚಿಗೆ ಬಹಿರಂಗ ಪಡಿಸಿರುವ ಮಾಹಿತಿಯಂತೆ, OnePlus 15 ಸ್ಮಾರ್ಟ್‌ಫೋನ್ ಬೃಹತ್ 7,300mAh Glacier Battery ಹೊಂದಿರಲಿದೆ, ಇದು 120W Super Flash Charge ಮತ್ತು 50W Wireless Flash Charge ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ OnePlus 15 ಬಿಡುಗಡೆ ದಿನಾಂಕ ಲೀಕ್!...ಇಲ್ಲಿದೆ ಸಂಪೂರ್ಣ ಮಾಹಿತಿ!

ಡಿಸ್‌ಪ್ಲೇ ವಿಭಾಗದಲ್ಲಿ, ಈ OnePlus 15 ಸ್ಮಾರ್ಟ್‌ಫೋನ್ ಮೂರನೇ ತಲೆಮಾರಿನ 1.5K BOE ಫ್ಲೆಕ್ಸಿಬಲ್ ಓರಿಯಂಟಲ್ OLED ಡಿಸ್ಪ್ಲೇಯನ್ನು ಹೊಂದಿದ್ದು, ಇದು165Hz ವರೆಗೆ ರಿಫ್ರೆಶ್ ರೆಟ್ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಕ್ಯಾಮೆರಾ ವಿಭಾಗದಲ್ಲಿ, ಈ OnePlus 15 ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಸೋನಿ ಮುಖ್ಯ ಶೂಟರ್ ಮತ್ತು 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್-ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರುವುದನ್ನು ಸಹ ದೃಢಪಡಿಸಲಾಗಿದೆ. ಇದು 3.5x ಆಪ್ಟಿಕಲ್ ಜೂಮ್ ಸಾಮರ್ಥ್ಯವನ್ನು ಸಹ ನೀಡಲಿದೆ.

OnePlus 15: ಬೆಲೆ ಎಷ್ಟು?
ಭಾರತದಲ್ಲಿ OnePlus 15 ಸ್ಮಾರ್ಟ್‌ಫೋನಿನ ಬೆಲೆ ₹70,000 ರಿಂದ ₹75,000 ರ ಮಧ್ಯೆ ಇರಬಹುದು ಎಂದು ಕೆಲವು ಪ್ರಮುಖ ಮಾಧ್ಯಮ ವರದಿಗಳು ಸೂಚಿಸುತ್ತವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆಯಾಗಿ, ಹೊಸ OnePlus 15 ಭಾರತದ ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಮತ್ತೊಂದು ಶಕ್ತಿಶಾಲಿ ಆಯ್ಕೆಯಾಗಿ ಹೊರಹೊಮ್ಮಲಿದೆ. ಪ್ರೀಮಿಯಂ ವಿನ್ಯಾಸ, ಫಾಸ್ಟ್ ಚಾರ್ಜಿಂಗ್ ಮತ್ತು ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನದಿಂದ ಇದು 2025ರ ಅತ್ಯಂತ ನಿರೀಕ್ಷಿತ ಫೋನ್ ಆಗುವ ಸಾಧ್ಯತೆ ಇದೆ. ಈ ಕುರಿತು ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

ಇದೇ ಅಕ್ಟೋಬರ್ 27ರಂದು ಚೀನಾದಲ್ಲಿ ಬಹುನಿರೀಕ್ಷಿತ OnePlus 15 ಸ್ಮಾರ್ಟ್‌ಫೋನ್ ಜೊತೆಗೆ OnePlus Ace 6 ಸ್ಮಾರ್ಟ್‌ಫೋನ್‌ ಕೂಡ ಬಿಡುಗಡೆಯಾಗುತ್ತಿದೆ. ನಿರೀಕ್ಷೆಯಂತೆಯೇ, ಈ OnePlus Ace 6 ಫೋನ್ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಹೆಸರಿನಲ್ಲಿ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 165Hz AMOLED ಸ್ಕ್ರೀನ್ ಮತ್ತು ಭಾರೀ 7,800mAh ಬ್ಯಾಟರಿಯಂತ ಫೀಚರ್ಸ್‌ನಿಂದ ಗಮನಸೆಳೆಯುತ್ತಿವೆ. ಹಾಗಾದರೆ, ಮುಂಬರಲಿರುವ ಹೊಸ OnePlus 15R (OnePlus Ace 6) ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟಿರಬಹುದು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
The OnePlus 15 is anticipated to be released in India on November 13. As a flagship model for 2025, it is expected to incorporate features such as the Snapdragon 8 Elite Gen 5 chipset, a 7,300mAh battery, and a 165Hz OLED display.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+