Home
ಮೊಬೈಲ್

ಬೆಂಗಳೂರಿನಲ್ಲಿ OnePlus 15R ಆಫ್‌ಲೈನ್ ಲಾಂಚ್: ಪ್ರಮುಖ ಫೀಚರ್ಸ್ ಔಟ್!

OnePlus ತನ್ನ ಬಹುನಿರೀಕ್ಷಿತ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್‌ಗಳನ್ನು ಇದೇ ಡಿಸೆಂಬರ್ 17ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕುರಿತು OnePlus ಕಂಪನಿಯು ಮೊದಲೇ ಮಾಹಿತಿ ಒದಗಿಸಿದೆ. ಇದೀಗ ಸೋಮವಾರದಂದು ಕಂಪೆನಿಯು ಹೊಸ 'ಲಾಂಚ್ ಕೀನೋಟ್' ಪ್ರಕಟಣೆಯನ್ನು ಹೊರಡಿಸಿದ್ದು, ಬೆಂಗಳೂರಿನಲ್ಲಿ ಭವ್ಯ ಆಫ್‌ಲೈನ್ ಕಾರ್ಯಕ್ರಮದಲ್ಲಿ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.!

ಹೌದು, OnePlus ಮತ್ತೆ ಆಫ್‌ಲೈನ್ ಈವೆಂಟ್‌ಗಳಿಗೆ ವಾಪಸಾಗುತ್ತಿದೆ. ಕಂಪನಿ ತನ್ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಈ ವಿಶೇಷ ಲಾಂಚ್ ಕಾರ್ಯಕ್ರಮವನ್ನು ಬೆಂಗಳೂರುನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಸಾವಿರಾರು OnePlus ಸಮುದಾಯ ಸದಸ್ಯರು ನೇರವಾಗಿ ಭಾಗವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಜೊತೆಗೆ ಈ ಲಾಂಚ್ ಈವೆಂಟ್ ಅನ್ನು OnePlus YouTube ಚಾನೆಲ್ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. OnePlus ಇದನ್ನು "Live Keynotes are back" ಎಂದು ಘೋಷಿಸಿದೆ.

OnePlus ತನ್ನ ಅಧಿಕೃತ ಪ್ರಕಟಣೆಯಲ್ಲಿ, ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್‌ ಎರಡೂ ಉತ್ಪನ್ನಗಳು ಒಂದೇ ದಿನ ಲಭ್ಯವಾಗಲಿವೆ ಎಂಬುದನ್ನು ದೃಢಪಡಿಸಿದೆ. ಜೊತೆಗೆ ಈ ಸಾಧನಗಳ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ. ಹಾಗಾದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ OnePlus 15R ಸ್ಮಾರ್ಟ್‌ಫೋನ್ ಮತ್ತು OnePlus Pad Go 2 ಟ್ಯಾಬ್ಲೆಟ್‌ ಸಾಧನಗಳನ್ನು ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಸಹ ನೋಡೋಣ ಬನ್ನಿ.

ಬೆಂಗಳೂರಿನಲ್ಲಿ OnePlus 15R ಆಫ್‌ಲೈನ್ ಲಾಂಚ್: ಪ್ರಮುಖ ಫೀಚರ್ಸ್ ಔಟ್!

OnePlus 15R - ಡಿಸ್‌ಪ್ಲೇ, ಕಾರ್ಯಕ್ಷಮತೆ ಮತ್ತು ಕ್ಯಾಮೆರಾದಲ್ಲಿ ದೊಡ್ಡ ಸುಧಾರಣೆ
OnePlus 15R ನಲ್ಲಿ ಕೆಳಗಿನ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ,
1.5K AMOLED ಡಿಸ್‌ಪ್ಲೇ, 165Hz ರಿಫ್ರೆಶ್ ರೇಟ್, 450 PPI
2 ನಿಂದ 1,800 ನಿಟ್ಸ್ ವರೆಗೂ ಬ್ರೈಟ್‌ನೆಸ್ ರೇಂಜ್
Snapdragon 8 Gen 5 ಪ್ರೊಸೆಸರ್ (ಈ ಚಿಪ್‌ಸೆಟ್ ಹೊಂದಿದ ಮೊದಲ ಫೋನ್)
ಫೋಟೋಗ್ರಫಿಗಾಗಿ Detailmax Engine, Ultra Clear Mode, Clear Burst, Clear Night Engine
ಹೊಸ G2 Wi-Fi ಚಿಪ್ ಮತ್ತು Touch Response Chip ಇರಲಿದೆ

OnePlus Pad Go 2 - ದೊಡ್ಡ ಪರದೆ, ಮಲ್ಟಿಟಾಸ್ಕಿಂಗ್‌ಗೆ ಸೂಕ್ತ ಆಯ್ಕೆ
OnePlus Pad Go 2 ಮಧ್ಯಮ ಬೆಲೆಯ ವಿಭಾಗಕ್ಕೆ ಸೇರಿದರೂ, ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ:
12.1-ಇಂಚಿನ 2.8K ಡಿಸ್‌ಪ್ಲೇ, 284 PPI, 900 ನಿಟ್ಸ್ ಪೀಕ್ ಬ್ರೈಟ್‌ನೆಸ್
98% DCI-P3 ಕಲರ್ ಗ್ಯಾಮುಟ್, Dolby Vision ಬೆಂಬಲ
TÜV Rheinland Smart Care 4.0 ಪ್ರಮಾಣೀಕರಣ
ಮಲ್ಟಿಟಾಸ್ಕಿಂಗ್‌ಗಾಗಿ Open Canvas ಸಾಫ್ಟ್‌ವೇರ್ (split-screen / multi-window)

ಇಂದು ಚೀನಾದಲ್ಲಿ ಲಾಂಚ್!
ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ OnePlus 15R ಎಂಬ ಹೆಸರಿನಲ್ಲಿ ಬರುವುದು ಬಹುತೇಕ ಖಾತ್ರಿಯಾಗಿರುವ OnePlus Ace 6T ಫೋನ್ ಇಂದು (ಡಿಸೆಂಬರ್ 3) ಸಂಜೆ 7 ಗಂಟೆಗೆ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. (ಭಾರತೀಯ ಸಮಯದಂತೆ ಸಂಜೆ 4:30 ಕ್ಕೆ). OnePlus ಈಗಾಗಲೇ ತನ್ನ ಮುಂಬರುವ ಈ OnePlus Ace 6T ಸ್ಮಾರ್ಟ್‌ಫೋನ್ ಕುರಿತು ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಫೋನ್ 8,300mAh ಗ್ಲೇಷಿಯರ್ ಬ್ಯಾಟರಿ ಹೊಂದಿದೆ ಎಂದು ತಿಳಿದುಬಂದಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
OnePlus will launch the OnePlus 15R and Pad Go 2 at a grand offline event in Bengaluru on December 17, celebrating its 12th anniversary with a live global stream.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+