OnePlus 15R ಕುರಿತ ಹೊಸ ಮಹತ್ವದ ಘೋಷಣೆ: ಫ್ಯಾನ್ಸ್‌ಗಳಲ್ಲಿ ಸಂಭ್ರಮ!
OnePlus ತನ್ನ ಮುಂಬರುವ ಮಿಡ್‌ರೇಂಜ್ ಪ್ರೀಮಿಯಂ ಫ್ಲ್ಯಾಗ್‌ಶಿಪ್ OnePlus 15R ಕುರಿತ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ. ಕಂಪನಿ ಇತ್ತೀಚಿಗಷ್ಟೇ ಪ್ರೆಸ್ ನೋಟ್ ಒಂದನ್ನು ಬಿಡುಗಡೆಗೊಳಿಸಿದ್ದು, ಮುಂಬರುವ OnePlus 15R ಫೋನ್ ಹೊಸದಾಗಿ ಪರಿಚಯಿಸಲಾದ Qualcomm Snapdragon 8 Gen 5 ಚಿಪ್‌ಸೆಟ್ ಅನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬರಲಿದೆ.! ಈ ಮುಂದಿನ ಜನರೇಷನ್ SoC ಹಿಂದಿನ ಮಾದರಿಯೊಂದಿಗೆ ಹೋಲಿಸಿದರೆ CPU, GPU ಮತ್ತು AI ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಮಟ್ಟದ ಸುಧಾರಣೆಗಳನ್ನು ನೀಡಲಿದೆ.!
ಹೌದು, ಭಾರತದಲ್ಲಿ OnePlus 15R ಅನ್ನು ಮುಂಬರುವ ಡಿಸೆಂಬರ್ 17 ರಂದು ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೂ ಮೊದಲೇ, ಈ ಫೋನ್ ಸಹ ಫ್ಲಾಗ್‌ಶಿಪ್ OnePlus 15 ವಿನ್ಯಾಸದಲ್ಲಿಯೇ ಬರುವುದನ್ನು ಹಾಗೂ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP66, IP68, IP69 ಮತ್ತು IP69K ರೇಟಿಂಗ್ ಹೊಂದಿರುವುದನ್ನು ಸೂಚಿಸಲಾಗಿತ್ತು. ಇದದಲ್ಲದೆ, ಈ ಸಾಧನವನ್ನು Charcoal Black ಮತ್ತು Mint Breeze ಎಂಬ ಎರಡು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದ್ದು, Amazon ಹಾಗೂ OnePlus ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು ಎಂಬ ವಿಷಯಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು.
ಇದೀಗ OnePlus 15R ಪೋನಿನ ಪ್ರೊಸೆಸರ್ ಮಾಹಿತಿ ಹೊರಬಿದ್ದಿದೆ. Qualcomm ಪ್ರಕಾರ, ಈ Snapdragon 8 Gen 5 ಪ್ರೊಸೆಸರ್ ಗರಿಷ್ಠ 3.8GHz ಕ್ಲಾಕ್ ಸ್ಪೀಡ್ ಹೊಂದಿದ್ದು, ಹೊಸ Oryon CPU, ಸುಧಾರಿತ Adreno GPU, ಹಾಗೂ ವೇಗವಾದ AI ಕಾರ್ಯಗಳಿಗಾಗಿ Hexagon NPU ಅನ್ನು ಒಳಗೊಂಡಿದೆ. ಜೊತೆಗೆ, ಚಿಪ್‌ಸೆಟ್‌ನಲ್ಲಿ Snapdragon X80 5G Modem-RF, Wi-Fi 7, ಮತ್ತು Bluetooth 6 ಸಂಪರ್ಕಿತ ತಂತ್ರಜ್ಞಾನಗಳ ಬೆಂಬಲವಿದೆ. ಕಂಪನಿಯ ಪ್ರಕಾರ, ಈ ಚಿಪ್‌ಸೆಟ್ CPU ಕಾರ್ಯಕ್ಷಮತೆಯಲ್ಲಿ 36%, GPU ನಲ್ಲಿ 11%, ಮತ್ತು AI ಸಾಮರ್ಥ್ಯದಲ್ಲಿ 46% ಹೆಚ್ಚುವರಿ ನೀಡಲಿದೆ.

ಹಿಂದಿನ ಹಲವಾರು ಲೀಕ್ಸ್‌ಗಳ ಪ್ರಕಾರ, ಮುಂಬರುವ OnePlus 15R ನಲ್ಲಿ 6.7 ಇಂಚಿನ OLED ಡಿಸ್‌ಪ್ಲೇ 1.5K ರೆಸಲ್ಯೂಶನ್‌ನೊಂದಿಗೆ ಲಭ್ಯವಾಗುವ ಸಾಧ್ಯತೆ ಇದೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಸೆನ್ಸರ್ ಹಾಗೂ 8MP ಅಲ್ಟ್ರಾವೈಡ್ ಸೆನ್ಸರ್‌ಗಳನ್ನು ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ದೊರೆಯಬಹುದು ಎಂದು ವರದಿಯಾಗಿದೆ. ಜೊತೆಗೆ, ಈ ಸಾಧನದಲ್ಲಿ 8,000mAh ಅಥವಾ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ, 100W ವೇಗದ ವೈರ್‌ಡ್ ಚಾರ್ಜಿಂಗ್, ಮತ್ತು ಗರಿಷ್ಠ 16GB LPDDR5X Ultra RAM valamint 1TB UFS 4.1 ಸ್ಟೋರೇಜ್ ಆಯ್ಕೆಗಳಿರುವ ನಿರೀಕ್ಷೆಯಿದೆ.
OnePlus 15R ಬಿಡುಗಡೆಗೆ ಇನ್ನೂ ಕೆಲವು ವಾರಗಳು ಬಾಕಿ ಇದ್ದರೂ, ದೇಶದಾದ್ಯಂತ ಮೊಬೈಲ್ ಪ್ರಿಯರಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿಸಿದೆ. ಉಳಿದ ವಿವರಗಳನ್ನು ಕಂಪನಿ ಅಧಿಕೃತ ಲಾಂಚ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸುವ ಸಾಧ್ಯತೆ ಇದೆ. ಆದರೆ, ಈ ಪೋನ್ IP66, IP68, IP69 ಮತ್ತು IP69K ರೇಟಿಂಗ್‌ಗಳನ್ನು ಪಡೆದಿರುವುದು ಮತ್ತು ಹೊಸದಾಗಿ ಪರಿಚಯಿಸಲಾದ Qualcomm Snapdragon 8 Gen 5 ಚಿಪ್‌ಸೆಟ್ ಅನ್ನು ಹೊಂದಿರುವುನ್ನು ನೋಡಿದರೆ, ಇದು ಉನ್ನತ ಮಟ್ಟದ ನಿರ್ಮಾಣ ಗುಣಮಟ್ಟ ಮತ್ತು ಫೀಚರ್ಸ್ ಹೊತ್ತು ಬರುತ್ತಿದೆ ಎಂಬುದನ್ನು ನಾವು ಊಹಿಸಬಹುದು.
ಭಾರತದಲ್ಲಿ ಮುಂಬರುವ ಡಿಸೆಂಬರ್ 17 ರಂದು OnePlus 15R ಮತ್ತು OnePlus Pad Go 2 ಎರಡೂ ಸಾಧನಗಳನ್ನು ಪರಿಚಯಿಸುವುದಾಗಿ ಕಂಪೆನಿಯು ತಿಳಿಸಿದ್ದು, OnePlus 15R ಫೋನ್ ಮತ್ತು OnePlus Pad Go 2 ಎರಡೂ ಸಾಧನಗಗಳ ಬಣ್ಣ ಆಯ್ಕೆಗಳು, ಲಭ್ಯತೆ ಮತ್ತು ಇತರೆ ಕೆಲವು ಗಮನಾರ್ಹ ಅಂಶಗಳನ್ನು ಟೀಸ್ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications








