ಆಕ್ಸಿಜನ್ ಒಎಸ್ 3.5.5 ಅಪ್ಡೇಟ್ ಪಡೆದುಕೊಂಡ ಒನ್ ಪ್ಲಸ್ 2.

|

ಈ ತಿಂಗಳ ಪ್ರಾರಂಭದಲ್ಲಿ ಒನ್ ಪ್ಲಸ್ 3ಗೆ ಆಕ್ಸಿಜನ್ ಒಎಸ್ 3.2.8 ಅಪ್ಡೇಟ್ ಕೊಟ್ಟಿದ್ದ ಚೀನಾದ ಸ್ಮಾರ್ಟ್ ಫೋನ್ ತಯಾರಕ ಈಗ ಅಧಿಕೃತವಾಗಿ ಒನ್ ಪ್ಲಸ್ 2 ಸ್ಮಾರ್ಟ್ ಫೋನುಗಳಿಗೆ ಆಕ್ಸಿಜನ್ ಒಎಸ್ 3.5.5 ಅಪ್ಡೇಟ್ ನೀಡಲಾರಂಭಿಸಿದೆ. ಈ ಹೊಸ ಸಾಫ್ಟ್ ವೇರ್ ಒನ್ ಪ್ಲಸ್ 2ಗೆ ಅನೇಕ ಹೊಸ ವಿಶೇಷತೆಗಳನ್ನು ನೀಡಲಿದೆ.

ಆಕ್ಸಿಜನ್ ಒಎಸ್ 3.5.5 ಅಪ್ಡೇಟ್ ಪಡೆದುಕೊಂಡ ಒನ್ ಪ್ಲಸ್ 2.

ಆಕ್ಸಿಜನ್ ಒಎಸ್ 3.5.5 ಅಪ್ಡೇಟ್ ಆದ ನಂತರ ಒನ್ ಪ್ಲಸ್ 2 ಕೊನೆಗೂ ವೋಲ್ಟೇಗೆ ಬೆಂಬಲ ನೀಡಲಿದೆ. ಇದರಿಂದಾಗಿ ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಹಿಯರ್ ಕೊಡುಗೆಯನ್ನು ಈ ಮೊಬೈಲಿನಲ್ಲಿ ಉಪಯೋಗಿಸಬಹುದಾಗಿದೆ. ವೋಲ್ಟೇಯ ಜೊತೆಗೆ, ಈ ಅಪ್ಡೇಟ್ ನಿಂದಾಗಿ ಆ್ಯಪ್ ಲಾಕರ್ ನ ಇಂಟರ್ ಫೇಸ್ ನಲ್ಲಿ ಕೆಲವು ಬದಲಾವಣೆಗಳಾಗಲಿವೆ, ಬ್ಯಾಟರಿ ಸೇವಿಂಗ್ ಮೋಡ್, ಗೇಮಿಂಗ್ ಮೋಡ್, ಹೊಸ ಅಲರ್ಟ್ ಸ್ಲೈಡರ್ ಮತ್ತು ವಾಲ್ಯೂಮ್ ನಿಯಂತ್ರಿಸುವ ಬಾರ್ ಬರಲಿದೆ. ಚಿಕ್ಕ ಪುಟ್ಟ ತೊಂದರೆಗಳನ್ನು ಹೊಸ ಸಾಫ್ಟ್ ವೇರ್ ಅಪ್ಡೇಟ್ ನಲ್ಲಿ ನಿವಾರಿಸಲಾಗಿದೆ.

ಓದಿರಿ: ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

ಈ ಹೊಸ ವಿಶೇಷತೆಗಳ ಜೊತೆಗೆ, ಈ ಹೊಸ ಸಾಫ್ಟ್ ವೇರ್ ನಲ್ಲಿ ಕೆಲವು ಬಾಧಕಗಳೂ ಇವೆ. ಈ ಅಪ್ಡೇಟ್ ನಿಂದಾಗಿ ಗಡಿಯಾರ, ಕ್ಯಾಲ್ಕುಲೇಟರ್ ಮತ್ತು ಮೆಸೇಜಸ್ ತಂತ್ರಾಂಶ ಇಲ್ಲವಾಗುತ್ತದೆ; ಸಾಧನದ ಹೆಸರು, ರಿಂಗ್ ಟೋನುಗಳು, ಬಣ್ಣಗಳು ಮತ್ತು ಬ್ಯಾಟರಿ ಸೂಚಕವೆಲ್ಲವೂ ರೀಸೆಟ್ ಆಗಿಬಿಡುತ್ತದೆ.

ನೀವು ಒನ್ ಪ್ಲಸ್ 2 ಉಪಯೋಗಿಸುತ್ತಿದ್ದರೆ, ನಿಮಗೀಗಾಲೇ ಓ.ಟಿ.ಎ ಅಪ್ಡೇಟ್ ಬಗ್ಗೆ ನೋಟಿಫಿಕೇಷನ್ ಬಂದಿರಬೇಕು; ಬಂದಿಲ್ಲದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ, ಒನ್ ಪ್ಲಸ್ ಪ್ರಕಾರ ಕೆಲವೇ ಮೊಬೈಲುಗಳು ಸದ್ಯಕ್ಕೆ ಅಪ್ಡೇಟ್ ಪಡೆಯಲಿದೆ ಮತ್ತು ನಿಧಾನಕ್ಕೆ ಬರುವ ದಿನಗಳಲ್ಲಿ ಎಲ್ಲಾ ಫೋನುಗಳಿಗೂ ಈ ಅಪ್ಡೇಟ್ ಲಭ್ಯವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
OnePlus 2 gets OxygenOS 3.5.5 update, brings VoLTE support and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X