Just In
Don't Miss
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವನ್ ಪ್ಲಸ್ ಥ್ರೀ - ನಿಮಗೆ ತಿಳಿದಿಲ್ಲದ ಕೆಲವು ಟ್ರಿಕ್ಕುಗಳು
ಬರೆಯ ಅರ್ಧ ಘಂಟೆಯಲ್ಲಿಯೇ ಪೂರ್ಣ ಚಾರ್ಜ್ ಆಗುತ್ತದೆ ಎಂದು ಭಾರೀ ಪ್ರಚಾರ ಮಾಡಿಕೊಳ್ಳುತ್ತಿರುವ ರೂ.27,999ರಷ್ಟು ಬೆಲೆಬಾಳುವ ಈ ಮೊಬೈಲ್ ಕೇವಲ ಅಮೆಜಾನ್ ತಾಣದ ಮೂಲಕ ಮಾತ್ರ ಲಭ್ಯ. ಜೂನ್ 24, 2016 ರಲ್ಲಿ ಬಿಡುಗಡೆಯಾದ ಈ ಮೊಬೈಲಿನ ವಿನ್ಯಾಸ, ಕ್ಯಾಮೆರಾ, ಪ್ರೊಸೆಸರ್ ಮತ್ತು ಇತರ ವಿವರಗಳೆಲ್ಲಾ ಇದರ ಹಿಂದಿನ ಆವೃತ್ತಿಗಳಿಗೆ ಅನುಗುಣವಾಗಿಯೇ ಇದ್ದರೂ ಈ ಬಾರಿ ಹೆಚ್ಚು ನಿಖರ ಮತ್ತು ಹೆಚ್ಚು ಸಬಲವಾಗಿರುವಂತೆ ನೋಡಿಕೊಳ್ಳಲಾಗಿದೆ.

ಹಿಂದಿನ ಆವೃತ್ತಿಗಳಲ್ಲಿಲ್ಲದ ಬೆರಳಚ್ಚು ಸ್ಕ್ಯಾನರ್, ಕ್ವಾಡ್ ಹೆಚ್ ಡಿಸ್ಪ್ಲೇ, ಉನ್ನತಿಗೇರಿಸಿಕೊಂಡ ಕ್ಯಾಮೆರಾ, ದೃಢ ಜಿಪಿಯು ಹೆಚ್ಚಿನವರ ಗಮನ ಸೆಳೆದಿದೆ. ಒಂದು ವೇಳೆ ಈ ಬೆಲೆ ತೆರಲು ಸಿದ್ಧರಿದ್ದರೆ ಇದು ನಿಜಕ್ಕೂ ಕೊಟ್ಟ ಹಣಕ್ಕೆ ಮೋಸ ಮಾಡದಿರುವ ಉತ್ತಮ ಗ್ಯಾಜೆಟ್ ಆಗಿದೆ.
ಓದಿರಿ: 90 ದಿನ ಉಚಿತ ಅನ್‌ಲಿಮಿಟೆಡ್ 4G ಡಾಟಾ ಆಫರ್ ನೀಡುವ 'ಮೈಫೈ ಡಿವೈಸ್'
ಆದರೆ ಈ ಮೊಬೈಲ್ ಕೊಂಡ ಬಳಿಕ ಇದರಲ್ಲಿರುವ ಎಷ್ಟೋ ವೈಶಿಷ್ಟ್ಯಗಳು ನಿಮ್ಮ ಗಮನಕ್ಕೇ ಬರದಿದ್ದರೆ ಹೇಗೆ? ಇಂತಹ ಕೆಲವು ಮುಖ್ಯ ವೈಶಿಷ್ಟ್ಯಗಳನ್ನು ಸಂಗ್ರಹಿಸಲಾಗಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗುತ್ತಿದೆ:

ಮ್ಯಾನುವಲ್ ಕ್ಯಾಮೆರಾ ಮೋಡ್
ಒನ್ ಪ್ಲಸ್ ೩ ಮೊಬೈಲ್ ಕ್ಯಾಮೆರಾದಲ್ಲಿ ಮ್ಯಾನುವಲ್ ಅಂದರೆ ನೀವೇ ಆಯ್ದುಕೊಳ್ಳಬಹುದಾದ ಹಲವು ಲಕ್ಷಣಗಳಿವೆ. ಇದರಿಂದ ಫೋಕಸ್ ಮತ್ತು ಎಕ್ಸ್ಪೋಷರ್ ಗಳನ್ನು ನಿಯಂತ್ರಿಸಬಹುದು. ಇದಕ್ಕಾಗಿ ಕ್ಯಾಮೆರಾ ಆಪ್ ತೆರೆದು ಎಡಕ್ಕೆ ಸವರಿದಾಗ ಮ್ಯಾನ್ಯುವಲ್ ಮೋಡ್ ಆಯ್ದುಕೊಳ್ಳಲು ಆಯ್ಕೆ ನೀಡುತ್ತದೆ.

ಕ್ಯಾಮೆರಾಕ್ಕೂ ವಾಲ್ಯೂಂ ಕೀ
ಶಟರ್ ಸದ್ದನ್ನೂ ಹೆಚ್ಚು ಕಡಿಮೆ ಮಾಡಬೇಕಾದರೆ ಇದರಲ್ಲಿರುವ ವಾಲ್ಯೂಂ ಹ್ಯಾಂಡಲ್ ಅನ್ನು ಮೇಲೆ ಕೆಳಗೆ ಜಾರಿಸಿ. ಇದೇ ಬಟನ್ ವೀಡಿಯೋ ರೆಕಾರ್ಡಿಂಗ್ ವೇಳೆ ಶಟರ್ ಸದ್ದನ್ನು ಹೆಚ್ಚು ಕಡಿಮೆ ಮಾಡಲು ಬಳಸಬಹುದು.

ಬಟನ್ನುಗಳನ್ನು ಕೆಳಕ್ಕೆ ಜಾರಿಸಿ
ಇದಕ್ಕಾಗಿ ಸೆಟ್ಟಿಂಗ್ಸ್ ಗೆ ಹೋಗಿ ಬಟನ್ಸ್ ಎಂದಿರುವಲ್ಲಿ ಆಯ್ದುಕೊಂಡು ಇದನ್ನು ಜಾರಿಸಿ ಕೆಳಗಿಳಿಸಿದರೆ ಎಲ್ಲವೂ ಕೆಳಗೆ ಬರುತ್ತವೆ.

ಎರಡು ಬಾರಿ ಕುಟ್ಟುವ ಆಯ್ಕೆ
ಕೆಲವರಿಗೆ ಎರಡು ಬಾರಿ ಕುಟ್ಟಿ ಸ್ಕ್ರೀನ್ ಆನ್ ಆಫ್ ಮಾಡುವುದು ಇಷ್ಟ. ಮೆನು ಆಪ್ಷನ್ ನಲ್ಲಿ ಡಬ್ಬಲ್ ಟ್ಯಾಪ್ ಎಂದಿವುದನ್ನು ಆಯ್ದುಕೊಂಡು ನಿಮ್ಮ ನೆಚ್ಚಿನ ಆಪ್ ಅಥವಾ ಸ್ಕ್ರೀನ್ ತೆರೆಯುವುದು ಮೊದಲಾದವುಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಿ.

ಶೆಲ್ಫ್ ಗಾಗಿ ಎಡ ಬಟನ್ ಅನ್ನು ಹೆಚ್ಚು ಕಾಲ ಒತ್ತಿ
Android Marshmallow Oxygen OS upgrade ಎಂಬ ಆವೃತ್ತಿ ಕೇವಲ ಈ ಮೊಬೈಲಿನಲ್ಲಿ ಬಂದಿದ್ದು ಇದರ ಮೂಲಕ ಶೆಲ್ಫ್ ಎಂಬ ವೈಶಿಷ್ಟ್ಯತೆಯನ್ನು ನೀಡಲಾಗಿದೆ. ಇದರಿಂದ ನಿಮ್ಮ ನೆಚ್ಚಿನ ಮತ್ತು ಅಗತ್ಯದ ಆಪ್ ಗಲಾದ ಕಾಂಟಾಕ್ಟ್ಸ್, ಪ್ಲಸ್ ಎಸೆನ್ಶಿಯಲ್ ಮತ್ತು ವಿಡ್ಗೆಟ್ ಗಳು ಒಂದೇ ಬಾರಿ ತೆರೆದುಕೊಳ್ಳುತ್ತವೆ.

ಗೂಗಲು ನೌ ಗಾಗಿ ಮೇಲೆ, ನೋಟಿಫಿಕೇಶನ್ ಗಾಗಿ ಕೆಳಗೆ ಸವರಿ:
ಸುಲಭವಾಗಿ ಹುಡುಕಾಟ ನಡೆಸಲು ಒಂದೇ ಬೆರಳಿನಿಂದ ಮೇಲೆ ಅಥವಾ ಕೆಳಗೆ ಸವರಿದರೆ ಸಾಕು.

ನೋಟಿಫಿಕೇಶನ್ ಪ್ಯಾನೆಲ್ ನಿಮ್ಮಿಷ್ಟದಂತೆ ಅಲಂಕರಿಸಿ
ನೋಟಿಫಿಕೇಶನ್ ಪ್ಯಾನೆಲ್ ಮೇಲಿರುವ ಯಾವುದೇ ವಿಷಯಗಳನ್ನು ನಿಮಗೆ ಇಷ್ಟ ಬಂದತೆ ಜಾರಿಸಿ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಜೋಡಿಸಬಹುದು.

ರಾತ್ರಿಗಾಗಿ ಸುಲಭ ನೈಟ್ ಮೋಡ್
ರಾತ್ರಿ ಓದಲು ಸುಲಭವಾಗುವಂತೆ ನೈಟ್ ಮೋಡ್ ಅನುಸರಿಸಲು ನೋಟಿಫಿಕೇಶನ್ ಪ್ಯಾನೆಲ್ ನಲ್ಲಿರುವ ಬಟನ್ ಮೂಲಕ ನಿಮಗೆ ಸೂಕ್ತವಾಗುವಂತೆ ಬೆಳಕು ಮತ್ತು ಬಣ್ಣಗಳನ್ನು ಬದಲಿಸಬಹುದು.

ಮೇನ್ ಸೆಟ್ಟಿಂಗ್ ಗಾಗಿ ಟಾಗಲ್ ಅನ್ನು ಹೆಚ್ಚು ಕಾಲ ಒತ್ತಿ ಹಿಡಿಯಿರಿ
ನೋಟಿಫಿಕೇಶನ್ ಪ್ಯಾನೆಲ್ ನಲ್ಲಿರುವ ನಿಮಗೆ ಅಗತ್ಯವಾದ ಟಾಗಲ್ ಮೇಲೆ ಹೆಚ್ಚು ಕಾಲ ಒತ್ತಿ ಹಿಡಿದರೆ ಸೆಟ್ಟಿಂಗ್ ಗೆ ನೇರವಾಗಿ ಹೋಗುತ್ತದೆ.

ಡಿಸ್ಪ್ಲೇ ಬ್ಯಾಲೆನ್ಸ್
ಡಿಸ್ಲ್ಪೇ ಬಣ್ಣ, ಬೆಳಕಿನ ಪ್ರಖರತೆ, ನಿದ್ದೆ ಮಾಡಲು ಅನುವು ಮಾಡಿಕೊಡುವ ಮೊದಲಾದ ನಿಯಂತ್ರಣಗಳನ್ನು ಸುಲಭವಾಗಿ ಪಡೆಯಲು ಮೊದಲು ಸೆಟ್ಟಿಂಗ್ಸ್ ಟ್ಯಾಪ್ ಮಾಡಿ ಬಳಿಕ ಡಿಸ್ಲ್ಪೇ ಆಯ್ದುಕೊಳ್ಳಿ.

ಕ್ಯಾಮೆರಾ ಲಾಂಚ್ ಮಾಡಲು ಪವರ್ ಬಟನ್ ಎರಡು ಬಾರಿ ಕುಟ್ಟಿ
ತಕ್ಷಣಕ್ಕೇ ಕ್ಯಾಮೆರಾ ತೆರೆಯಬೇಕಾದರೆ ಮೊದಲು ಡಿಸ್ಪ್ಲೇ ಸೆಟ್ಟಿಂಗ್ ನಲ್ಲಿ ‘press power button twice for camera' ಎಂದಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಮುಂದಿನ ಬಾರಿ ಪವರ್ ಬಟನ್ ಎರಡು ಬಾರಿ ಕುಟ್ಟಿದರೆ ಥಟ್ಟನೇ ಕ್ಯಾಮೆರಾ ಆನ್ ಆಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470