Home
ಮೊಬೈಲ್

ಜೂನ್ 20ರಂದು ಬಿಡುಗಡೆಯಾಗುವ ಓನ್‌ಪ್ಲಸ್ 5ನಲ್ಲಿ ಅಂತಹುದೇನಿದೆ...?

ಓನ್‌ಪ್ಲಸ್ 3 ಮತ್ತು ಓಬ್‌ಪ್ಲಸ್ 3T ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿ ಮಾರುಕಟ್ಟೆಯಲ್ಲಿ ಬಿಕರಿ ಆಗುತ್ತಿರುವ ಸಂದರ್ಭದಲ್ಲಿ ಓನ್‌ಪ್ಲಸ್ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್‌ಫೋನ್ ಓನ್‌ಪ್ಲಸ್ 5 ಬಿಡುಗಡೆಗೆ ಮುಂದಾಗಿದೆ.

By Srinidhi

ಸದ್ಯ ಮಾರುಕಟ್ಟೆಯಲ್ಲಿ ಓನ್‌ಪ್ಲಸ್ ಹವಾ ಜೋರಾಗಿದೆ. ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿ ಮಾರುಕಟ್ಟೆಯಲ್ಲಿ ಬಿಕರಿ ಆಗುತ್ತಿರುವ ಸಂದರ್ಭದಲ್ಲಿ ಓನ್‌ಪ್ಲಸ್ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್‌ಫೋನ್ ಓನ್‌ಪ್ಲಸ್ 5 ಬಿಡುಗಡೆಗೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಈ ಓನ್‌ಪ್ಲಸ್ 5 ಹೇಗಿದೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ಜೂನ್ 20ರಂದು ಬಿಡುಗಡೆಯಾಗುವ ಓನ್‌ಪ್ಲಸ್ 5ನಲ್ಲಿ ಅಂತಹುದೇನಿದೆ...?

ಓದಿರಿ: ನಾಳೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಪೋನ್‌ಗಳಾದ ಆಪಲ್ ಐಫೋನ್ 7 ಮತ್ತು ಸ್ಯಾಮ್‌ಸಂಗ್ S8ಗೆ ಭರ್ಜರಿ ಸ್ಪರ್ಧೆ ನೀಡಲು ಓನ್‌ಪ್ಲಸ್ 5 ಮುಂದಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಓನ್‌ಪ್ಲಸ್‌ 5 ಸ್ಪರ್ಧೆಯನ್ನು ಬೆಲೆಯಲ್ಲಿ ಮತ್ತು ಗುಣಮಟ್ಟದಲ್ಲಿ ಎದುರಿಸಲು ಸಾಧ್ಯವೇ ಇಲ್ಲವಂತೆ.

ನೆವರ್ ಸೆಟೆಲ್ ಟ್ಯಾಗ್‌ಲೈನಿನೊಂದಿಗೆ ಓನ್‌ಪ್ಲಸ್ 5:

ನೆವರ್ ಸೆಟೆಲ್ ಟ್ಯಾಗ್‌ಲೈನಿನೊಂದಿಗೆ ಓನ್‌ಪ್ಲಸ್ 5:

ಈಗಾಗಲೇ ಹವಾ ಎಬ್ಬಿಸಿರುವ ಓನ್‌ಪ್ಲಸ್ 5 ನೆವರ್ ಸೆಟಲ್ ಎನ್ನುವ ಟ್ಯಾಗ್‌ಲೈನಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡ್ಡುತ್ತಿದ್ದು, ಇದರ ಕ್ವಾಲಿಟಿ, ಪರ್ಫರ್ಮೆನ್ಸ್ ಮತ್ತು ವಿಶೇಷತೆಗಳನ್ನು ನೋಡಿದರೆ ಈ ಟ್ಯಾಗ್‌ಲೈನಿನ ಅರ್ಥತಿಳಿಯಲಿದೆ. ಇದೇ ಜೂನ್ 20ರಂದು ಬಿಡುಗಡೆಯಾಗಲಿದ್ದು, ಜೂನ್ 22 ರಂದು ಈ ಪೋನ್ ಬಳಕೆದಾರರ ಕೈ ಸೇರಲಿದೆ.

ಸೆಲ್ಫಿಗಾಗಿ ಹೊಸ ಮಾದರಿಯ ಕ್ಯಾಮೆರಾ:

ಸೆಲ್ಫಿಗಾಗಿ ಹೊಸ ಮಾದರಿಯ ಕ್ಯಾಮೆರಾ:

ಹೊಸದಾಗಿ ಲಾಂಚ್ ಆಗಲಿರುವ ಓನ್‌ಪ್ಲಸ್ 5 ಸ್ಮಾರ್ಟ್‌ಫೋನಿನಲ್ಲಿ ಓನ್‌ಪ್ಲಸ್ ಬೇರೆ ಮಾದರಿಯ ಸೆಲ್ಫಿ ಕ್ಯಾಮೆರಾವನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುವ ಬಗ್ಗೆ ಮಾಹಿತಿ ದೊರೆತಿದು ಅದೇ ಮಾದರಿಯಲ್ಲಿ ಮುಂಭಾಗದಲ್ಲಿಯೂ ವಿಶೇಷ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದೆ. ಇದಕ್ಕಾಗಿ ಟ್ವೀಟರ್ ನಲ್ಲಿ ಕೇಲವು ಫೋಟೋಗಳನ್ನು ಓನ್‌ಪ್ಲಸ್ ಪೋಸ್ಟ್ ಮಾಡಿದ್ದು, ತನ್ನ ಕ್ಯಾಮರಾ ಗುಣಮಟ್ಟವನ್ನು ಅದರ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡಿದೆ.

ಫೋನಿನ ವಿಶೇಷತೆಗಳನ್ನು ನೋಡುವುದಾದರೆ:

ಫೋನಿನ ವಿಶೇಷತೆಗಳನ್ನು ನೋಡುವುದಾದರೆ:

ಆಗಲೇ ಹೇಳಿದಂತೆ ಓನ್‌ಪ್ಲಸ್ 5 ಟಾಪ್ ಎಂಡ್ ಸ್ಮಾರ್ಟ್‌ಫೋನ್‌ ಆಗಿದ್ದು, ಇದರಲ್ಲಿರುವ ಆಯ್ಕೆಗಳು ಉತ್ತಮ ಗುಣಮಟ್ಟದಿಂದಲೇ ಕೂಡಿರಲಿದೆ. ಈ ಫೋನಿನಲ್ಲಿ 8GB RAM ಇರಲಿದ್ದು, ಇದರೊಂದಿಗೆ ಟಾಪ್ ಎಂಡ್ ಪ್ರೋಸೆರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಚಿಪ್ ಸೆಟ್ ಕಾಣಬಹುದಾಗಿದೆ. ಇದಲ್ಲದೇ ಈ ಫೋನಿನಲ್ಲಿ 3,400 mAh ಬ್ಯಾಟರಿ ಇದ್ದು, ವೇಗದ ಚಾರ್ಜಿಂಗ್ ಆಗಿ ಡ್ಯಾಷ್ ಚಾರ್ಜರ್ ಆಯ್ಕೆಯನ್ನು ನೀಡಲಾಗಿದೆ. ಈ ಫೋನ್ ಕೇವಲ 30 ನಿಮಿಷದಲ್ಲಿ ಫುಲ್ ಚಾರ್ಜ್ ಆಗಲಿದೆ.

ಅಭಿಮಾನಿಗಳ ಮುಂದೆ ಫೋನ್ ಲಾಂಚ್:

ಅಭಿಮಾನಿಗಳ ಮುಂದೆ ಫೋನ್ ಲಾಂಚ್:

ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್‌ ಅನ್ನು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೂನ್ 20ರಂದು ಲಾಂಚ್ ಮಾಡಲಾಗುವುದು. ಅಲ್ಲದೇ ಕಾರ್ಯಕ್ರಮದ ಲೈವ್ ಅನ್ನು ವಿವಿಧ ಚಾನಲ್ ಗಳಲ್ಲಿ ಪ್ರಸಾರ ಮಾಡಲಾಗುವುದು. ಇದಲ್ಲದೇ ಈ ಕಾರ್ಯಕ್ರಮವನ್ನು ಓನ್‌ಪ್ಲಸ್ ಅಭಿಮಾನಿಗಳ ಮಧ್ಯೆ ನಡೆಸಲಾಗುವುದು. ಇದಕ್ಕಾಗಿ ಫ್ಯಾನ್‌ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ಓನ್‌ಪ್ಲಸ್ ತನ್ನ ವೆಬ್ ಸೈಟಿನಲ್ಲಿ ಟಿಕೇಟ್ ಗಳನ್ನು ನೀಡುತ್ತಿದೆ. ಇದಲ್ಲದೇ ಅಂದೇ ಬೆಸ್ಟ ಸ್ಮಾರ್ಟ್‌ಫೋನ್ ಕಾಟೆಸ್ಟ್ ನ ವಿಜೇತರಿಗೆ ಒಂದು ಕೋಟಿ ಕ್ಯಾಷ್ ಪ್ರೈಸ್ ಸಹ ನೀಡಲಾಗುತ್ತದೆ.

ನೀವು ಉತ್ಸುಕರಾಗಿದ್ದೀರಾ..?

ನೀವು ಉತ್ಸುಕರಾಗಿದ್ದೀರಾ..?

ಈಗಾಗಲೇ ಓನ್‌ಪ್ಲಸ್ ಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದು, ಓನ್‌ಪ್ಲಸ್ 5 ಲಾಂಚ್ ಆಗುವುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಯತ್ನಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಓನ್‌ಪ್ಲಸ್ 5 ಹವಾ ಜೋರಾಗಿದೆ ಎಂದೇ ಹೇಳಬಹುದು. ಈ ಫೋನಿನಲ್ಲಿ ಆ ಆಯ್ಕೆಗಳಿದೆ ಎನ್ನುವ ರೂಮರ್‌ಗಳು ಇದರ ಕುರಿತ ಕಾತುರತೆಯನ್ನು ಇನಷ್ಟು ಹೆಚ್ಚಿಸಿದೆ.

Best Mobiles in India

English summary
Last year's OnePlus flagship models - OnePlus 3 and 3T are still the most preferred smartphones among the bargain hunters. Besides being affordable, these flagship phones are crafted elegantly and have a great set of features. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+