Subscribe to Gizbot

ನಾಳೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಲಾಂಚ್: ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

Written By:

2017ರ ಫೆಬ್ರವರಿಯಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಮೊದಲ ಬಾರಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯ ಮಾಡಿದ್ದ ನೋಕಿಯಾ ಕಂಪನಿ, ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಮಾರ್ಟ್‌ಫೋನ್‌ ಗಳನ್ನು ಜೂನ್ 13ರಂದು ಪರಿಚಯಿಸಲಿದೆ.

ಓದಿರಿ: ಶಾಕಿಂಗ್ ಬೆಲೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ಖರೀದಿಸಲು ಸಿದ್ಧತೆ ನಡೆಸಿ..!!

ಈ ಕುರಿತು ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮಾರಾಟದ ಹೊಣೆ ಹೊತ್ತಿರುವ HDM ಗ್ಲೋಬಲ್ ಸಂಸ್ಥೆ ಮಾಹಿತಿಯನ್ನು ನೀಡಿದ್ದು, ಜೂನ್ 13ರಂದು ಭಾರತದಲ್ಲಿ ನೋಕಿಯಾ ಫೋನ್‌ಗಳಲ್ಲಿ ದೊರೆಯಲಿದೆಯಂತೆ. ನೋಕಿಯಾ 6, ನೋಕಿಯಾ 5 ಮತ್ತು ನೋಕಿಯಾ 3 ಸ್ಮಾರ್ಟ್‌ಫೋನ್‌ಗಳು ಈ ಪಟ್ಟಿಯಲ್ಲಿವೇ.

ನಾಳೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಲಾಂಚ್: ದೊರೆಯುವುದು ಎಲ್ಲಿ..?

ಓದಿರಿ: ಕೊನೆಗೂ ನಮ್ಮ ಮೆಟ್ರೋ ಸಂಪೂರ್ಣ ಸಂಚಾರ ಆರಂಭಕ್ಕೆ ಕ್ಷಣಗಣನೆ: ಇಲ್ಲಿದೇ ಸಂಫೂರ್ಣ ಮಾಹಿತಿ..!!!!

ನೋಕಿಯಾ 3310 ಮಾದರಿಯಲ್ಲೇ ಈ ಫೋನುಗಳನ್ನು ಪ್ರಮುಖ ಆಫ್ ಲೈನ್ ಸ್ಟೋರುಗಳಲ್ಲಿ ಮಾರಾಟ ಮಾಡಲಿದೆ ಎನ್ನಲಾಗಿದ್ದು, ಆನ್ ಲೈನಿನಲ್ಲಿ ಮಾರಾಟ ಮಾಡುವ ಸಾಧ್ಯತೆಯೂ ತೀರಾ ಕಡಿಮೆ ಎನ್ನಲಾಗಿದೆ. ಒಂದು ವಿಧದಲ್ಲಿ ಕಂಪನಿಯ ಈ ನಿರ್ಧಾರ ಅಭಿಮಾನಿಗಳಿಗೆ ಬೆಸರವನ್ನು ತರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೋಕಿಯಾ 3 ಸ್ಮಾರ್ಟ್‌ಫೋನಿನ ವಿಶೇಷತೆಗಳು:

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ

 • 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್
 • ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್
 • ನೂತನ ಆಂಡ್ರಾಯ್ಡ್ ನ್ಯಾಗಾ
 • 2 GB RAM ಹಾಗೂ 16 GB ಆಂತರಿಕ ಮೆಮೊರಿ
 • 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
 • ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP
 • 2650mAh ಬ್ಯಾಟರಿ
 • 4G ಸಪೋರ್ಟ್ ಮಾಡಲಿದೆ.
 • ಬೆಲೆ: ರೂ. 9,000.

ನೋಕಿಯಾ 5 ಸ್ಮಾರ್ಟ್‌ಫೋನಿನ ವಿಶೇಷತೆಗಳು:

ನೋಕಿಯಾ 5 ಸ್ಮಾರ್ಟ್‌ಫೋನಿನ ವಿಶೇಷತೆಗಳು:

ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ

 • 5.2 ಇಂಚಿನ HD ಡಿಸ್‌ಪ್ಲೇ
 • ನೂತನ ಆಂಡ್ರಾಯ್ಡ್ ನ್ಯಾಗಾ
 • ಸ್ನಾಪ್ ಡ್ರಾಗನ್ 430 ಪ್ರೋಸೆಸರ್
 • 2 GB RAM ಹಾಗೂ 16 GB ಆಂತರಿಕ ಮೆಮೊರಿ
 • ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದು
 • ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ
 • 3000 mAh ಬ್ಯಾಟರಿ
 • 4G ಸಪೋರ್ಟ್
 • ಬೆಲೆ: ರೂ.14,000.
ನೋಕಿಯಾ 6 ಸ್ಮಾರ್ಟ್‌ಫೋನಿನ ವಿಶೇಷತೆಗಳು:

ನೋಕಿಯಾ 6 ಸ್ಮಾರ್ಟ್‌ಫೋನಿನ ವಿಶೇಷತೆಗಳು:

ನೋಕಿಯಾ 6 ಸ್ಮಾರ್ಟ್‌ಪೋನಲ್ಲಿ

 • 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ
 • ಸ್ನಾಪ್ ಡ್ರಾಗನ್ 430 ಪ್ರೋಸೆಸರ್
 • 3GB RAM ಮತ್ತು 32GB ಇಂಟರ್ನಲ್ ಮೆಮೊರಿ
 • 4GB RAM ಮತ್ತು 64GB ಇಂಟರ್ನಲ್ ಮೆಮೊರಿ
 • ಆಂಡ್ರಾಯ್ಡ್ ನ್ಯಾಗಾ
 • ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾ
 • ಮುಂಭಾಗದಲ್ಲಿ 8 MP ಕ್ಯಾಮೆರಾ
 • 3000mAh ಬ್ಯಾಟರಿ
 • ಬೆಲೆ: ರೂ.16,000

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Finnish company Nokia is confirmed to launch its latest Android smartphones—Nokia 6, 5 and 3 in India tomorrow. to know more visit kannada.gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot