ಬಿಡುಗಡೆ ಆಯ್ತು ಓನ್ ಪ್ಲಸ್ 5: ಹೇಗಿದೆ..? ಬೆಲೆ ಎಷ್ಟು..? ವಿಶೇಷತೆಗಳೇನು..?
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಗೊಂಡಿದೆ. ಈ ಹಿನ್ನಲೆಯಲ್ಲಿ ಓನ್ ಪ್ಲಸ್ 5 ಬೆಲೆ, ವಿಶೇಷತೆ ಸೇರಿದಂತೆ ಈ ಫೋನ್ ದೊರೆಯುವುದೆಲ್ಲಿ ಎಂಬುದರ ಸಂಫೂರ್ಣ ವಿವರ ಇಲ್ಲಿದೆ.
ಬಹು ನಿರೀಕ್ಷಿತ ಓನ್ ಪ್ಲಸ್ ಟಾಪ್ ಎಂಡ್ ಸ್ಮಾರ್ಟ್ ಓನ್ ಪ್ಲಸ್ 5 ಇಂದು ಭಾರತದಲ್ಲಿ ಲಾಂಚ್ ಆಗಿದ್ದು, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಗೊಂಡಿದೆ. ಈ ಹಿನ್ನಲೆಯಲ್ಲಿ ಓನ್ ಪ್ಲಸ್ 5 ಬೆಲೆ, ವಿಶೇಷತೆ ಸೇರಿದಂತೆ ಈ ಫೋನ್ ದೊರೆಯುವುದೆಲ್ಲಿ ಎಂಬುದರ ಸಂಫೂರ್ಣ ವಿವರ ಇಲ್ಲಿದೆ.

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!
ಸದ್ಯ ಮಾರುಕಟ್ಟೆಯಲ್ಲಿರುವ ಶಿಯೋಮಿ, ಆಪಲ್, ಸ್ಯಾಮ್‌ಸಂಗ್, LG ಕಂಪನಿಗಳ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಓನ್ ಪ್ಲಸ್ 5 ಸ್ಪರ್ಧೆ ನೀಡಲಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಪೋನ್ ಒಟ್ಟು ಎರಡು ಮಾದರಿಯಲ್ಲಿ ಲಾಂಚ್ ಆಗಿದ್ದು, ಬನ್ನಿ ಈ ಸ್ಮಾರ್ಟ್‌ಫೋನ್ ಹೇಗಿದೆ ಎಂದನ್ನು ನೋಡುವ.

ಭಾರತದಲ್ಲಿ ಓನ್ ಪ್ಲಸ್ 5 ಬೆಲೆ..?
ಓನ್ ಪ್ಲಸ್ 5 ಅಮೆರಿಕಾ ಮಾರುಕಟ್ಟೆಗಿಂತ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಯೂರೋಪ್ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ದೊರೆಯುತ್ತಿದೆ. ಭಾರತದಲ್ಲಿ 6 GB RAM/ 64 GB ಇಂಟರ್ನಲ್ ಮೆಮೊರಿ ಹೊಂದಿರುವ ಓನ್ ಪ್ಲಸ್ 5 ಬೆಲೆ ರೂ. 32,999 ಆಗಿದೆ. ಇದೇ ಮಾದರಿಯಲ್ಲಿ 8 GB RAM / 128 GB ಇಂಟರ್ನಲ್ ಮೆಮೊರಿ ಓನ್ ಪ್ಲಸ್ 5 ಬೆಲೆ ರೂ. 37,999 ಆಗಿದೆ.

ಓನ್ ಪ್ಲಸ್ 5 ದೊರೆಯುವುದೆಲ್ಲಿ...?
ಇಂದಿನಿಂದಲೇ ಅಂದರೆ ಜೂನ್ 22 ರಿಂದಲೇ ಓನ್ ಪ್ಲಸ್ 5 ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಅದುವೇ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ಮೂಲಕ. ಜೂನ್ 22 ರ ಸಂಜೆ 4 ನಂತರ ದೊರೆಯಲಿದೆ. ಇದಲ್ಲದೇ ಓನ್ ಪ್ಲಸ್ ಸ್ಟೋರ್ ನಲ್ಲಿಯೂ ಈ ಫೋನ್ ಮಾರಾಟವಾಗಲಿದೆ.

ಓನ್ ಪ್ಲಸ್ 5 ವೈಶಿಷ್ಟ್ಯಗಳೇನು..?
ಓನ್ ಪ್ಲಸ್ 5 ಸ್ಮಾರ್ಟ್‌ಫೋನಿನ ಹೈಲೆಟ್ ಎಂದರೆ 'ಹೈರೆಸಲ್ಯೂಷನ್ ಡ್ಯುಯಲ್ ಕ್ಯಾಮೆರಾ ಸಿಸ್ಟಮ್'. ಓನ್ ಪ್ಲಸ್ 5 ನಲ್ಲಿ ಅಳವಡಿಸಿರುವ ಕ್ಯಾಮೆರಾ ಇನ್ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಕಾಣಲು ಸಾಧ್ಯವೇ ಇಲ್ಲವಂತೆ. ಈ ಫೋನಿನ ಹಿಂಭಾಗದಲ್ಲಿ 16 MP ಮತ್ತು 20 MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದು ಅತ್ಯುತ್ತಮ ಫೋಟೊಗಳನ್ನು ತೆಗೆಯಲು ಸಹಾಯವಾಗಲಿದೆ. ಇದಲ್ಲದೇ ಇದರಲ್ಲಿ ಆಕ್ಸಿಜನ್ OS ಕಾಣಬಹುದಾಗಿದೆ. ಅಲ್ಲದೇ ವೇಗವಾಗಿ ಕಾರ್ಯನಿರ್ವಹಿಸುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.

ಓನ್ ಪ್ಲಸ್ 5 ವಿಶೇಷತೆಗಳೇನು..?
ಓನ್ ಪ್ಲಸ್ 5 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಸಿಮ್ ಹಾಕಬಹುದಾಗಿದೆ. ಆಂಡ್ರಾಯ್ಡ್ 7.1 ನೊಂದಿಗೆ ಆಕ್ಸಿಜನ್ OS ಇದರಲ್ಲಿದೆ. 5.5 ಇಂಚಿನ FHD ಅಮೊಲೈಡ್ 2.5D ಕರ್ವಡ್ ಗ್ಲಸ್ ಡಿಸ್‌ಪ್ಲೇ ಇದರಲ್ಲಿದ್ದು, ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ ನೀಡಲಾಗಿದೆ. ಕ್ವಾಲ್ಕಮ್ ಸ್ನಾಪ್ಡ್ರಾಗನ್ 835 ಪ್ರೋಸೆಸರ್ ಇದರಲ್ಲಿ. ಜೊತೆಗೆ ಆಡ್ರಿನೋ 540 GPU ಅಳವಡಿಸಲಾಗಿದೆ. 4G VoLTE ಸಫೋರ್ಟ್ ಮಾಡಲಿದ್ದು, 3300 mAh ಬ್ಯಾಟರಿ ಇದೆ. ಆದರೆ ಈ ಫೋನಿನಲ್ಲಿ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿಲ್ಲ.


Click it and Unblock the Notifications