ನಾಳೆಯಿಂದ ಬ್ರಿಗೇಡ್ ರಸ್ತೆಯಲ್ಲಿ ಒನ್‌ಪ್ಲಸ್ 5T ಸೇಲ್: ಬೆಂಗಳೂರಿಗರಿಗೆ ಬಂಪರ್ ಅವಕಾಶ...!
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒನ್‌ಪ್ಲಸ್ 5T ನಾಳೆ(ನವೆಂಬರ್ 26)ಯಿಂದ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಬ್ರಿಗೇಟ್ ರಸ್ತೆಯಲ್ಲಿರುವ ಒನ್‌ಪ್ಲಸ್ ಸ್ಟೋರ್‌ನಲ್ಲಿ ಎಕ್ಸ್‌ಪೀರಿಯನ್ಸ್ ಮಾಡಬಹುದಾಗಿದೆ.

ಓದಿರಿ: ಟ್ರಾಫಿಕ್ ಪೊಲೀಸ್ ಹಿಡಿದರೆ ಹೆದರಬೇಕಾಗಿಲ್ಲ: ಬಂದಿದೆ ಹೊಸ ಆಪ್! ಯಾಕೆ ಈ ಆಪ್?
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅನ್ನು ಬೆಂಗಳೂರಿನಲ್ಲಿ ಖರೀದಿಸುವವರಿಗೆ ವಿವಿಧ ಆಫರ್ ಗಳನ್ನು ನೀಡಲಾಗಿದ್ದು, ಲಾಂಚಿಂಗ್ ಆಫರ್ ಸಹ ಬಳಕೆದಾರರಿಗೆ ದೊರೆಯಲಿದೆ. ಯಾವ ಯಾವ ಆಫರ್‌ಗಳು ದೊರೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.

ನಾಳೆಯಿಂದ ಮಾರಾಟ ಆರಂಭ:
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಒನ್‌ಪ್ಲಸ್ 5T ಎಕ್ಸ್‌ಪೀರಿಯನ್ಸ್ ಸ್ಟೋರ್‌ನಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ರೂ.1500 ಕ್ಯಾಷ್ ಬ್ಯಾಕ್ ದೊರೆಯಲಿದೆ. ಅಲ್ಲದೇ ಪ್ರೋಟೆಕ್ಟಿವ್ ಕೇಸ್ ಅನ್ನು ಉಚಿತವಾಗಿ ನೀಡಲಾಗುವುದು ಎನ್ನಲಾಗಿದೆ. ಈ ಆಪರ್ ಕೇವಲ ನ.26 ರಂದು ಮಾತ್ರವೇ ಲಭ್ಯವಿರಲಿದೆ.

1008GB ಡೇಟಾ:
ನಾಳೆ ಬೆಂಗಳೂರಿನಲ್ಲಿ ಒನ್‌ಪ್ಲಸ್ 5T ಖರೀದಿಸುವವರಿಗೆ ಐಡಿಯಾದಿಂದ 1008GB ಡೇಟಾ ದೊರೆಯಲಿದೆ. ಅಲ್ಲದೇ ಅಮೆಜಾನ್ ಪ್ರೈಮ್ ವಿಡಿಯೋ ಆಪ್ ಬಳಕೆಗೆ ಸಹ ದೊರೆಯಲಿದೆ. ಇದಲ್ಲದೇ 12 ತಿಂಗಳ ಡ್ಯಾಮೆಜ್ ಇನ್ಸೂರೆನ್ಸ್ ಸಹ ದೊರೆಯಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ;
ಒನ್‌ಪ್ಲಸ್ 5T ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಿದೆ. 64 ಜಿಬಿ ಸಾಮರ್ಥ್ಯದ ಒನ್‌ಪ್ಲಸ್ 5T ಮೊಬೈಲ್‌ಗೆ ₹32,999 ಹಾಗೂ 128 ಜಿಬಿ ಸಾಮರ್ಥ್ಯದ ಫೋನ್‌ಗೆ ₹37,999 ಬೆಲೆ ಇದೆ.

ಒನ್‌ಪ್ಲಸ್ 5T ನವೆಂಬರ್ 28 ರಿಂದ ಆನ್‌ಲೈನಿನಲ್ಲಿ:
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನವೆಂಬರ್ 28 ರಿಂದ ಆನ್‌ಲೈನಿನಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಅಮೆಜಾನ್ ಮತ್ತು ಒನ್‌ಪ್ಲಸ್ ಸ್ಟೋರ್.ಇನ್‌ನಲ್ಲಿ ಮಾರಾಟಕ್ಕೆ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಕ್ರೋಮಾ ಸ್ಟೋರ್‌ನಲ್ಲಿಯೂ ಲಭ್ಯವಿರಲಿದೆ.


Click it and Unblock the Notifications