'ಒನ್‌ಪ್ಲಸ್ 5T' ಪ್ರೀ ಬುಕ್ಕಿಂಗ್ ಆರಂಭ!...ಬೆಲೆ ಕೇಳಿ ಆಪಲ್, ಸ್ಯಾಮ್‌ಸಂಗ್‌ಗೆ ಶಾಕ್!!
ನೂತನ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಇನ್ನು ಬಿಡುಗಡೆಯೇ ಆಗಿಲ್ಲ. ಆದರೆ ಚೀನಾದಲ್ಲಿ ಬಿಡುಗಡೆಗೂ ಮುನ್ನವೇ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಪ್ರೀ ಬುಕ್ಕಿಂಗ್‌ಗೆ ಲಭ್ಯವಿದ್ದು, ಭಾರಿ ಕಡಿಮೆ ಬೆಲೆಗೆ ಫೋನ್ ಮಾರಟಕ್ಕಿಡಲಾಗಿದೆ.!!
ಭಾರತದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿಗಳಿಗೂ ಸೆಡ್ಡುಹೊಡೆದ ಒನ್‌ಪ್ಲಸ್ ಕಂಪೆನಿಯ ನೂತನ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಇನ್ನು ಬಿಡುಗಡೆಯೇ ಆಗಿಲ್ಲ. ಆದರೆ ಚೀನಾದಲ್ಲಿ ಬಿಡುಗಡೆಗೂ ಮುನ್ನವೇ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಪ್ರೀ ಬುಕ್ಕಿಂಗ್‌ಗೆ ಲಭ್ಯವಿದ್ದು, ಭಾರಿ ಕಡಿಮೆ ಬೆಲೆಗೆ ಫೋನ್ ಮಾರಟಕ್ಕಿಡಲಾಗಿದೆ.!!
ಹೌದು, ಚೀನಾದ ನಂಬರ್ ಒನ್ ಡಿಸ್ಟ್ರಿಬ್ಯೂಟರ್ ಒಪ್ಪೋಮಾರ್ಟ್ ಸೈಟ್‌ನಲ್ಲಿ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಮಾರಾಟಕ್ಕಿದ್ದು, ಫೋನ್ ಬೆಲೆ ಕೂಡ ವೈರೆಲ್ ಆಗಿದೆ.! ಭಾರಿ ಪಿಚರ್ಸ್ ಹೊಂದಿರುವ ಈ ಫೋನ್ ಬಿಡುಗಡೆಯಾದ ತಕ್ಷಣವೇ ಹವಾ ಕ್ರಿಯೇಟ್ ಮಾಡಲಿದೆ ಎನ್ನಲಾಗಿದ್ದು, ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೇಜೆಲ್‌ಲೆಸ್ ಡಿಸೈನ್!!
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟಿ ಹಾಕಿರುವ ಫುಲ್ ಸ್ಕ್ರಿನ್ ಡಿಸೈನ್ ಅನ್ನು ಈ ಫೋನ್ ಹೊಂದಿರಲಿದೆ . 18:9 ಅನುಪಾತದ ಡಿಸ್‌ಪ್ಲೇ ಇದಾಗಿದ್ದು, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸಕ್ಕೆ ದಕ್ಕೆತರದಹಾಗಿರಲಿದೆ ಎನ್ನುತ್ತಿವೆ ವರದಿಗಳು.!!

6 ಇಂಚಿನ ಡಿಸ್‌ಪ್ಲೇ!!
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಗೇಮ್ ಆಡಲು ಮತ್ತು ಮಲ್ಟಿಮೀಡಿಯಾಗೆ ಉತ್ತಮ ಅನುಭವನ್ನು ನೀಡಲಿದೆ ಎಂದು ಒನ್‌ಪ್ಲಸ್ ಕಂಪೆನಿ ಈಗಾಗಲೇ ಹೇಳಿದೆ.

ಹೋಮ್ ಬಟನ್ ಇಲ್ಲ!!
ಹೈ ಎಂಡ್ ಸ್ಮಾರ್ಟ್‌ಫೋನ್ ಬಳಕೆದಾರರ ದೃಷ್ಟಿ ಇಟ್ಟುಕೊಂಡಿರುವ ಒನ್‌ಪ್ಲಸ್ 5T ಫೋನ್ ಹೋಮ್ ಬಟನ್ ಇಲ್ಲದೆ ಹೊರಬರುತ್ತಿದೆ. ಬೆಜೆಲ್ ಲೆಸ್ ಡಿಸ್‌ಪ್ಲೇ ಇರುವುದರಿಂದ ಹೋಮ್ ಬಟನ್ ಅಳವಡಿಸಿಲ್ಲ ಎಂದು ತಿಳಿಯಬಹುದು.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ!!
ಇಷ್ಟು ದಿನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ಅಳವಡಿಸುತ್ತಿದ್ದ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಿದೆ.! ಹೋಮ್ ಬಟನ್ ಮೂಲಕವೇ ಮೊದಲು ಫಿಂಗರ್ ಪ್ರಿಂಟ್ ಫೀಚರ್ ಲಭ್ಯವಿತ್ತು.!!

ಡ್ಯುಯಲ್ ಕ್ಯಾಮೆರಾ ಸೆಟಪ್:
ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 20MP + 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಫೋಟೋಗ್ರಫಿಗಾಗಿ ಹೇಳಿ ಮಾಡಿಸಿದಂತೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದ್ದು, ಕ್ಯಾಮೆರಾ ಗುಣಮಟ್ಟ ಅದ್ಬುತವಾಗಿರುವ ಸಾಧ್ತೆ ಇದೆ.!!

ಸ್ನಾಪ್‌ಡ್ರಾಗನ್ 835 ಪ್ರೋಸೆಸರ್!!
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತಿದೆ. ಕ್ವಾಲ್ಕಮ್ ಕಂಪೆನಿಯ ನೂತನ ಈ ಚಿಪ್‌ಸೆಟ್ ಅನ್ನು ಪ್ರಸ್ತುತ ನಂಬರ್ ಒನ್ ಚಿಪ್‌ಸೆಟ್ ಎನ್ನಬಹುದು.!!

ಒನ್‌ಪ್ಲಸ್ 5T ಬೆಲೆ ಎಷ್ಟು?
ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆಯುವಂತೆ ಬಿಡುಗಡೆಯಾಗುತ್ತಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬೆಲೆ ಕೂಡ ವೈರೆಲ್ ಆಗಿದ್ದು, 64GB ವೆರೆಯಂಟ್ ಒನ್‌ಪ್ಲಸ್ 5T ಬೆಲೆ ಕೇವಲ 35677 ರೂ.ಗಳಾಗಿದ್ದರೆ, 128GB ವೆರೆಯಂಟ್ ಒನ್‌ಪ್ಲಸ್ 5T 42175 ರೂಪಾಯಿಗಳಾಗಿವೆ.!!
ಓದಿರಿಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?


Click it and Unblock the Notifications