ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?

ರಿಲಯನ್ಸ್‌ಕಮ್ಯುನಿಕೇಷನ್ಸ್ ತನ್ನ ‘2ಜಿ’ ವಹಿವಾಟನ್ನು ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.!!

|

ಸಾಲದ ಹೊರೆಹೊತ್ತುಕೊಂಡು ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ಕಮ್ಯುನಿಕೇಷನ್ಸ್ ಟೆಲಿಕಾಂ ದರಸಮರಕ್ಕೆ ತುತ್ತಾದ ಮೊದಲ ಟೆಲಿಕಾಂ ಎನ್ನಬಹುದೇ?. ಹೌದು, ರಿಲಯನ್ಸ್‌ಕಮ್ಯುನಿಕೇಷನ್ಸ್ ತನ್ನ '2ಜಿ' ವಹಿವಾಟನ್ನು ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.!!

ಸಂಸ್ಥೆಯು ಇದುವರೆಗೆ ₹ 46 ಸಾವಿರ ಕೋಟಿಗಳ ಸಾಲದ ಸುಳಿಗೆ ಸಿಲುಕಿದ್ದು, ರಿಲಯನ್ಸ್‌ಕಮ್ಯುನಿಕೇಷನ್ಸ್ '2ಜಿ' ವಹಿವಾಟನ್ನು ನವೆಂಬರ್‌ 30ಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಆರ್‌ಕಾಂನ ಕಾರ್ಯನಿರ್ವಾಹಕ ನಿರ್ದೇಶಕ ಗುರ್ದೀಪ್‌ ಸಿಂಗ್‌ ಅವರು ಸಂಸ್ಥೆಯ ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.!!

 ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?

ನವೆಂಬರ್‌ 21ಕ್ಕೆ ಡಿಟಿಎಚ್ ಡಿಟಿಎಚ್ ಸೇವೆಯನ್ನೂ ಸ್ಥಗಿತಗೊಳಿಸಲಾಗುವುದು ಎಂದು ಮೊದಲೇ ಹೇಳಿದ್ದ ರಿಲಯನ್ಸ್‌ಕಮ್ಯುನಿಕೇಷನ್ಸ್ ಇದೀಗ '2ಜಿ' ವಹಿವಾಟನ್ನು ಸ್ಥಗಿತಗೊಳಿಸುತ್ತಿದೆ.! 3ಜಿ ಮತ್ತು 4ಜಿ ವಹಿವಾಟು ಲಾಭದಾಯಕ ಆಗಿರುವವರೆಗೆ ಮುಂದುವರೆಸಲು ಮಾತ್ರ ಮುಂದಾಗಿರುವುದು ಸಂಸ್ಥೆಯ ಅಸ್ತಿತ್ವದ ಮೇಲೆಯೇ ಪ್ರಶ್ನೆ ಮೂಡಿದೆ.!!

 ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?

ತೀವ್ರ ಸ್ಪರ್ಧೆ ಇರುವ ಟೆಲಿಕಾಂನಲ್ಲಿ ವಲಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ರಿಲಯನ್ಸ್‌ಕಮ್ಯುನಿಕೇಷನ್ಸ್ ಮತ್ತು ಏರ್‌ಸೆಲ್‌ ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿಯೇ ವಿಲೀನ ಮಾತುಕತೆಗೆ ಚಾಲನೆ ನೀಡಿದ್ದವು. ಆದರೆ, ಇತ್ತೀಚಿನ ಬೆಳವಣಿಗಳನ್ನು ಗಮನಿಸಿದರೆ ರಿಲಯನ್ಸ್ ಕಮ್ಯುನಿಕೇಷನ್ಸ್ ಕಥೆ ಮುಗಿದುಹೋಗುವ ಸಂಭವ ಹೆಚ್ಚಿದೆ!!

ಓದಿರಿ: ಅಬ್ಬಾ..ಸೋನಿಯ ಈ ಪ್ರೊಜೆಕ್ಟರ್ ಬೆಲೆ 1,10,000ರೂ!!..ಅಂತಹದ್ದೇನಿದೆ?

Best Mobiles in India

English summary
The telecom operator RCom has also asked the majority of its employees to exit the company by November 30.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X