ಲೀಕ್ ಆಯ್ತು ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಇಲ್ಲಿದೇ ನೋಡಿ..!
ಇದೇ ನವೆಂಬರ್ 16ಕ್ಕೆ ಲಾಂಚ್ ಆಗಲಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5T ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದ್ದು, ಒನ್‌ಪ್ಲಸ್ 5T ಹೇಗಿದೆ ಎಂಬುದನ್ನು ತೋರಿಸುವ ಫೋಟೋವೊಂದು ಲೀಕ್ ಆಗಿದೆ. ಈ ಫೋನ್ ಬಾಕ್ಸ್‌ನಲ್ಲಿ ಏನಿದೆ ಎಂಬುದನ್ನು ತಿಳಿಸಿಕೊಡಲಿದೆ.

ಓದಿರಿ: ಜಿಯೋಗೆ ರೂ.399ಕ್ಕೆ ರಿಚಾರ್ಜ್ ಮಾಡಿಸಿ ರೂ.2599 ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ..?
ಈ ಸ್ಮಾರ್ಟ್‌ಫೋನ್ ನವೆಂಬರ್ 16ಕ್ಕೆ ನ್ಯೂಯಾರ್ಕ್‌ನಲ್ಲಿ ಲಾಂಚ್ ಆಗಲಿದೆ. ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಾಕ್ಸ್‌ನಲ್ಲಿ ಡಾಷ್ ಚಾರ್ಜರ್ ಹಾಗೂ ಡೇಟಾ ಕೇಬಲ್ ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದೆ. ಸದ್ಯ ಲೀಕ್ ಆಗಿರುವ ಫೋಟೋದಲ್ಲಿ ಇವುಗಳನ್ನು ನೋಡಬಹುದಾಗಿದೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಇದೇ:
ಒನ್‌ಪ್ಲಸ್ 5T ಫೋನ್‌ನಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಈ ಹಿಂದಿನ ಫೋನ್‌ನಲ್ಲಿದ್ದಂತೆ ಎಡಭಾಗದ ಮೂಲೆಯಲ್ಲಿ ಇಡಲಾಗಿದೆ. ಫೋನಿನ ಹಿಂಭಾಗದಲ್ಲಿ ಒನ್‌ಪ್ಲಸ್ ಲೋಗೊ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ.

18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇ:
ಒನ್‌ಪ್ಲಸ್ 5T ಫೋನ್ ಫೋಟೋದಲ್ಲಿ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ವಿನ್ಯಾಸವು ನೋಡಲು ಉತ್ತಮವಾಗಿದೆ. 6 ಇಂಚಿನ ಡಿಸ್‌ಪ್ಲೇ ಇದಾಗಿದೆ ವಿಡಿಯೋ ನೋಡಲು ಸಹ ಇದು ಸರಿಯಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗ:
ಈ ಹಿಂದಿನ ಫೋನ್‌ಗಳಲ್ಲಿ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗಕ್ಕೆ ಶಿಫ್ಟ್ ಮಾಡಿದೆ.

ಎರಡು ಆವೃತ್ತಿಯಲ್ಲಿ ದೊರೆಯಲಿದೆ:
ಒನ್‌ಪ್ಲಸ್ 5T ಫೋನ್ ಈಗಾಗಲೇ ತಿಳಿದಿರುವಂತೆ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 64GB ಮತ್ತೊಂದು 128GB ಯಲ್ಲಿ ಲಭ್ಯವಿದೆ. ಬೆಲೆಗಳು ಈ ಹಿಂದಿನ ಫೋನ್‌ಗಿಂತ ಸ್ಪಲ್ಪ ಜಾಸ್ತಿ ಇರಲಿದೆ ಎನ್ನಲಾಗಿದೆ.


Click it and Unblock the Notifications