ಜಿಯೋಗೆ ರೂ.399ಕ್ಕೆ ರಿಚಾರ್ಜ್ ಮಾಡಿಸಿ ರೂ.2599 ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ..?

Written By:

ರಿಲಯನ್ಸ್ ಮಾಲಿಕತ್ವದ ಜಿಯೋ ಈಗಾಗಲೇ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಹೊಸ ಹೊಸ ಆಕರ್ಷಕ ಆಫರ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಫೋನ್ ಮೂಲಕವೂ ಹೆಚ್ಚಿನ ಗ್ರಾಹಕನ್ನು ತನ್ನ ಬಳಿಗೆ ಸೆಳೆಯುಲು ಮುಂದಾಗಿದೆ. ಈಗ ಮತ್ತೊಂದು ಪ್ರಯತ್ನಕ್ಕೂ ಕೈ ಹಾಕಿದೆ.

ಜಿಯೋಗೆ ರೂ.399ಕ್ಕೆ ರಿಚಾರ್ಜ್ ಮಾಡಿಸಿ ರೂ.2599 ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ

ಓದಿರಿ: ಇನ್ನೂ ಶೇರ್‌ಇಟ್ ಬಳಸುತ್ತಿದ್ದೀರಾ..? ಸಾಕು ನಿಲ್ಲಿಸಿ, ಬಂದಿದೆ ಗೂಗಲ್ ಫೈಲ್ ಟು ಗೂ ಆಪ್..!!!

ತನ್ನ ಗ್ರಾಹಕರು ರೂ.399 ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ರಿಚಾರ್ಜ್ ಮಾಡಿಸಿದರೆ ರೂ. 2599 ರಷ್ಟು ಲಾಭವನ್ನು ಪಡೆದುಕೊಳ್ಳುವ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಹಿಂದೆ ಫುಲ್ ಕ್ಯಾಷ್ ಬ್ಯಾಕ್ ಆಫರ್ ನೀಡಿತ್ತು. ಅದೇ ಮಾದರಿಯಲ್ಲಿ ಈ ಬಾರಿ ಟ್ರಿಪಲ್ ಕ್ಯಾಷ್ ಬ್ಯಾಕ್ ಆಫರ್ ನೀಡಿದ್ದು, ಈ ಆಫರ್ ಲಾಭ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈ ಆಫರ್ ಪ್ರೀಪೇಯ್ಡ್ ಫ್ರೈಮ್ ಗ್ರಾಹಕರಿಗೆ ಮಾತ್ರ:

ಈ ಆಫರ್ ಪ್ರೀಪೇಯ್ಡ್ ಫ್ರೈಮ್ ಗ್ರಾಹಕರಿಗೆ ಮಾತ್ರ:

ಜಿಯೋ ಟ್ರಪಲ್ ಕ್ಯಾಷ್ ಬ್ಯಾಕ್ ಆಫರ್ ಕೇವಲ ಜಿಯೋ ಪ್ರೀಪೇಯ್ಡ್ ಪ್ರೈಮ್ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ. ಪೋಸ್ಟ್ ಪೇಯ್ಡ್ ಗ್ರಾಹಕರು ಮತ್ತು ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳದವರಿಗೆ ಈ ಆಫರ್ ಲಾಭ ದೊರೆಯುವುದಿಲ್ಲ ಎನ್ನಲಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಮೂರು ವಿಧದಲ್ಲಿ ಕ್ಯಾಷ್‌ಬ್ಯಾಕ್:

ಮೂರು ವಿಧದಲ್ಲಿ ಕ್ಯಾಷ್‌ಬ್ಯಾಕ್:

ಜಿಯೋ ತನ್ನ ಪ್ರೈಮ್ ಸದಸ್ಯರು ರೂ.399ಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿಸಿದವರಿಗೆ ಮೂರು ವಿಧದಲ್ಲಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಇದು ಯಾವುದು ಎಂಬುದನ್ನು ತಿಳಿದುಕೊಳ್ಳುವ.

ಮೊದಲ ವಿಭಾಗದಲ್ಲಿ:

ಮೊದಲ ವಿಭಾಗದಲ್ಲಿ:

ಜಿಯೋ ಮೊದಲ ವಿಭಾಗದಲ್ಲಿ ಎಂಟು ಹಂತದ ಕ್ಯಾಷ್ ಬ್ಯಾಕ್ ನೀಡಲಿದೆ. ಅದುವೇ ರೂ.400 (50x8) ಲಾಭವನ್ನು ಮಾಡಿಕೊಡಲಿದೆ. ಇದು ನವೆಂಬರ್ 15 ರಿಂದ ದೊರೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಮೈ ಜಿಯೋ ಆಪ್‌ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ಎರಡನೇ ವಿಭಾಗದಲ್ಲಿ:

ಎರಡನೇ ವಿಭಾಗದಲ್ಲಿ:

ಎರಡನೇ ವಿಭಾಗದಲ್ಲಿ ಜಿಯೋ ತನ್ನ ಡಿಜಿಟಲ್ ಪಾಟ್ನರ್ ಗಳ ಮೂಲಕ ರೀಚಾರ್ಜ್ ಮಾಡಿಸಿಕೊಂಡರೆ ರೂ. 300ರ ವರೆಗೂ ಕ್ಯಾಷ್ ಬ್ಯಾಕ್ ನೀಡಿದೆ. ಇವುಗಳನ್ನು ಈ ಕಾರ್ಮಸ್ ವೋಚರ್ ಗಳಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದು ಅಮೆಜಾನ್ ಪೇ, ಆಕ್ಸಿಸ್ ಪೇ, ಫ್ರೀಚಾರ್ಜ್, ಮೊಬಿಕ್ವೀಕ್, ಪೇಟಿಎಂ ಮತ್ತು ಫೋನ್ ಪೇ ಗಳಿಗೆ ಮಾತ್ರವೇ ಸೀಮಿತವಾಗಿದೆ.

ಮೂರನೇ ವಿಭಾಗ:

ಮೂರನೇ ವಿಭಾಗ:

ಈ ವಿಭಾಗದಲ್ಲಿ ಜಿಯೋ ತನ್ನ ಬಳಕೆದಾರರು ರೂ.1899ರ ವರೆಗೂ ವೋಚರ್ ಗಳನ್ನು ಪಡೆದುಕೊಳ್ಳಲಿದ್ದಾರೆ. ಇದು Ajio, ರಿಲಯನ್ಸ್ ಗ್ರೂಪ್ ಇ-ಕಾರ್ಮಸ್ ಸೈಟ್‌ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಕನಿಷ್ಠ ರೂ.1500ಕ್ಕೆ ಖರೀದಿಸಿದರೆ ಈ ವೋಚರ್ ಗಳು ಬಳಕೆಗೆ ದೊರೆಯಲಿದೆ.

ನವೆಂಬರ್ 15 ರಿಂದ 20ರ ವರೆಗೆ ಮಾತ್ರವೇ:

ನವೆಂಬರ್ 15 ರಿಂದ 20ರ ವರೆಗೆ ಮಾತ್ರವೇ:

ಜಿಯೋ ನೀಡಿರುವ ಈ ಆಫರ್ ನವೆಂಬರ್ 15 ರಿಂದ ಆರಂಭವಾಗಲಿದ್ದು, 20ನೇಯ ತಾರೀಖಿನವರೆಗೂ ಲಭ್ಯವಿರಲಿದೆ. ಈ ಸಮಯದಲ್ಲಿ ರೀಚಾರ್ಜ್ ಮಾಡಿಸಿದವರಿಗೆ ಮಾತ್ರವೇ ಜಿಯೋ ಕ್ಯಾಷ್ ಬ್ಯಾಕ್ ಆಫರ್ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Avail jio Benefits Worth Rs. 2,599. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot