Home
ಮೊಬೈಲ್

ಮಾರುಕಟ್ಟೆಯಲ್ಲಿ ಭಾರೀ ಸಂಚಲನ: ಲೀಕ್ ಆಯ್ತು ಒನ್‌ಪ್ಲಸ್‌ 6 ಬೆಲೆ ಮತ್ತು ರಿಲೀಸ್ ಡೇಟ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಹವಾ ಜೋರಾಗಿದೆ. ಈಗಾಗಲೇ ಒನ್‌ಪ್ಲನ್ 5T ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎನ್ನಲಾಗಿದ್ದು, ಒನ್‌ಪ್ಲಸ್ ಬಿಡುಗಡೆಯಾಗುವುದು ಖಚಿತವಾಗಿದೆ. ಅಲ್ಲದೇ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಎಂದು ಬಿಡುಗಡೆಯಾಗಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದಿದ್ದು, ಮೂಲಗಳು ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಬಿಡುಗಡೆಯ ಖಚಿತ ದಿನಾಂಕದ ಬಗ್ಗೆ ಮಾಹಿತಿಯನ್ನು ನೀಡಿವೆ.

ಲೀಕ್ ಆಯ್ತು ಒನ್‌ಪ್ಲಸ್‌ 6 ಬೆಲೆ ಮತ್ತು ರಿಲೀಸ್ ಡೇಟ್..!

ಕಳೆದ ಕೆಲವು ದಿನಗಳಿಂದ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಕುರಿತಂತೆ ಸಾಕಷ್ಟು ರೂಮರ್‌ಗಳು ಕೇಳಿ ಬರುತ್ತಿದ್ದು, ಮೊದಲು ಮೇ ಮೊದಲ ವಾರದಲ್ಲಿ ಈ ಸ್ಮಾರ್ಟ್‌ ಫೋನ್ ಲಾಂಚ್ ಆಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿತು. ಆದರೆ ಸದ್ಯ ನಿಖರವಾದ ದಿನಾಂಕವೇ ಪ್ರಕಟವಾಗಿದೆ. ಜೊತೆಗೆ ಬೆಲೆಯ ಬಗ್ಗೆಯೂ ಮಾಹಿತಿ ಲೀಕ್ ಆಗಿದೆ.

ಓದಿರಿ: ಈಗಾಗಲೇ ನಿಮ್ಮ ವಾಟ್ಸ್‌ಆಪ್ ಆಪ್‌ಡೇಟ್‌ ಮಾಡಿ..! ಬಂದಿದೆ ಟಾಪ್ ಫೀಚರ್..!

ಮೇ.16ಕ್ಕೆ ಲಾಂಚ್:

ಮೇ.16ಕ್ಕೆ ಲಾಂಚ್:

ಮಾರುಕಟ್ಟೆಯಲ್ಲಿ ಸಖತ್ ಹವಾ ಎಬ್ಬಿಸಿರುವ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಮೇ 16 ರಂದು ಲಾಂಚ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ ಅಂದಿನಿಂದ ಸೇಲ್ ಆಂಭವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಒಪ್‌ಪ್ಲಸ್ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಬೆಲೆಗಳು:

ಬೆಲೆಗಳು:

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 63GB ಆವೃತ್ತಿಯೂ ರೂ.34,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿ ರೂ.39,999ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಒನ್‌ಪ್ಲಸ್ 5T ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ ನೋಚ್:

ಡಿಸ್‌ಪ್ಲೇ ನೋಚ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6.28 ಇಂಚಿನ ಅಮೊಲೈಡ್ ಡಿಸ್‌ಪ್ಲೇ ಇದಾಗಿದೆ. 19:9 ಅನುಪಾತದಿಂದ ಕೂಡಿರಲಿದ್ದು, FHD+ ಗುಣಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಗೇಮ್ ಆಡಲು ಮತ್ತು ಗುಣಮಟ್ಟದ ವಿಡಿಯೋವನ್ನು ನೋಡಲು ಹೇಳಿ ಮಾಡಿಸಿದಂತಿರಲಿದೆ. ಅಲ್ಲದೇ ಬೇರೆ ಸ್ಮಾರ್ಟ್‌ಫೋನಿಗಿಂತ ಭಿನ್ನವಾದ ನೋಚ್ ಅನ್ನು ಮುಂಭಾಗದ ಡಿಸ್‌ಪ್ಲೇಯಲ್ಲಿ ನೀಡಿದೆ.

ಫೇಷಿಯಲ್ ರೆಕಗ್ನಿಷನ್:

ಫೇಷಿಯಲ್ ರೆಕಗ್ನಿಷನ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಫುಲ್‌ ಸ್ಕ್ರಿನ್ ಡಿಸ್‌ಪ್ಲೇಯಲ್ಲಿ ನೋಚ್ ಸಹ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಫೇಸ್‌ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 845 ಚಿಪ್‌ ಸೆಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 8GB RAM ಜೊತೆಗೆ ಲಭ್ಯವಿರಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, ಮುಂಭಾಗದಲ್ಲಿ ಫೇಷಿಯಲ್ ರೆಕಗ್ನೇಷನ್ ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ನೋಡಬಹುದಾಗಿದೆ.

What is Jio Cricket Gold Pass? How to Buy it
ಡ್ಯಾಚ್ ಚಾರ್ಜಿಂಗ್ :

ಡ್ಯಾಚ್ ಚಾರ್ಜಿಂಗ್ :

ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಇಂಟರ್ನೆಟ್ ಸೇವೆಗಾಗಿ X30 LTE ಮೊಡಮ್ ಅನ್ನು ಅಳವಡಿಸಲಾಗಿದ್ದು, ಇದು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಹಾಯವನ್ನು ಮಾಡಲಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಹೊಂದಿದ್ದು, ಆಕ್ಸಿಜನ್ OS ನೊಂದಿಗೆ ಡ್ಯಾಚ್ ಚಾರ್ಜಿಂಗ್ ನೊಂದಿಗೆ ಕಾಣಿಸಿಕೊಳ್ಳಲಿದೆ.

Best Mobiles in India

English summary
OnePlus 6 may launch in India on May 18 with price of Rs 39,999. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+