Subscribe to Gizbot

ಈಗಾಗಲೇ ನಿಮ್ಮ ವಾಟ್ಸ್‌ಆಪ್ ಆಪ್‌ಡೇಟ್‌ ಮಾಡಿ..! ಬಂದಿದೆ ಟಾಪ್ ಫೀಚರ್..!

Written By:

ಸುಮಾರು 250 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್, ತನ್ನ ಬಳಕೆದಾರರಿಗೆ ವಿವಿಧ ಆಯ್ಕೆಗಳನ್ನು ಬಳಕೆಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಒಮ್ಮೆಗೆ ಐದು ಹೊಸ ಫೀಚರ್ ಗಳನ್ನು ನೀಡಿದೆ. ಈಗಾಗಲೇ ಅತೀ ಹೆಚ್ಚು ಮಂದಿಯನ್ನು ಸೆಳೆದಿರುವ ವಾಟ್ಸ್‌ಆಪ್, ಮುಂದಿನ ದಿನದಲ್ಲಿ ಇನಷ್ಟು ಮಂದಿಯನ್ನು ತನ್ನ ಕಡೆಗೆ ಆಕರ್ಷಿಸಲು ಹೊಸ ಹೊಸ ಸಾಧ್ಯತೆಗಳನ್ನು ಹುಡುಕುತ್ತಿದೆ.

ಈಗಾಗಲೇ ನಿಮ್ಮ ವಾಟ್ಸ್‌ಆಪ್ ಆಪ್‌ಡೇಟ್‌ ಮಾಡಿ..! ಬಂದಿದೆ ಟಾಪ್ ಫೀಚರ್..!

ಫೇಸ್‌ಬುಕ್ ಒಡೆತನಕ್ಕೆ ಸೇರಿದ ಮೇಲೆ ವಾಟ್ಸ್‌ಆಪ್ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ನಂ 01 ಪಟ್ಟಕ್ಕೆ ಬಂದು ನಿಂತಿದೆ. ವಿಶ್ವದಲ್ಲಿ ಸುಮಾರು ಒಂದು ಬಿಲಿಯನ್ ಬಳಕೆದಾರರನ್ನು ವಾಟ್ಸ್‌ಆಪ್ ಹೊಂದಿದೆ. ಇಷ್ಟಾದರು ಬಳಕೆದಾರರ ಸೇವೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳದೇ, ದಿನಕ್ಕೊಂದು ಹೊಸ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ನೀಡಿರುವ ಹೊಸ ಆಯ್ಕೆಗಳು ಬಳಕೆದಾರರಿಗೆ ಅಚ್ಚರಿ ಮೂಡಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈ ಪ್ರಯಾರಿಟಿ ನೋಟಿಫಿಕೇಷನ್:

ಹೈ ಪ್ರಯಾರಿಟಿ ನೋಟಿಫಿಕೇಷನ್:

ಇದು ಹೊಸದಾಗಿ ವಾಟ್ಸ್‌ಆಪ್ ನೀಡಿರುವ ಆಯ್ಕೆಯಾಗಿದ್ದು, ಬೇರೆ ಯಾವುದೇ ಆಪ್‌ ಗಳು ಬಳಕೆದಾರರಿಗೆ ಈ ಮಾದರಿಯ ಸೇವೆಯನ್ನು ನೀಡಿಲ್ಲ ಎನ್ನಲಾಗಿದೆ. ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಅನ್ನು ಪಿನ್ ಟು ಟಾಪ್ ಮಾಡಿಕೊಳ್ಳುವ ಮಾದರಿಯಲ್ಲಿ ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಇಲ್ಲವೇ ಗ್ರೂಪ್ ನೋಷಿಫಿಕೇಷನ್ ಮೊದಲು ತೋರಿಸುವಂತೆ ಹೈ ಪ್ರಯಾರಿಟಿ ನೋಷಿಫಿಕೇಷನ್ ಇಟ್ಟು ಕೊಳ್ಳಬಹುದಾಗಿದೆ. ಇಂದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿದೆ.

ರಿಕ್ವೇಸ್ಟ್ ಮನಿ:

ರಿಕ್ವೇಸ್ಟ್ ಮನಿ:

ಇದಲ್ಲದೇ ಹೊಸದಾಗಿ ಕಾರ್ಯಚರಣೆಯನ್ನು ಆರಂಭಿಸಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ಹಣವನ್ನು ಕಳುಹಿಸುವ ಮಾದರಿಯಲ್ಲಿ ಹಣವನ್ನು ರಿಕ್ವೆಸ್ಟ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ವಾಟ್ಸ್‌ಆಪ್ ಸ್ನೇಹಿತರಿಗೆ ಹಣ ಕಳುಹಿಸುವಂತೆ ಮನವಿಯನ್ನು ಕಳುಹಿಸಬಹುದಾಗಿದೆ.

ಹಳೇ ಫೋಟೋಗಳ ಡೌನ್‌ಲೋಡ್:

ಹಳೇ ಫೋಟೋಗಳ ಡೌನ್‌ಲೋಡ್:

ಚಾಟಿಂಗ್‌ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್‌ಆಪ್ ನೀಡಿದೆ. ನಿಮ್ಮ ಎಲ್ಲಾ ವಿಡಿಯೋ, ಜಿಫ್ ಮತ್ತು ಫೋಟೋಗಳು ವಾಟ್ಸ್‌ಆಪ್ ತನ್ನ ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳಲಿದೆ. ನಿಮಗೆ ಬೇಕಾದ ಸಂದರ್ಭದಲ್ಲಿ ನೀವು ಮತ್ತೇ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವಾಯ್ಸ್ ರೆಕಾರ್ಡಿಂಗ್:

ವಾಯ್ಸ್ ರೆಕಾರ್ಡಿಂಗ್:

ಇದಲ್ಲದೇ ನೀವು ವಾಟ್ಸ್‌ಆಪ್‌ನಲ್ಲಿ ಯಾವುದಾದರು ವಾಯ್ಸ್ ರೆಕಾರ್ಡಿಂಗ್ ಕಳುಹಿಸಬೇಕಾದರೆ ಮೊದಲು ಬಟನ್ ಒತ್ತಿ ಹಿಡಿದು ರೆಕಾರ್ಡ್ ಮಾಡಬೇಕಾಗಿತ್ತು. ಆದರೆ ಈಗ ಆ ತೊಂದರೆ ಇಲ್ಲ. ಬದಲಾಗಿ ನೀವು ಒಮ್ಮೆ ರೆಕಾರ್ಡಿಂಗ್ ಒತ್ತಿ, ಮುಗಿದ ಮೇಲೆ ಮತ್ತೆ ಪ್ರೆಸ್ ಮಾಡಿದರೆ ಸಾಕು. ನಿಮ್ಮ ವಾಯ್ಸ್ ಸಂಫೂರ್ಣವಾಗಿ ರೆಕಾರ್ಡ್ ಆಗಲಿದೆ.

ನಂಬರ್ ಚೆಂಜ್ ಆದರೆ ತಿಳಿಸಲಿದೆ:

ನಂಬರ್ ಚೆಂಜ್ ಆದರೆ ತಿಳಿಸಲಿದೆ:

ನೀವು ವಾಟ್ಸ್‌ಆಪ್ ನಂಬರ್ ಬದಲಾಯಿಸಿದ ಸಂದರ್ಭದಲ್ಲಿ ನಿಮ್ಮ ಸ್ನೇಹಿತರಿಗೆ ಆ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ನೋಟಿಫಿಕೇಷನ್ ನೀಡುವ ಹೊಸ ಆಯ್ಕೆಯೊಂದನ್ನು ವಾಟ್ಸ್‌ಆಪ್ ನೀಡಿದೆ ಎನ್ನಲಾಗಿದೆ. ಬಳಕೆದಾರರಿಗೆ ಇದು ಹೊಸ ಮಾದರಿಯ ಸೇವೆಯಾಗಿದ್ದು, ಇದರಿಂದ ವಾಟ್ಸ್‌ಆಪ್ ಬಳಕೆ ಮತ್ತಷ್ಟು ಸುಲಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp Top new features on Android, iOS. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot